ಉದ್ಯೋಗ ಸಿಗದೆ ಕಂಗಾಲಾದವರಿಗೆ ಕೇಂದ್ರ ಸರ್ಕಾರದಿಂದ ಸಿಹಿಸುದ್ದಿ ಸಿಗಲಿದೆ. ಉದ್ಯೋಗಕಾಂಕ್ಷಿಗಳಿಗೆ ಒಳ್ಳೆಯ ಸಮಯ ಬರಲಿದೆ. ಹಾಗಾದರೆ ಕೇಂದ್ರ ಸರ್ಕಾರ ನೀಡಿದ ಸಿಹಿಸುದ್ದಿ ಏನೆಂದು ತಿಳಿದುಕೊಳ್ಳಲೇಬೇಕು. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಕೇಂದ್ರ ಸರ್ಕಾರದಿಂದ ನಿರುದ್ಯೋಗಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಸ್ಟಾಫ್ ಸೆಲೆಕ್ಷನ್ ಕಮಿಷನ್ ಸಿಬ್ಬಂದಿ ನೇಮಕಾತಿ ಆಯೋಗ (ಎಸ್‌ಎಸ್‌ಸಿ) ಒಟ್ಟು 6,506 ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ. ಮೀಸಲಾತಿಗೆ ಅನುಗುಣವಾಗಿ ಈ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಗ್ರೂಪ್ ‘ಬಿ’ ಗೆಜೆಟೆಡ್ 250, ಗ್ರೂಪ್ ‘ಬಿ’ ನಾನ್-ಗೆಜೆಟೆಡ್ 3,513, ಗ್ರೂಪ್ ‘ಸಿ’ 2,743 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದ್ದು, ಕಂಬೈನ್ಡ್ ಗ್ರಾಜುಯೇಟ್ ಲೆವೆಲ್ ಪರೀಕ್ಷೆಯ ಮೂಲಕ ವಿವಿಧ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದ್ದು, ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಈ ತಿಂಗಳು ಅಂದರೆ 31-01-2021 ಕೊನೆಯ ದಿನವಾಗಿರುತ್ತದೆ. ಹುದ್ದೆಗಳಿಗೆ ಟೈಯರ್-1 ಪರೀಕ್ಷೆಯನ್ನು ಮೇ 29, 2021ರಿಂದ ಜೂನ್ 7ರ ನಡುವೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಎಸ್‌ಎಸ್‌ಸಿ ಸಿಜಿಎಲ್ ಪರೀಕ್ಷೆ ಮೂಲಕ ಕೇಂದ್ರ ಸರಕಾರದ ವಿವಿಧ ಇಲಾಖೆ, ಸಚಿವಾಲಯಗಳಲ್ಲಿನ ಗ್ರೂಪ್ ‘ಬಿ’ ಮತ್ತು ಗ್ರೂಪ್ ‘ಸಿ’ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ. ಈ ಹುದ್ದೆಗೆ ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ವಿದ್ಯಾರ್ಹತೆ ಪಡೆದವರು ಅರ್ಜಿ ಸಲ್ಲಿಸಬಹುದಾಗಿದೆ.
ವಿವಿಧ ಹುದ್ದೆಗಳಿಗೆ ಬೇರೆ ಬೇರೆ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ಪೋಸ್ಟ್ ಲೆವೆಲ್ 8ರ ಹುದ್ದೆಗಳಿಗೆ 30 ವರ್ಷ, ಪೋಸ್ಟ್ ಲೆವೆಲ್-7ರ ಹುದ್ದೆಗೆ 20-30 ವರ್ಷ, ಇನ್‌ಸ್ಪೆಕ್ಟರ್ ಹುದ್ದೆಗಳಿಗೆ 18-30 ವರ್ಷ, ಪೋಸ್ಟ್ ಲೆವೆಲ್ 5 ಹುದ್ದೆಗಳಿಗೆ 18-27 ವರ್ಷ ಎಂದು ವಯೋಮಿತಿ ನಿಗದಿಪಡಿಸಲಾಗಿದೆ. ಅರ್ಜಿ ಸಲ್ಲಿಸುವಾಗ 100 ರೂಪಾಯಿಯನ್ನು ನಿಗದಿ ಪಡಿಸಲಾಗಿದೆ. ಅರ್ಜಿ ಸಲ್ಲಿಸುವವರು ಯುಪಿಐ, ನೆಟ್ ಬ್ಯಾಂಕಿಂಗ್ ಅಥವಾ ವೀಸಾ, ಮಾಸ್ಟರ್‌ಕಾರ್ಡ್, ಮೆಸ್ಟ್ರೋ, ರುಪೇ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಶುಲ್ಕ ಪಾವತಿಸಬಹುದು. ಎಸ್‌ಬಿಐ ಬ್ಯಾಂಕ್ ಶಾಖೆಗಳಲ್ಲಿ ಚಲನ್ ಮೂಲಕವೂ ಪಾವತಿಸಬಹುದಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಕಲಚೇತನರು, ಮಾಜಿ ಸೈನಿಕ ಮತ್ತು ಮಹಿಳಾ ಅಭ್ಯರ್ಥಿಗಳು ಶುಲ್ಕ ಪಾವತಿಸಬೇಕಾಗಿಲ್ಲ. ಈ ಹುದ್ದೆಗಳಿಗೆ ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸಲು 29-12-2020 ರಿಂದ 31-01-2021 ಸಮಯವಿದೆ. 31-01-2021 ಆನ್‌ಲೈನ್ ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನಾಂಕವಾಗಿರುತ್ತದೆ. 02-02-2021 ಆನ್‌ಲೈನ್ ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕವಾಗಿರುತ್ತದೆ. 04-02-2021 ಆಫ್‌ಲೈನ್ ಚಲನ್ ಜನರೇಟ್ ಮಾಡಲು ಕೊನೆಯ ದಿನಾಂಕವಾಗಿರುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ. ಈ ಮೂಲಕ ಉದ್ಯೋಗ ಹುಡುಕುವವರು ಉದ್ಯೋಗಿಗಳಾಗಲಿ.