Karnataka Govt New Scheme: ಈಗಿನ ಕಾಲದಲ್ಲಿ ಒಂದು ಮನೆ ನಡೆಸಲು ಒಬ್ಬರು ಮಾತ್ರ ದುಡಿದರೆ ಸಾಕಾಗುವುದಿಲ್ಲ. ಮನೆಯ ಮುಖ್ಯಸ್ಥರಾದ ಇಬ್ಬರು ಕೂಡ ದುಡಿದು ಮನೆಯನ್ನು ನಡೆಸಿದರೆ ಬದುಕಿನ ಹಾದಿ ಸುಗಮವಾಗುತ್ತದೆ. ಹಾಗಾಗಿ ಸಿಟಿ, ಹಳ್ಳಿ ಎಲ್ಲಾ ಕಡೆಗಳಲ್ಲಿ ಹೆಣ್ಣುಮಕ್ಕಳು ಕೂಡ ಕೆಲಸಯಕ್ಕೆ ಹೋಗುವುದಕ್ಕೆ ಶುರು ಮಾಡಿದ್ದಾರೆ. ಮದುವೆಯಾಗಿ, ಮಗು ಇರುವ ಮಹಿಳೆಯರಿಗೆ ಮಕ್ಕಳನ್ನು ಬಿಟ್ಟು ಕೆಲಸಕ್ಕೆ ಹೋಗುವುದು ತುಂಬಾ ಕಷ್ಟ, ಹಾಗಾಗಿ ಸರ್ಕಾರ ಈಗ ಕೆಲಸಕ್ಕೆ ಹೋಗುವ ಹೆಣ್ಣುಮಕ್ಕಳಿಗೆ ಅನುಕೂಲ ಅಗುವಂಥ ಯೋಜನೆಯೊಂದನ್ನು ಜಾರಿಗೆ ತಂದಿದೆ.
ಈ ಯೋಜನೆಯ ಬಗ್ಗೆ 2023-24ರ ಸಾಲಿನ ಬಜೆಟ್ ನಲ್ಲಿ ಕೂಡ ಮಂಡಿಸಲಾಗಿತ್ತು, ಇದೀಗ ಈ ಯೋಜನೆಯನ್ನು ಜಾರಿಗೆ ತರುವ ತಯಾರಿ ನಡೆಸಲಾಗುತ್ತಿದೆ..ಈ ವಿಶೇಷ ಯೋಜನೆ ಏನು ಎಂದರೆ, ಹಳ್ಳಿಗಳಲ್ಲಿ ಕೂಲಿ ಮಾಡುವವರ ಮಕ್ಕಳಿಗೆ ಸಹಾಯ ಆಗುವ ಹಾಗೆ, ಕೂಸಿನ ಮನೆ ಶಿಶುಪಾಲನಾ ಕೇಂದ್ರವನ್ನು ತೆರೆಯುವ ಪ್ಲಾನ್ ಮಾಡಿದೆ ಸರ್ಕಾರ. ನರೇಗಾ ಯೋಜನೆಯಿಂದ ಹಳ್ಳಿಗಳ ಕಡೆಯ ಹೆಚ್ಚಿನ ಹೆಣ್ಣುಮಕ್ಕಳು ಈಗ ಕೆಲಸಕ್ಕೆ ಹೋಗುತ್ತಿದ್ದಾರೆ. ಹಾಗಾಗಿ ಅವರ 3 ವರ್ಷದ ಒಳಗಿನ ಮಕ್ಕಳನ್ನು ನೋಡಿಕೊಳ್ಳಲು ಕೂಸಿನ ಮನೆ ಶಿಶುಪಾಲನಾ ಕೇಂದ್ರವನ್ನು ಸ್ಥಾಪಿಸುವುದಾಗಿ ಸರ್ಕಾರ ತಿಳಿಸಿತ್ತು.
ಇನ್ನೇನು ಈ ಯೋಜನೆ ಜಾರಿಗೆ ಬರುವ ಸೂಚನೆ ಸಿಕ್ಕಿದೆ, ಕಳೆದ ಭಾನುವಾರ ಕಲಬುರ್ಗಿಯ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ ಕಲ್ಯಾಣ ಕರ್ನಾಟಕ ಉತ್ಸವ ಆಚರಣೆಯ ವೇಳೆ ರಾಜ್ಯದ ಮುಖ್ಯಮಂತ್ರಿಗಳು ಧ್ವಜಾರೋಹಣ ಮಾಡಿದ ಬಳಿಕ ಈ ಯೋಜನೆಯ ಬಗ್ಗೆ ಮಾತನಾಡಿದ್ದಾರೆ, ಇನ್ನು ಕೆಲವೇ ಸಮಯದಲ್ಲಿ ಈ ಪ್ರಯೋಜನ ಕಾರ್ಮಿಕರ ಮಕ್ಕಳಿಗೆ ಸಿಗುತ್ತದೆ ಎಂದು ತಿಳಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಕೂಸಿನ ಮನೆ ಶಿಶುಪಾಲನಾ ಕೇಂದ್ರದ ಲಾಂಛನವನ್ನು ಕೂಡ ಸಿಎಂ ಅವರು ಲಾಂಚ್ ಮಾಡಿದ್ದಾರೆ.
Karnataka Govt New Scheme
ಕೂಸಿನ ಮನೆ ಯೋಜನೆ ಬಗ್ಗೆ ಸಿಎಂ ಅವರು ಮಾತನಾಡಿ, ಈ ಯೋಜನೆಗಾಗಿ ಸರ್ಕಾರ 40 ಕೋಟಿ ರೂಪಾಯಿ ಅನುದಾನ ರಿಲೀಸ್ ಮಾಡಿದೆ. ಇನ್ನುಳಿದ ಹಾಗೆ ಕೂಸಿನ ಮನೆ ಶಿಶುಪಾಲನಾ ಕೇಂದ್ರ ನಡೆಸಲು ಬೇಕಾಗುವ ಜಾಗ, ಮತ್ತು ಸೌಕರ್ಯಗಳ ವೆಚ್ಚವನ್ನು ಡಿಪಾರ್ಟ್ಮೆಂಟ್ ಗೆ ಬರುವ ಮೂಲ ಸಂಪನ್ಮೂಲದಿಂದ ಅರೇಂಜ್ ಮಾಡಬೇಕು ಎಂದಿದ್ದಾರೆ. ಇದೇ ವಿಚಾರದ ಬಗ್ಗೆ ಗ್ರಾಮ್ ಪಂಚಾಯತ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾತನಾಡಿ, ಶಿಶುಪಾಲನಾ ಕೇಂದ್ರ ಶುರು ಮಾಡುವುದಕ್ಕೆ ಅಗತ್ಯವಿರುವ ಜಾಗ ಮತ್ತು ಸೌಲಭ್ಯವನ್ನು ನೀಡಲು ಆದೇಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಶಿಶುಪಾಲನಾ ಕೇಂದ್ರದ ಬಗ್ಗೆ ಕೆಲವು ಪ್ರಮುಖ ಮಾಹಿತಿಗಳನ್ನು ಶೇರ್ ಮಾಡಿದ್ದು, ನರೇಗಾ ಯೋಜನೆಯ ಜಾಬ್ ಕಾರ್ಡ್ ಪಡೆದು ಕೆಲಸಕ್ಕೆ ಹೋಗುತ್ತಿರುವ 22 ರಿಂದ 45 ವರ್ಷಗಳ ಒಳಗಿರುವ, 10 ಮಹಿಳಾ ಕೂಲಿ ಕಾರ್ಮಿಕರನ್ನು ಶಿಶುಪಾಲನಾ ಕೇಂದ್ರಕ್ಕೆ ಕೇರ್ ಟೇಕರ್ ಗಳಗೊ ಕೆಲಸಕ್ಕೆ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ. ಒಟ್ಟು 4000 ಶಿಶುಪಾಲನಾ ಕೇಂದ್ರಗಳು ನಿರ್ಮಾಣವಾಗಲಿದ್ದು, ಒಂದೊಂದು ಕೇಂದ್ರದಲ್ಲಿ ನರೇಗಾ ಯೋಜನೆಯ ಉದ್ಯೋಗ ಕಾರ್ಡ್ ಇರುವ 10 ಜನ ಕೇರ್ ಟೇಕರ್ ಗಳು ಇರಲಿದ್ದಾರೆ.
ಕೇರ್ ಟೇಕರ್ ಗಳಿಗೆ ಹೆಚ್ಚಿನ ವೇತನ ಕೊಡುವುದಿಲ್ಲ, ನರೇಗಾ ಯೋಜನೆಯಲ್ಲಿ ನಿಗದಿ ಆಗಿರುವ ಹಾಗೆ ದಿನಕ್ಕೆ 316 ರೂಪಾಯಿ ವೇತನ ಕೊಡಲಾಗುತ್ತದೆ. ಸರ್ಕಾರದ ನಿಯಮದ ಅನುಸಾರ ಶಿಶುಪಾಲನಾ ಕೇಂದ್ರದಲ್ಲಿ ಒಬ್ಬ ಮಹಿಳೆ 100 ದಿನಗಳ ಕಾಲ ಕೆಲಸ ಮಾಡಬೇಕು. 100 ದಿನಗಳ ಸಮಯ ಮುಗಿದ ಬಳಿಕ ಮತ್ತೊಬ್ಬ ಮಹಿಳೆ ಕೆಲಸ ಮಾಡಬೇಕು. ಹಾಗೂ ಕೆಲಸ ಮಾಡುವ ಮಹಿಳೆಯರಿಗೆ ಮೊಬೈಲ್ ಕ್ರಶ್ ದೆಹಲಿ ಇಂದ ಮಕ್ಕಳ ಪಾಲನೆ ಹೇಗೆ ಮಾಡಬೇಕು ಎನ್ನುವ ಬಗ್ಗೆ ತರಬೇತಿ ಕೊಡಲಾಗುತ್ತದೆ.
ಹಾಗೆಯೇ ಒಂದು ಶಿಶುಪಾಲನಾ ಕೇಂದ್ರದಲ್ಲಿ 3 ವರ್ಷದ ಒಳಗಿರುವ ಮ್ಯಾಕ್ಸಿಮಮ್ 25 ಮಕ್ಕಳನ್ನು ದಾಖಲಿಸಿಕೊಳ್ಳಬಹುದು ಎಂದು ಮಿತಿಯನ್ನು ಇಡಲಾಗಿದೆ. ಶಿಶುಪಾಲನಾ ಕೇಂದ್ರವನ್ನು ಅರುವರೆ ಗಂಟೆಗಳ ತೆರೆದಿರುತ್ತದೆ. ಇದು ಕಾರ್ಮಿಕರಿಗೆ ಅನುಕೂಲ ಅಗುವಂಥ ಸಮಯ ಆಗಿದ್ದು, ಶಿಶುಪಾಲನಾ ಕೇಂದ್ರಗಳು ಎಷ್ಟು ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಪಂಚಾಯಿತಿಗಳು ನಿರ್ಧಾರ ಮಾಡಲಿದೆ.