ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ 2021ನೇ ಸಾಲಿನ ಖಾಲಿ ಇರುವ ಸ್ಥಳೀಯ ಮತ್ತು ಮಿಕ್ಕುಳಿದ ವೃಂದಗಳ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಒಟ್ಟೂ ಖಾಲಿ ಇರುವ 545 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಇದಕ್ಕೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಏನೆಲ್ಲಾ ಅರ್ಹತೆಗಳನ್ನು ಹೊಂದಿರಬೇಕು? ಯಾವಾಗ ಹೇಗೆ ಅರ್ಜಿ ಸಲ್ಲಿಸಬೇಕು ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ 2021ನೇ ಸಾಲಿನ ನೇಮಕಾತಿ ಕುರಿತಂತೆ ಪ್ರಕಟಣೆ ಹೊರಡಿಸಿದೆ. ಸಬ್ ಇನ್ಸ್ ಪೆಕ್ಟರ್ ಹುದ್ದೆಗೆ ಅರ್ಹರಾದ ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಫೆಬ್ರವರಿ 22, 2021ರೊಳಗೆ ಸಲ್ಲಿಸಬಹುದು. ಸಂಸ್ಥೆ ಹೆಸರು: ಕರ್ನಾಟಕ ರಾಜ್ಯ ಪೊಲೀಸ್( KSP). ಹುದ್ದೆ ಹೆಸರು: ಸಬ್ ಇನ್ಸ್ ಪೆಕ್ಟರ್ (ಸಿವಿಎಲ್). ಮೇಲೆ ಹೇಳಿದಂತೆ ಒಟ್ಟೂ ಖಾಲಿ ಇರುವ ಹುದ್ದೆಗಳ ಸಂಖ್ಯೆ 545. ಇನ್ನು ಉದ್ಯೋಗ ಸ್ಥಳ ಕರ್ನಾಟಕ ಆಗಿದೆ. ಇನ್ನು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಇರಬೇಕಾದ ವಿದ್ಯಾರ್ಹತೆ ಏನೂ? ಎಂದು ನೋಡುವುದಾದರೆ , ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಪದವಿ ಪಡೆದಿರಬೇಕು. ಹಾಗೂ ಅಭ್ಯರ್ಥಿಗೆ ಕನಿಷ್ಠ 22 ವರ್ಷ ಹಾಗೂ ಗರಿಷ್ಠ 35 ವರ್ಷ ವಯಸ್ಸು ಆಗಿರಬೇಕು.
ಹಾಗೆಯೇ ಅರ್ಜಿಶುಲ್ಕದ ದರ ಸಾಮಾನ್ಯ ಅಭ್ಯರ್ಥಿ ಆಗಿದ್ದರೆ 500 ರೂಪಾಯಿ ಹಾಗೂ ಮೀಸಲು ಅಭ್ಯರ್ಥಿ ಆಗಿದ್ದರೆ 250 ರೂಪಾಯಿ ಅರ್ಜಿ ಶುಲ್ಕವನ್ನು ತುಂಬಬೇಕು. ನೇಮಕಾತಿ ಪ್ರಕ್ರಿಯೆ ಹೇಗೆ ಎಂದು ನೋಡುವುದಾದರೆ, ಲಿಖಿತ ಪರೀಕ್ಷೆ ನಡೆಯುವುದು ಹಾಗೂ ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಸಲಾಗುವುದು. ಪ್ರಮುಖ ದಿನಾಂಕಗಳನ್ನು ನೋಡುವುದಾದರೆ, ಅರ್ಜಿ ಸಲ್ಲಿಸಲು ಆರಂಭವಾದ ದಿನಾಂಕ 22/01/2021 ಹಾಗೂ ಅರ್ಜಿ ಸಲ್ಲಿಸಲು ಕೊನೆ ದಿನಾಂಕ 22/02/2021. ಅಂದರೆ ಜನವರಿ 22 ರಿಂದ ಆರಂಭವಾಗಿ ಫೆಬ್ರುವರಿ 22ಕ್ಕೇ ಅರ್ಜಿ ಸಲ್ಲಿಸಲು ಕೊನೆಯ ದಿನ ಆಗಿರುತ್ತದೆ. ಮೇಲೆ ಹೇಳಿದ ಎಲ್ಲಾ ಅರ್ಹತೆಗಳು ಇರುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹಾಗೆ ಶುಲ್ಕವನ್ನು ತುಂಬಲು ಕೊನೆಯ ದಿನಾಂಕ ಫೆಬ್ರವರಿ 24 ಆಗಿದ್ದು , ಅಧಿಕೃತ ಬ್ಯಾಂಕ್ ಶಾಖೆಗಳು ಮತ್ತು ಅಂಚೆ ಕಚೇರಿಗಳಲ್ಲಿ ಶುಲ್ಕವನ್ನು ತುಂಬಬಹುದು. ಖಾಲಿ ಹುದ್ದೆಗಳ ವರ್ಗೀಕರಣ ಹಾಗೂ ಷರತ್ತುಗಳಿಗೆ ಅಧಿಕೃತ ವೆಬ್ಸೈಟ್ www.recruitment.ksp.gov.in ನಲ್ಲಿ ಅಧಿಸೂಚನೆಗಳನ್ನು ನೋಡಬಹುದು.
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ www.ksp.gov.in ನಲ್ಲಿ ವಿವರಗಳನ್ನು ನೋಡಬಹುದಾಗಿದೆ. ಅರ್ಜಿ ಸಲ್ಲಿಸುವ ಮುನ್ನ ನೀಡಿರುವ ಸೂಚನೆಗಳನ್ನು ಗಮನವಿಟ್ಟು ಓದಿಕೊಳ್ಳುವಂತೆ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.