Karnataka Govt Housing Schemes: ನಮ್ಮ ದೇಶದಲ್ಲಿ ಕೋಟ್ಯಾಂತರ ಜನರಿಗೆ ಇರಲು ಸೂರಿಲ್ಲ, ನಿರ್ಗತಿಕರು, ಬಡವರು ಇಂದಿಗೂ ಪ್ರತಿದಿನ ಸಿಕ್ಕ ಸಿಕ್ಕ ಕಡೆಗಳಲ್ಲಿ ಮಲಗುವ ಪರಿಸ್ಥಿತಿ ಇದೆ. ಇನ್ನು ಹಲವರಿಗೆ ಸ್ವಂತ ಮನೆ ಮಾಡಿಕೊಳ್ಳುವಷ್ಟು ಅನುಕೂಲ ಇರುವುದಿಲ್ಲ. ಇದೀಗ ಅಂಥ ಜನರಿಗಾಗಿ ಸರ್ಕಾರ ಒಂದು ಯೋಜನೆಯನ್ನು ಜಾರಿಗೆ ತಂದಿದೆ. ಅದು ಪಿಎಮ್ ಆವಾಸ್ ಯೋಜನೆ ಆಗಿದೆ. ಈ ಯೋಜನೆಯ ಮೂಲಕ ಮನೆ ಇಲ್ಲದವರಿಗೆ ಹೊಸ ಮನೆ ಕೊಡುವಂಥ ಯೋಜನೆ ತಂದಿದೆ ಸರ್ಕಾರ.

ನಿರ್ಗತಿಕರು ತಮಗಾಗಿ ಒಂದು ಸೂರು ಮಾಡಿಕೊಳ್ಳಲು ಎಂದು ಸರ್ಕಾರವು ಕಲ್ಯಾಣ ಯೋಜನೆಗಳನ್ನು ಕೂಡ ಜಾರಿಗೆ ತಂದಿದೆ. ಪಿಎಮ್ ಆವಾಸ್ ಯೋಜನೆಯ ಮೂಲಕ ಮನೆ ಇಲ್ಲದವರಿಗೆ ಹೊಸ ಮನೆ ಹಂಚುವ ಪ್ಲಾನ್ ಸರ್ಕಾರದ್ದಾಗಿದೆ. ಕರ್ನಾಟಕ ಸರ್ಕಾರವು ಸ್ವಂತ ಮನೆ ಹೊಂದಲು ಬಯಸುತ್ತಿರುವವರಿಗೆ ಸಹಾಯ ಮಾಡುವುದಕ್ಕೆ ಮುಂದಾಗಿದೆ. ರಾಜ್ಯ ಸರ್ಕಾರದ ಈ ಯೋಜನೆಯ ಸೌಲಭ್ಯವನ್ನು ಬಡವರ್ಗದ ಜನರು ಪಡೆಯಬಹುದು.

ತಮ್ಮದೇ ಸ್ವಂತ ಮನೆ ಮಾಡಿಕೊಳ್ಳಬೇಕು ಎಂದು ಆಸೆ ಪಡುತ್ತಿರುವವರಿಗೆ ಸರ್ಕಾರವು 1 ಲಕ್ಷ ಸಹಾಯಧನ ನೀಡಬೇಕು ಎಂದು ನಿರ್ಧರಿಸಿದೆ. ಈ ಬಗ್ಗೆ ಸಚಿವ ಸಂಪುಟದಲ್ಲಿ ಕೂಡ ನಿರ್ಧಾರ ಆಗಿದೆ ಎಂದು ಹೇಳಲಾಗುತ್ತಿದೆ. ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯು 1.80 ಲಕ್ಷ ಮನೆಗಳನ್ನು ಫಲಾನುಭವಿಗಳಿಗೆ ವಿತರಿಸಲು, 4.5 ಲಕ್ಷ ಪಾವತಿ ಮಾಡಬೇಕು ಎಂದು ಹೇಳಿತ್ತು. ಆದರೆ ಈಗ ಈ ಮೊತ್ತವನ್ನು ಕೇವಲ 1 ಲಕ್ಧಕ್ಕೆ ಇಳಿಸಲಾಗಿದೆ. ಇನ್ನು 3.5 ಲಕ್ಷವನ್ನು ಸರ್ಕಾರವೇ ಭರಿಸುತ್ತದೆ ಎಂದು ಹೇಳಲಾಗುತ್ತಿದೆ.

ಫಲಾನುಭವಿಗಳು ಕೇವಲ 1 ಲಕ್ಷ ಪಾವತಿ ಮಾಡಿದ್ರೆ ಸಾಕು ಅವರಿಗೆ ಸ್ವಂತ ಮನೆ ಸಿಗುತ್ತದೆ. ಇದು ಪಿಎಮ್ ಆವಾಸ್ ಯೋಜನೆಯ ಭಾಗವೇ ಆಗಿದ್ದು, 4.5 ಲಕ್ಷದ ಬದಲಾಗಿ 1 ಲಕ್ಷ ಕಟ್ಟಿದರೆ ಸಾಕು ಸ್ವಂತ ಮನೆ ಪಡೆಯಬಹುದು. ಈ ಯೋಜನೆಯ ಮೊದಲ ಹಂತದಲ್ಲಿ 48,796 ಮನೆಗಳನ್ನು ಕಟ್ಟಿಸಲು ಸುಮಾರು 500 ಕೋಟಿ ರೂಪಾಯಿಗಳನ್ನು ಮೀಸಲಾಗಿ ಇಡಲಾಗಿದೆ. 5 ವರ್ಷಗಳಲ್ಲಿ ಮನೆಗಳ ನಿರ್ಮಾಣ ಪೂರ್ತಿಯಾಗುತ್ತದೆ ಎಂದು ವಸತಿ ಸಚಿವರಾದ ಜಮೀರ್ ಅಹ್ಮದ್ ಅವರು ತಿಳಿಸಿದ್ದಾರೆ..

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!