ಮೊದಲಿಗೆ ಜಲಸಂಪನ್ಮೂಲ ಇಲಾಖೆಯ ಉದ್ಯೋಗದ ಬಗ್ಗೆ ಮಾಹಿತಿ. ಹುದ್ದೆಯ ಹೆಸರು ದ್ವಿತೀಯ ದರ್ಜೆ ಸಹಾಯಕ. ಉದ್ಯೋಗದ ಸ್ಥಳ ಕರ್ನಾಟಕ ಆಗಿದ್ದು ಒಟ್ಟಾರೆಯಾಗಿ 155 ಹುದ್ದೆಗಳು ಖಾಲಿ ಇವೆ. ವಿದ್ಯಾರ್ಹತೆಗಳು ದ್ವಿತೀಯ ಪಿಯುಸಿ ಹಾಗೂ ತತ್ಸಮಾನ ವಿದ್ಯಾರ್ಹತೆ ಆಗಿದೆ. ವಯೋಮಿತಿ ಕನಿಷ್ಠ 18 ಹಾಗೂ ಗರಿಷ್ಠ 40 ವರ್ಷ ವಯಸ್ಸಾಗಿದೆ. ಸಂಬಳ 21 ಸಾವಿರ ರೂಪಾಯಿಯಿಂದ 42,000ಗಳವರೆಗೆ ಇರುತ್ತದೆ. ಅಂಕದ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಈ ಕೆಲಸಕ್ಕೆ ಅರ್ಜಿ ಸಲ್ಲಿಸಲು ಅಕ್ಟೋಬರ್ 25 ಕೊನೆಯ ದಿನಾಂಕ ವಾಗಿರುತ್ತದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು ಅರ್ಜಿ ಸಲ್ಲಿಕೆಗೆ ಯಾವುದೇ ಶುಲ್ಕ ಇರುವುದಿಲ್ಲ.
ಎರಡನೇ ಉದ್ಯೋಗ ಗ್ರಾಮ ಪಂಚಾಯತಿಗಳಲ್ಲಿ ನೇಮಕಾತಿ. ಇರುವ ಹುದ್ದೆಗಳು ಅಟೆಂಡೆಂಟ್, ಕ್ಲೀನರ್, ಕರ ವಸೂಲಿಗಾರರು ಹಾಗೂ ಡಾಟಾ ಎಂಟ್ರಿ. ಉದ್ಯೋಗದ ಸ್ಥಳ ಬೆಂಗಳೂರು ಗ್ರಾಮಾಂತರ ಆಗಿದ್ದು 65 ಹುದ್ದೆಗಳು ಖಾಲಿ. ಎಸ್ ಎಸ್ ಎಲ್ ಸಿ ಅಥವಾ ಪಿಯುಸಿ ವಿದ್ಯಾರ್ಹತೆ ಹೊಂದಿರುವವರು ಈ ಕೆಲಸಕ್ಕೆ ಪ್ರಯತ್ನ ಪಡಬಹುದಾಗಿದೆ. ವಯೋಮಿತಿ ಗರಿಷ್ಠ 35 ವರ್ಷವಾಗಿದ್ದು ವಯೋಮಿತಿಯಲ್ಲಿ ಸಡಿಲಿಕೆ ಇದೆ. ಇಲ್ಲಿ ಕೂಡ ಅಂಕದ ಆಧಾರದ ಮೇಲೆ ಆಯ್ಕೆ ವಿಧಾನ ನಡೆಸಲಾಗುತ್ತದೆ. ಅಕ್ಟೋಬರ್ 20 ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ ಆಗಿದ್ದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಶುಲ್ಕಕ್ಕೆ ಸಾಮಾನ್ಯವಾಗಿ ವರ್ಗದವರು 300 ರೂಪಾಯಿ ಹಿಂದುಳಿದ ವರ್ಗದವರು 200 ರುಪಾಯಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ನೂರು ರೂಪಾಯಿ ಕಟ್ಟಬೇಕು.
ಮೂರನೇದಾಗಿ ಕೇಂದ್ರ ಕೈಗಾರಿಕಾ ಭದ್ರತೆ ಪಡೆ ನಿಯಮ ನೇಮಕಾತಿ. ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಹಾಗೂ ಹೆಡ್ ಕಾನ್ಸ್ಟೇಬಲ್ ಹುದ್ದೆಗಳು ಖಾಲಿ ಇವೆ. ಇನ್ನು ಉದ್ಯೋಗ ಸ್ಥಳ ಭಾರತದೆಲ್ಲೆಡೆ ಹರಡಿದ್ದು 400ಕ್ಕೂ ಅಧಿಕ ಹುದ್ದೆ ಖಾಲಿ ಇವೆ. ದ್ವಿತೀಯ ಪಿಯುಸಿ ಜೊತೆಗೆ ಟೈಪಿಂಗ್ ಜ್ಞಾನವನ್ನು ಕೂಡ ಹೊಂದಿರಬೇಕಾಗುತ್ತದೆ. ವಯೋಮಿತಿ 18 ರಿಂದ 25 ವರ್ಷದವರೆಗೆ ಇರುತ್ತದೆ. ಸಂಬಳ 25,000 ಇಂದ 92,000 ಇರುತ್ತದೆ. ದೈಹಿಕ ದಾಖಲೆಗಳು ಹಾಗೂ ವೈದ್ಯಕೀಯ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ. ಈ ತಿಂಗಳ 25ನೇ ತಾರೀಕು ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ. ಅರ್ಜಿ ಸಲ್ಲಿಕೆಯ ಶುಲ್ಕ ನೂರು ರೂಪಾಯಿ.
ನಾಲ್ಕನೇದಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನೇಮಕಾತಿ. ಪ್ರೊಬೆಶನರಿ ಆಫೀಸರ್ಸ್ ಹುದ್ದೆಗೆ ನೇಮಕಾತಿ ಓಪನ್ ಇದ್ದು, ಭಾರತದೆಲ್ಲೆಡೆ ಉದ್ಯೋಗದ ಅವಕಾಶವಿರುತ್ತದೆ. ವಿದ್ಯಾರ್ಹತೆ ಯಾವುದೇ ಪದವಿ ಇದ್ದರೆ ಸಾಕು. ವಯೋಮಿತಿ 21 ವರ್ಷದಿಂದ 30 ವರ್ಷದವರೆಗೆ. 1600ಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ. 36,000 ಇಂದ ಪ್ರಾರಂಭವಾಗಿ 63000 ವರೆಗೆ ಸಂಬಳ ಇದೆ. ಪ್ರಿಲಿಮಿನರಿ ಹಾಗೂ ಮುಖ್ಯ ಪರೀಕ್ಷೆ ನಡೆಸಿದ ನಂತರ ಇಂಟರ್ವ್ಯೂ ಮೂಲಕ ಆಯ್ಕೆ ಮಾಡಲಾಗುತ್ತದೆ. ಅಕ್ಟೋಬರ್ 12 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು ಅರ್ಜಿ ಶುಲ್ಕ 750 ರೂಪಾಯಿ ಆಗಿರುತ್ತದೆ.
ಶ್ರೀಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458. ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರುಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ) ಪೂರ್ವಜರ ಶಾಪ (ಪಿತೃ ದೋಷ) ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ