Kannada News Hassana: ಈಗಿನ ಕಾಲದಲ್ಲಿ ಸಂಸಾರ, ದಾಂಪತ್ಯ ಎನ್ನುವ ಪದದ ಅರ್ಥವೇ ಬದಲಾಗುತ್ತಿದೆ. ಬಹಳಷ್ಟು ಜನರು ಮದುವೆಯಾದ ನಂತರ ತಮ್ಮ ಸಂಗಾತಿಗೆ ವಿಧೇಯವಾಗಿರದೆ ಮತ್ತೊಬ್ಬರ ಸಹವಾಸ ಮಾಡಿ, ಕುಟುಂಬವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಹುಡುಗರು ಬೇರೆ ಮಹಿಳೆಯರ ಜೊತೆಗೆ, ಮಹಿಳೆಯರು ಪರಪುರುಷನ ಜೊತೆಗೆ ಕೆಟ್ಟ ಸಂಬಂಧ ಇಟ್ಟುಕೊಂಡು ಇಂಥ ಕೆಲಸ ಮಾಡಿ ತಮ್ಮ ಸಂಸಾರವನ್ನೇ ನಾಶ ಮಾಡಿಕೊಳ್ಳುತ್ತಿದ್ದಾರೆ.
ಇಂಥದ್ದೇ ಒಂದು ಘಟನೆ ಇತ್ತೀಚೆಗೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಹಾಸನ ಜಿಲ್ಲೆಯ ರಾಜಕುಮಾರ್ ನಗರದಲ್ಲಿ ನಡೆದಿರುವ ಘಟನೆ ಇದಾಗಿದೆ. ಇಲ್ಲಿ ಶಬನಮ್ ಸುಲ್ತಾನ ಎನ್ನುವ ಮಹಿಳೆಯ ಜೊತೆಗೆ ಇರ್ಫಾನ್ ಎನ್ನುವ ವ್ಯಕ್ತಿಯ ಮದುವೆಯಾಗಿತ್ತು. ಈಗ ಈಕೆಗೆ 30 ವರ್ಷ. ಇವರಿಬ್ಬರ ಮದುವೆ 11 ವರ್ಷಗಳ ಹಿಂದೆ ನಡೆದಿತ್ತು, ಹಾಗೆಯೇ ಇವರಿಬ್ಬರಿಗೆ 2 ಮಕ್ಕಳು ಕೂಡ ಇದೆ.
ಆದರೆ ಈಕೆಗೆ ಇಸ್ಮಾಯಿಲ್ ಎನ್ನುವ ಮತ್ತೊಬ್ಬ ವ್ಯಕ್ತಿಯ ಪರಿಚಯವಾಗುತ್ತದೆ. ಆಗಿನಿಂದಲೇ ಇವರ ಸಂಸಾರದಲ್ಲಿ ಸಮಸ್ಯೆ ಶುರುವಾಗಿದ್ದು, ಇಸ್ಮಾಯಿಲ್ ಜೊತೆಗೆ ಮೊದಲು ಸ್ನೇಹ ಶುರುವಾಗಿ ನಂತರ ಅವರಿಬ್ಬರು ಜೊತೆಯಾಗಿ ಎಲ್ಲಾ ಕಡೆ ಓಡಾಡುವುದಕ್ಕೆ ಶುರು ಮಾಡುತ್ತಾರೆ. ಹಾಗೆಯೇ ಇವರ ನಡುವೆ ಅಕ್ರಮ ಸಂಬಂಧ ಕೂಡ ಶುರುವಾಗುತ್ತದೆ. ಕೊನೆಗೆ ಆಕೆ ಇಸ್ಮಾಯಿಲ್ ಜೊತೆಗೆ ಮನೆ ಬಿಟ್ಟು ಓಡಿ ಹೋಗುತ್ತಾಳೆ.
ಈ ವಿಚಾರ ಗೊತ್ತಾದ ನಂತರ ಇರ್ಫಾನ್ ದೂರು ನೀಡಿ, ಆಕೆಯನ್ನು ಹುಡುಕಿ ಕರೆದುಕೊಂಡು ಬರುತ್ತಾರೆ. ಬೈದು ಬುದ್ಧಿ ಹೇಳಿ, ಪಂಚಾಯಿತಿ ಮಾಡಿ ಆಕೆ ಗಂಡನ ಮನೆಯಲ್ಲಿ ಇರಬೇಕು ಎಂದು ತೀರ್ಮಾನ ಮಾಡಲಾಗುತ್ತದೆ. ಆಕೆ ಗಂಡನ ಮನೆಯಲ್ಲಿರುತ್ತಾಳೆ ಆದರೆ ಇಸ್ಮಾಯಿಲ್ ಸುಮ್ಮನಿರುವುದಿಲ್ಲ ಆಕೆ ತನ್ನೊಡನೆ ಸಂಬಂಧ ಹೊಂದಿರಬೇಕು ಎಂದು ಕಾಟ ಕೊಡುವುದಕ್ಕೆ ಶುರು ಮಾಡುತ್ತಾನೆ.
ಆಕೆ ಒಪ್ಪಲಿಲ್ಲ ಎಂದರೆ ತನ್ನ ಬಳಿ ಇರುವ ಆಕೆಯ ಪ್ರೈವೇಟ್ ಫೋಟೋ ಮತ್ತು ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತೇನೆ ಎಂದು ಹೆದರಿಸುತ್ತಾನೆ. ಇದರಿಂದ ಭಯಗೊಂಡ ಶಬನಮ್ ಸುಲ್ತಾನ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಹಾಕಿಕೊಂಡು ಪ್ರಾಣ ಕಳೆದುಕೊಂಡಿದ್ದಾಳೆ. ಈ ಘಟನೆ ಈಗ ಹಾಸನದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ Gruhalakshmi Scheme: ಗೃಹಲಕ್ಷ್ಮಿ ಯೋಜನೆಯ 2ನೇ ಕಂತಿನ ಹಣ ಸಿಗೋದು ಯಾವಾಗ? ಇಲ್ಲಿದೆ ಖಚಿತ ಮಾಹಿತಿ