July 2024 Job Notification: ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿ ಇರುವ ಜನರಿಗೆ ಇದು ಸುವರ್ಣ ಅವಕಾಶ. ಆಸಕ್ತಿ ಮತ್ತು ಅರ್ಹತೆ ಇರುವ ಅಭ್ಯರ್ಥಿಗಳು ಸರ್ಕಾರಿ ಕೆಲಸಕ್ಕೆ ಅರ್ಜಿಗಳನ್ನು ಸಲ್ಲಿಕೆ ಮಾಡಬಹುದು. ಜುಲೈ ತಿಂಗಳಿನಲ್ಲಿ ಇರುವ ವಿವಿಧ ಸರ್ಕಾರಿ ಹುದ್ದೆಗಳ ಬಗ್ಗೆ ತಿಳಿಯೋಣ ಬನ್ನಿ.

ಜಿಲ್ಲಾ ನ್ಯಾಯಾಲಯದಲ್ಲಿ ನೇಮಕಾತಿ
ಹುದ್ದೆಗಳ ಹೆಸರು ಬೆರಳಚ್ಚುಗಾರ, ಬೆರಳಚ್ಚು ನಕಲುಗಾರ, ಆದೇಶ ಜಾರಿಕಾರ.
ಒಟ್ಟು 26 ಹುದ್ದೆಗಳು ಖಾಲಿ ಇದೆ, ಉದ್ಯೋಗದ ಸ್ಥಳ ಉತ್ತರ ಕನ್ನಡ, ವಿದ್ಯಾ ಅರ್ಹತೆ 10 ನೇ ತರಗತಿ ಮತ್ತು ದ್ವಿತೀಯ ಪಿಯುಸಿ ಉತ್ತೀರ್ಣರಾಗಿ ಇರಬೇಕು. ವಯೋಮಿತಿ ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ. ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಯ ( SC/ST ) ಜನರಿಗೆ ಐದು ವರ್ಷಗಳ ವಯೋಮಿತಿ ಸಡಿಲಿಕೆ ಇದೆ. ಓಬಿಸಿ ( OBC ) ಅಭ್ಯರ್ಥಿಗಳಿಗೆ ಮೂರು ವರ್ಷಗಳ ವಯೋಮಿತಿ ಸಡಿಲಿಕೆ ಇದೆ. ವೇತನ ಶ್ರೇಣಿ ಮಾಸಿಕವಾಗಿ ₹ 19,950 – ₹ 42,000. ಆಯ್ಕೆ ಮಾಡುವ ವಿಧಾನ ಅರ್ಹತಾ ಪರೀಕ್ಷೆ ಮತ್ತು ಸಂದರ್ಶನ ನಡೆಸಿ ಆಯ್ಕೆ ಮಾಡುವರು. ಅರ್ಜಿಗಳನ್ನು ಆನ್ಲೈನ್ ಮೂಲಕ ಸಲ್ಲಿಕೆ ಮಾಡಬೇಕು. ಅರ್ಜಿ ಶುಲ್ಕ ಸಾಮಾನ್ಯ ಅಭ್ಯರ್ಥಿಗಳಿಗೆ ₹ 300, ಹಿಂದುಳಿದ ವರ್ಗ ₹ 150, ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ( SC/ST ) ಅಂಗವಿಕಲ ಅಭ್ಯರ್ಥಿಗಳಿಗೆ ₹ 100. ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ 19/07/2024.

ಗ್ರಾಮ ಪಂಚಾಯಿತಿಯಲ್ಲಿ ನೇಮಕಾತಿ
ಹುದ್ದೆಯ ಹೆಸರು ಗ್ರಾಮ ಪಂಚಾಯಿತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರಕರು. ಒಟ್ಟು ಹುದ್ದೆಗಳ ಸಂಖ್ಯೆ 16, ಉದ್ಯೋಗದ ಸ್ಥಳ ದಾವಣಗೆರೆ ಜಿಲ್ಲೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವುದಕ್ಕೆ ದ್ವಿತೀಯ ಪಿಯುಸಿ ಉತ್ತೀರ್ಣರಾಗಿ ಇರಬೇಕು.
ವಯೋಮಿತಿ ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ. ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಯ ( SC/ST ) ಜನರಿಗೆ ಐದು ವರ್ಷಗಳ ವಯೋಮಿತಿ ಸಡಿಲಿಕೆ ಇದೆ. ಓಬಿಸಿ ( OBC ) ಅಭ್ಯರ್ಥಿಗಳಿಗೆ ಮೂರು ವರ್ಷಗಳ ವಯೋಮಿತಿ ಸಡಿಲಿಕೆ ಇದೆ.
ವೇತನ ಶ್ರೇಣಿ ₹ 15,000. ಆಯ್ಕೆ ಮಾಡುವ ವಿಧಾನ ಮೆರಿಟ್ ಮತ್ತು ರೋಸ್ಟರ್ ಮೀಸಲಾತಿ ಆಧಾರದ ಮೇಲೆ ಆಯ್ಕೆ ಮಾಡುವರು. ಆಸಕ್ತಿ ಇರುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಕೆ ಮಾಡಬೇಕು. ಅರ್ಜಿ ಶುಲ್ಕ ಸಾಮಾನ್ಯ ಅಭ್ಯರ್ಥಿಗಳಿಗೆ ₹ 500, ಹಿಂದೆ ಉಳಿದ ವರ್ಗಕ್ಕೆ ₹ 300, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ( SC/ST ) ಹಾಗು ಮಾಜಿ ಸೈನಿಕರಿಗೆ ₹2 00, ಅಂಗವಿಕಲರಿಗೆ ₹ 100. ಅರ್ಜಿ ಸಲ್ಲಿಕೆ ಮಾಡುವ ಕೊನೆಯ ದಿನಾಂಕ 20/07/2024.

ರೈಲ್ವೆ ಇಲಾಖೆ ನೇಮಕಾತಿ
ಹುದ್ದೆಯ ಹೆಸರು ಅಪ್ಪ್ರೆಂಟಿಸ್, ಒಟ್ಟು 1,104 ಹುದ್ದೆ ಖಾಲಿ ಇದೆ. ಉದ್ಯೋಗ ಮಾಡುವ ಸ್ಥಳ ಭಾರತದ ಎಲ್ಲೆಡೆ. ವಿದ್ಯಾ ಅರ್ಹತೆ 10 ನೇ ತರಗತಿ ಜೊತೆಗೆ ಐಟಿಐ. ವಯೋಮಿತಿ ಕನಿಷ್ಠ 15 ವರ್ಷ ಮತ್ತು ಗರಿಷ್ಠ 24 ವರ್ಷ. ಗಳಿಕೆ ಮಾಡಿದ ಅಂಕದ ಆಧಾರದ ಮೇಲೆ ಆಯ್ಕೆ ಮಾಡುವರು. ಆಸಕ್ತಿ ಇರುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಕೆ ಮಾಡಬೇಕು.
ಅರ್ಜಿ ಶುಲ್ಕ ಅಭ್ಯರ್ಥಿಗಳಿಗೆ ₹ 100. ಅರ್ಜಿ ಸಲ್ಲಿಕೆ ಮಾಡುವ ಕೊನೆಯ ದಿನಾಂಕ 11/07/2024.

ಸ್ಟಾಫ್ ಸೆಲೆಕ್ಷನ್ ನೇಮಕಾತಿ
ಹುದ್ದೆಯ ಹೆಸರು ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹವಾಲ್ದಾರ್, ಹುದ್ದೆಗಳ ಸಂಖ್ಯೆ ಒಟ್ಟು 8,326 ಖಾಲಿ ಇದೆ, ಉದ್ಯೋಗದ ಸ್ಥಳ ಭಾರತದ ಎಲ್ಲೆಡೆ, ವಿದ್ಯಾರ್ಹತೆ 10 ನೇ ತರಗತಿ ಪಾಸ್ ಆಗಿರಬೇಕು. ವಯೋಮಿತಿ ಕನಿಷ್ಠ 18 ವರ್ಷ ಮತ್ತು ಗರಿಷ್ಠ 25 ವರ್ಷ. ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಯ ( SC/ST ) ಜನರಿಗೆ ಐದು ವರ್ಷಗಳ ವಯೋಮಿತಿ ಸಡಿಲಿಕೆ ಇದೆ. ಓಬಿಸಿ ( OBC ) ಅಭ್ಯರ್ಥಿಗಳಿಗೆ ಮೂರು ವರ್ಷಗಳ ವಯೋಮಿತಿ ಸಡಿಲಿಕೆ ಇದೆ. ಆಯ್ಕೆ ಮಾಡುವ ವಿಧಾನ ಕಂಪ್ಯೂಟರ್ ಆಧಾರಿತ ಪರೀಕ್ಷೆ , ದೈಹಿಕ ಪರೀಕ್ಷೆ ಹಾಗು ದಾಖಲೆಗಳ ಪರಿಶೀಲನೆ ನಡೆಸಿ ಆಯ್ಕೆ ಮಾಡುವರು. ಆಸಕ್ತಿ ಇರುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಕೆ ಮಾಡಬೇಕು. ಅರ್ಜಿ ಶುಲ್ಕ ಅಭ್ಯರ್ಥಿಗಳಿಗೆ ₹100. ಅರ್ಜಿ ಸಲ್ಲಿಕೆ ಮಾಡುವ ಕೊನೆಯ ದಿನಾಂಕ 31/07/2024.

ಮಹಾನಗರ ಪಾಲಿಕೆಗಳಲ್ಲಿ ನೇಮಕಾತಿ
ಹುದ್ದೆಯ ಹೆಸರು ಪ್ರಥಮ ದರ್ಜೆ ಕಂದಾಯ ನಿರೀಕ್ಷಕರು ಮತ್ತು ದ್ವಿತೀಯ ದರ್ಜೆ ಸಹಾಯಕ. ಒಟ್ಟು 2 ಹುದ್ದೆಗಳು ಖಾಲಿ ಇದೆ. ಉದ್ಯೋಗದ ಸ್ಥಳ ಬೆಳಗಾವಿ ಮತ್ತು ಕಲ್ಬುರ್ಗಿ. ವಿದ್ಯಾರ್ಹತೆ ದ್ವಿತೀಯ ಪಿಯುಸಿ ಉತ್ತೀರ್ಣರಾಗಿ ಇರಬೇಕು.
ವಯೋಮಿತಿ ಗರಿಷ್ಠ 40 ವರ್ಷ. ವೇತನ ಶ್ರೇಣಿ ₹ 21,400 – ₹ 52,650. ಆಯ್ಕೆ ಮಾಡುವ ವಿಧಾನ ವಿದ್ಯಾ ಅರ್ಹತೆಯ ಅನುಸಾರ ಗಳಿಸಿರುವ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡುವರು. ಆಸಕ್ತಿ ಇರುವ ಅಭ್ಯರ್ಥಿಗಳು ಆಫ್’ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಕೆ ಮಾಡಬೇಕು. ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಅರ್ಜಿ ಸಲ್ಲಿಕೆ ಮಾಡುವ ಕೊನೆಯ ದಿನಾಂಕ 20/07/2024.

ಮೈಸೂರು ಮಹಾನಗರ ಪಾಲಿಕೆಯ ನೇಮಕಾತಿ
ಹುದ್ದೆಯ ಹೆಸರು ಪೌರಕಾರ್ಮಿಕರು, ಒಟ್ಟು ಹುದ್ದೆಗಳ ಸಂಖ್ಯೆ 252. ಉದ್ಯೋಗ ಸ್ಥಳ ಮೈಸೂರು ಜಿಲ್ಲೆ. ಆಸಕ್ತಿ ಇರುವ ಜನರು ಅರ್ಜಿಗಳನ್ನು ಸಲ್ಲಿಕೆ ಮಾಡಬಹುದು. ವಯೋಮಿತಿ ಕನಿಷ್ಠ 18 ವರ್ಷ ಮತ್ತು ಗರಿಷ್ಠ 55 ವರ್ಷ. ವೇತನ ಶ್ರೇಣಿ ₹ 17,000 – ₹ 28,950. ಆಸಕ್ತಿ ಇರುವ ಅಭ್ಯರ್ಥಿಗಳು ಆಫ್’ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. ಅರ್ಜಿ ಸಲ್ಲಿಕೆ ಮಾಡುವ ವಿಳಾಸ ಮೈಸೂರು ಮಹಾನಗರ ಪಾಲಿಕೆ, ಮೈಸೂರು. ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಅರ್ಜಿ ಸಲ್ಲಿಕೆ ಮಾಡುವ ಕೊನೆಯ ದಿನಾಂಕ 18/07/2024.

ಸ್ಟಾಫ್ ಸೆಲೆಕ್ಷನ್ ಕಮಿಷನ್ ನೇಮಕಾತಿ
ಹುದ್ದೆಯ ಹೆಸರು ಗ್ರೂಪ್ ಬಿ ಮತ್ತು ಗ್ರೂಪ್ ಸಿ, ಒಟ್ಟು ಹುದ್ದೆಗಳ ಸಂಖ್ಯೆ 17,727 ಹುದ್ದೆಗಳು. ಉದ್ಯೋಗ ಮಾಡುವ ಸ್ಥಳ ಭಾರತದ ಎಲ್ಲೆಡೆ. ವಿದ್ಯಾರ್ಹತೆ ಪದವಿ ಉತ್ತೀರ್ಣರಾಗಿ ಇರಬೇಕು. ವಯೋಮಿತಿ ಕನಿಷ್ಠ 18 ವರ್ಷ ಮತ್ತು ಗರಿಷ್ಠ 27 ವರ್ಷ. ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಯ ( SC/ST ) ಜನರಿಗೆ ಐದು ವರ್ಷಗಳ ವಯೋಮಿತಿ ಸಡಿಲಿಕೆ ಇದೆ. ಓಬಿಸಿ ( OBC ) ಅಭ್ಯರ್ಥಿಗಳಿಗೆ ಮೂರು ವರ್ಷಗಳ ವಯೋಮಿತಿ ಸಡಿಲಿಕೆ ಇದೆ. ವೇತನ ಶ್ರೇಣಿ ₹ 25,500 – ₹ 1,42,400. ಆಯ್ಕೆ ಮಾಡುವ ವಿಧಾನ ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಮತ್ತು ದಾಖಲೆಗಳ ಪರಿಶೀಲನೆ ನಡೆಸಿ ಆಯ್ಕೆ ಮಾಡುವರು. ಆಸಕ್ತಿ ಇರುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಕೆ ಮಾಡಬೇಕು. ಅರ್ಜಿ ಶುಲ್ಕ ಅಭ್ಯರ್ಥಿಗಳಿಗೆ ₹ 100.
ಅರ್ಜಿ ಸಲ್ಲಿಕೆ ಮಾಡುವ ಕೊನೆಯ ದಿನಾಂಕ 24/07/2024.

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸರ್ಕಾರಿ ನಿಯಮಿತ ನೇಮಕಾತಿ
ಹುದ್ದೆಯ ಹೆಸರು ಸನ್ನದು ಲೆಕ್ಕಪರಿಶೋಧಕರು, ಕಾನೂನು ಅಧಿಕಾರಿ, ಮಾನವ ಸಂಪನ್ಮೂಲ ಅಧಿಕಾರಿ, ತರಬೇತಿ ಅಧಿಕಾರಿ, ಸೌಹಾರ್ದ ಅಭಿವೃದ್ಧಿ ಅಧಿಕಾರಿ, ಸಹಾಯಕರು, ಟೈಪಿಸ್ಟ್ ಕಮ್ ಸ್ಟೇನೋ, ಕಿರಿಯ ಸಹಾಯಕ, ವಾಹನ ಚಾಲಕ. ಒಟ್ಟು ಖಾಲಿ ಇರುವ ಹುದ್ದೆಗಳ ಸಂಖ್ಯೆ 39. ಉದ್ಯೋಗ ಸ್ಥಳ ಬೆಂಗಳೂರು. ವಿದ್ಯಾರ್ಹತೆ 10 ನೇ ತರಗತಿ, ದ್ವಿತೀಯ ಪಿಯುಸಿ ಹಾಗೂ ಪದವಿ ಉತ್ತೀರ್ಣರಾಗಿ ಇರಬೇಕು. ವಯೋಮಿತಿ ಗರಿಷ್ಠ 25 ವರ್ಷ. ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಯ ( SC/ST ) ಜನರಿಗೆ ಐದು ವರ್ಷಗಳ ವಯೋಮಿತಿ ಸಡಿಲಿಕೆ ಇದೆ. ಓಬಿಸಿ ( OBC ) ಅಭ್ಯರ್ಥಿಗಳಿಗೆ ಮೂರು ವರ್ಷಗಳ ವಯೋಮಿತಿ ಸಡಿಲಿಕೆ ಇದೆ. ವೇತನ ಶ್ರೇಣಿ ₹ 13,000 – ₹ 60,000. ಆಯ್ಕೆ ಮಾಡುವ ವಿಧಾನ ಲಿಖಿತ ಪರೀಕ್ಷೆಯ ಮತ್ತು ಸಂದರ್ಶನ ನಡೆಸಿ ಆಯ್ಕೆ ಮಾಡುವರು. ಆಸಕ್ತಿ ಇರುವ ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಕೆ ಮಾಡಬೇಕು. ಈ ಹುದ್ದೆಗೆ ಯಾವುದೇ ರೀತಿಯ ಶುಲ್ಕ ಇರುವುದಿಲ್ಲ. ಅರ್ಜಿ ಸಲ್ಲಿಕೆ ಮಾಡುವ ಕೊನೆಯ ದಿನಾಂಕ 26/07/2024.

IBPS ನೇಮಕಾತಿ
ಹುದ್ದೆಯ ಹೆಸರು ಕ್ಲರ್ಕ್. ಒಟ್ಟು ಖಾಲಿ ಇರುವ ಹುದ್ದೆಗಳ ಸಂಖ್ಯೆ 6,128. ಉದ್ಯೋಗ ಮಾಡುವ ಸ್ಥಳ ಭಾರತದ ಎಲ್ಲೆಡೆ. ವಿದ್ಯಾ ಅರ್ಹತೆ ಪದವಿ ಉತ್ತೀರ್ಣರಾಗಿ ಇರಬೇಕು. ವಯೋಮಿತಿ ಕನಿಷ್ಠ 20 ವರ್ಷ ಮತ್ತು ಗರಿಷ್ಠ 28 ವರ್ಷ. ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಯ ( SC/ST ) ಜನರಿಗೆ ಐದು ವರ್ಷಗಳ ವಯೋಮಿತಿ ಸಡಿಲಿಕೆ ಇದೆ. ಓಬಿಸಿ ( OBC ) ಅಭ್ಯರ್ಥಿಗಳಿಗೆ ಮೂರು ವರ್ಷಗಳ ವಯೋಮಿತಿ ಸಡಿಲಿಕೆ ಇದೆ.ಆಯ್ಕೆ ಮಾಡುವ ವಿಧಾನ ಪ್ರಿಲಿಮಿನರಿ ಪರೀಕ್ಷೆಯ ಮತ್ತು ದಾಖಲೆಗಳ ಪರಿಶೀಲನೆ ನಡೆಸಿ ಆಯ್ಕೆ ಮಾಡುವರು. ಆಸಕ್ತಿ ಇರುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಕೆ ಮಾಡಬೇಕು.ಅರ್ಜಿ ಶುಲ್ಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ( SC/ST ), ಪಿಡಬ್ಲ್ಯೂಡಿ, ಮಾಜಿ ಸೈನಿಕರಿಗೆ ₹175. ಉಳಿದ ಅಭ್ಯರ್ಥಿಗಳಿಗೆ ₹ 850.
ಅರ್ಜಿ ಸಲ್ಲಿಕೆ ಮಾಡುವ ಕೊನೆಯ ದಿನಾಂಕ 21/07/2024. ಆಸಕ್ತಿ ಮತ್ತು ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಮೇಲೆ ತಿಳಿಸಿರುವ ಸರ್ಕಾರಿ ಉದ್ಯೋಗಗಳಿಗೆ ಅರ್ಜಿಗಳನ್ನು ಸಲ್ಲಿಕೆ ಮಾಡಬಹುದು.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!