Karnataka govt: ಇತ್ತೀಚಿಗಷ್ಟೇ ವಿಧಾನಸಭೆಯ ಚುನಾವಣೆಯಲ್ಲಿ ಬಹುಮತದಿಂದ ಆಯ್ಕೆಯಾದ ಕಾಂಗ್ರೆಸ್ ಸರ್ಕಾರವು ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವುದಾಗಿ ಮಾತು ನೀಡಿದ್ದು ಇದೀಗ ಆ ವಿಷಯದತ್ತ ನಿಧಾನ ಗತಿಯಲ್ಲಿ ಗಮನಹರಿಸುತ್ತಿದೆ ಈ ಗ್ಯಾರಂಟಿ ಯೋಜನೆಗಳ ಬಗ್ಗೆ ಎಷ್ಟೇ ಗಮನಹರಿಸದೆ ಅದನ್ನು ಹೊರತುಪಡಿಸಿ ಬೇರೆ ಯೋಜನೆಗಳ ಬಗ್ಗೆಯೂ ಕೂಡ ಕಾಂಗ್ರೆಸ್ ಸರ್ಕಾರ ಹೆಚ್ಚು ಒತ್ತು ನೀಡುತ್ತಿದ್ದು ಈಗಾಗಲೇ ಅವುಗಳನ್ನು ಜಾರಿಗೆ ತರಲು ತಯಾರಿ ನಡೆಸುತ್ತಿದೆ.

ಬಿಜೆಪಿಯಿಂದ ನಿರ್ಲಕ್ಷಗೊಂಡಿದ್ದಂತಹ ಇಂದಿರಾ ಕ್ಯಾಂಟೀನ್ ಇದೀಗ ಮತ್ತೆ ಓಪನ್ ಮಾಡುವ ಬಗ್ಗೆ ಮುಖ್ಯಮಂತ್ರಿಗಳು ಯೋಚನೆ ಮಾಡಿದ್ದು ರಾಜ್ಯದಲ್ಲಿ ಹಸಿವಿನಿಂದ ನೆರಳುತ್ತಿರುವ ಬಡ ಜನಗಳಿಗೆ ಹೊಟ್ಟೆ ತುಂಬಿಸುವ ಉದ್ದೇಶದಿಂದ ಈ ಯೋಜನೆಯನ್ನು ಮತ್ತೆ ಮುಂದುವರಿಸಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಇಂದಿರಾ ಕ್ಯಾಂಟೀನ್ ನಲ್ಲಿ ಸಿಗುವ ಆಹಾರವು ಬಡ ಜನರಿಗೆ ಕಡಿಮೆ ಬೆಲೆಯಲ್ಲಿ ದೊರಕಲಿದ್ದು ಉತ್ತಮ ಗುಣಮಟ್ಟವುಳ್ಳ ಮತ್ತು ಶುಚಿಯಾದ ಆಹಾರವಾಗಿರುತ್ತದೆ ಆದ್ದರಿಂದ ಇದರ ಫಲಾನುಭವಿಗಳು ಬಡಜನರಾಗಿರುತ್ತಾರೆ. ಇದೀಗ ಮತ್ತೆ ಇಂದಿರಾ ಕ್ಯಾಂಟೀನ್ ತೆರೆಯುವ ಮುಖಾಂತರ ಹಸಿದವರಿಗೆ ಬಡ ಕಾರ್ಮಿಕರಿಗೆ ಸಿಹಿ ಸುದ್ದಿ ಕೇಳಿ ಬಂದಿದೆ.

ಇದಷ್ಟೇ ಅಲ್ಲದೆ ಸರ್ಕಾರಿ ಶಾಲೆಗಳಿಗೆ ಪೂರೈಕೆ ಆಗುತ್ತಿರುವ ಮೂಲಭೂತ ಅವಶ್ಯಕತೆಗಳು ಬಿಜೆಪಿ ಸರ್ಕಾರದಿಂದ ನಿರ್ಲಕ್ಷಗೊಂಡಿದೆ ಎಂದು ಹೇಳಿದ ಕಾಂಗ್ರೆಸ್ ಸರ್ಕಾರ ಈ ಬಾರಿ ಒಂದು ಮಹತ್ವದ ನಿರ್ಧಾರವನ್ನ ಕೈಗೊಂಡಿದೆ ಈಗಷ್ಟೇ 2023 24 ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭಗೊಂಡಿದ್ದು ತರಗತಿಗಳು ಕೂಡ ಪ್ರಾರಂಭವಾಗುತ್ತಿವೆ.

ಈ ನಿಟ್ಟಿನಲ್ಲಿ ಒಂದರಿಂದ 10ನೇ ತರಗತಿಯ ವರೆಗಿನ ಎಲ್ಲಾ ಮಕ್ಕಳಿಗೂ ಕೂಡ ಅವರವರಿಗೆ ದೊರಕಬೇಕಾದಂತಹ ಉಚಿತ ಸೌಲಭ್ಯಗಳನ್ನ ಕಡ್ಡಾಯವಾಗಿ ವಿತರಣೆ ಮಾಡಲು ಸರ್ಕಾರ ಆದೇಶ ಹೊರಡಿಸಿದೆ ಅಷ್ಟೇ ಅಲ್ಲದೆ ಮಕ್ಕಳ ವಿಶೇಷ ಕಾಳಜಿಯಿಂದ ಸರ್ಕಾರಿ ಶಾಲೆಗಳ ಬಿಸಿಯೂಟ ವ್ಯವಸ್ಥೆಯ ಬಗ್ಗೆಯೂ ಕೂಡ ಅತಿ ಹೆಚ್ಚಿನ ಗಮನವನ್ನು ವಹಿಸಿ ಮಕ್ಕಳ ಆರೋಗ್ಯವನ್ನು ಕಾಪಾಡುವಲ್ಲಿ ಸಾಕ್ಷಿಯಾಗಲಿದೆ.

ವಿಶೇಷವಾಗಿ ವಿದ್ಯಾರ್ಥಿಗಳಿಗೆ ಅವಶ್ಯಕವಾಗಿರುವ ಸ್ಕಾಲರ್ಶಿಪ್ ವ್ಯವಸ್ಥೆಯನ್ನು ಕೂಡ ಶಿಸ್ತು ಬದ್ಧಾಗಿ ಈ ಬಾರಿ ನೆರವೇರಿಸಲಿದ್ದು ಒಂದರಿಂದ 10ನೇ ತರಗತಿ ಹಾಗೂ ಪಿಯುಸಿ ಮತ್ತು ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಎಸ್ ಎಸ್ ಪಿ ಪೋರ್ಟಲ್ ಮೂಲಕ ಸ್ಕಾಲರ್ಶಿಪ್ ಅಪ್ಲೈ ಮಾಡಿ ಮಾಡಲು ಅವಕಾಶ ಕಲ್ಪಿಸಿದೆ ಇದರ ಜೊತೆಗೆ ಎಂಟನೇ ತರಗತಿಯ ಮಕ್ಕಳಿಗೆ ನೀಡುತ್ತಿದ್ದ ಸೈಕಲ್ ಬಜೆಟ್ ಇಲ್ಲ ಎಂಬ ಕಾರಣದಿಂದ ಸ್ಥಗಿತಗೊಂಡಿತು ಈ ವ್ಯವಸ್ಥೆಯನ್ನು ಕೂಡ ಕಾಂಗ್ರೆಸ್ ಸರ್ಕಾರ ಮುಂದುವರೆಸಲು ಯೋಜಿಸಿದೆ. ಕೇವಲ ಗ್ಯಾರಂಟಿ ಕಾರ್ಡ್ ಯೋಜನೆಗಳಷ್ಟೇ ಅಲ್ಲದೆ ಸರ್ಕಾರ ಬೇರೆ ಬೇರೆ ಯೋಜನೆಗಳ ಬಗ್ಗೆಯೂ ಗಮನಹರಿಸಿರುವುದು ಖುಷಿಯ ಸಂಗತಿಯಾಗಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!