ನಮ್ಮ ಕರ್ನಾಟಕ ರಾಜ್ಯದಲ್ಲಿ ಇನ್ನೂ ಹಲವಾರು ಜನರಿಗೆ ವಾಸಿಸಲು ಮನೆ ಇಲ್ಲ ಎಂಬುದಾಗಿ ಇತ್ತೀಚಿನ ಸರ್ವೆಗಳಲ್ಲಿ ತಿಳಿದುಬಂದಿದೆ. ಹೀಗಾಗಿಯೇ ರಾಜ್ಯದ ಮುಖ್ಯಮಂತ್ರಿಗಳು ಆಗಿರುವ ಶ್ರೀ ಬಸವರಾಜ ಬೊಮ್ಮಾಯಿ ಅವರು ಈ ವಿಚಾರದ ಕುರಿತಂತೆ ನಿಗಾ ವಹಿಸಿ ಮನೆ ಇಲ್ಲದವರಿಗೆ ಉಚಿತ ಮನೆಯನ್ನು ನಿರ್ಮಾಣ ಮಾಡುವಂತಹ ಸೌಲಭ್ಯವನ್ನು ಮಾಡಿ ಕೊಡುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಸೇರಿದಂತೆ ರಾಜ್ಯದ ಹಲವಾರು ಪ್ರದೇಶಗಳಲ್ಲಿ ಈಗಾಗಲೇ 18 ಲಕ್ಷ ಉಚಿತ ಮನೆಗಳಿಗಾಗಿ ನೋಂದಾವಣೆ ಮಾಡಲಾಗಿದೆ. ಬರುವ ವರ್ಷದ ಒಳಗಡೆ ಈ ಎಲ್ಲಾ ನೋಂದಾವಣೆ ಮಾಡಿದವರಿಗೆ ಹಣ ಬರುತ್ತದೆ ಎಂಬುದಾಗಿ ಕೂಡ ಮುಖ್ಯಮಂತ್ರಿಗಳು ಈಗಾಗಲೇ ಹೇಳಿದ್ದಾರೆ. ಈಗಾಗಲೇ ತಮ್ಮ ಗ್ರಾಹಕಚೇರಿ ಆಗಿರುವ ಕೃಷ್ಣದಲ್ಲಿ ಮುಖ್ಯಮಂತ್ರಿಗಳು ಮುಂದಿನ ವರ್ಷದ ಫೆಬ್ರವರಿ ತಿಂಗಳ ಒಳಗಡೆಗಾಗಿ 7 ಲಕ್ಷ ಮನೆಗಳು ಸಂಪೂರ್ಣಗೊಳ್ಳಬೇಕು ಎಂಬ ಆದೇಶವನ್ನು ಕೂಡ ಹೊರಡಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ನಿಗದಿತ ಸಮಯದಲ್ಲಿ ಆಗಬೇಕಾಗಿರುವ ಎಲ್ಲಾ ಕೆಲಸಗಳು ಕೂಡ ಸಂಪೂರ್ಣವಾಗಿ ನಡೆಯಬೇಕು ಎಂಬುದಾಗಿ ಮುಖ್ಯಮಂತ್ರಿಗಳು ಹೇಳಿದ್ದು ಒಂದು ವೇಳೆ ಏನಾದರೂ ಸಮಸ್ಯೆ ನಡೆಯುತ್ತಿದ್ದರೆ ಆಯಾಯ ಜಿಲ್ಲೆಗಳಿಗೆ ಸರ್ಕಾರದ ಸಂಬಂಧಿತ ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಬೇಕು ಎಂಬುದಾಗಿ ಹೇಳಿದ್ದಾರೆ. ಇನ್ನು ಅರ್ಜಿ ಸಲ್ಲಿಕೆಗೆ ಡಿಸೆಂಬರ್ 31 ಕೊನೆಯ ದಿನಾಂಕ ಎಂಬುದಾಗಿ ಕೂಡ ಹೇಳಲಾಗಿದೆ.
ಬೆಂಗಳೂರು ಅಮೃತೋತ್ಸವ ಮನೆ ಯೋಜನೆ ಡಿಸೆಂಬರ್ 31ರವರೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಿದೆ. https://welfare.bbmpgov.in ನಲ್ಲಿ ಲಾಗಿನ್ ಆಗಿ ಉಚಿತವಾಗಿ ಅರ್ಜಿ ಸಲ್ಲಿಸಬಹುದು ಇಲ್ಲವಾದಲ್ಲಿ ಬೆಂಗಳೂರು ಒನ್ ಕಚೇರಿಯಲ್ಲಿ 30 ರೂಪಾಯಿಗಳನ್ನು ನೀಡುವ ಮೂಲಕ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಒಂದು ವೇಳೆ ನಿಮಗೆ ಮನೆ ಇಲ್ಲದಿದ್ದರೆ ಖಂಡಿತವಾಗಿ ಇದೊಂದು ಸುವರ್ಣ ಅವಕಾಶವಾಗಿದೆ ಎಂದು ಹೇಳಬಹುದಾಗಿದೆ.