ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಜುಲೈ 2024 ರ ಅಧಿಕೃತ IOCL ಅಧಿಸೂಚನೆಯೊಂದಿಗೆ ಜೂನಿಯರ್ ಎಂಜಿನಿಯರಿಂಗ್ ಸಹಾಯಕ ಮತ್ತು ತಾಂತ್ರಿಕ ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳನ್ನು ಆಹ್ವಾನಿಸಿದೆ. ಭಾರತದಲ್ಲಿ ಕೆಲಸ ಮಾಡುವವರಿಗೆ ಇದೊಂದು ಒಳ್ಳೆಯ ಅವಕಾಶ. ಆಸಕ್ತರು ಅರ್ಜಿಸಲ್ಲಿಸಿ ಈ ಹುದ್ದೆಯ ಕುರಿತು ಸ,ಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ನೀವು ತಿಳಿದು ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ. ಇದರ ಸದುಪಯೋಗ ಪಡೆದುಕೊಳ್ಳಲಿ.

ಹುದ್ದೆಯ ವಿವರ ಹೀಗಿದೆ:
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್
ಕೆಲಸದ ಸ್ಥಳ: ಭಾರತ
ಹುದ್ದೆಯ ಹೆಸರು: ಜೂನಿಯರ್ ಇಂಜಿನಿಯರಿಂಗ್ ಸಹಾಯಕ, ತಾಂತ್ರಿಕ ಅಟೆಂಡೆಂಟ್
ಹುದ್ದೆಗಳ ಸಂಖ್ಯೆ: 476
ವೇತನ: ತಿಂಗಳಿಗೆ ರೂ.23000-105000/-

ಜೂನಿಯರ್ ಇಂಜಿನಿಯರಿಂಗ್ ಸಹಾಯಕ -379, ಜೂನಿಯರ್ ಗುಣಮಟ್ಟ ನಿಯಂತ್ರಣ ವಿಶ್ಲೇಷಕ 21, ಇಂಜಿನಿಯರಿಂಗ್ ಸಹಾಯಕ-38 ತಾಂತ್ರಿಕ ಅಟೆಂಡೆಂಟ್-29
ಜೂನಿಯರ್ ಇಂಜಿನಿಯರಿಂಗ್ ಸಹಾಯಕ ಹುದ್ದೆಗಳಿಗೆ ಸೇರಬಯಸುವವರು ಡಿಪ್ಲೊಮಾ, ಬಿ.ಎಸ್ಸಿ ಮುಗಿಸಿರಬೇಕು. ಜೂನಿಯರ್ ಗುಣಮಟ್ಟ ನಿಯಂತ್ರಣ ವಿಶ್ಲೇಷಕ ಹುದ್ದೆಗೆ ಸೇರಬಯಸುವವರು ಬಿ.ಎಸ್ಸಿ ಮುಗಿಸಿರಬೇಕು, ಇಂಜಿನಿಯರಿಂಗ್ ಸಹಾಯಕ ಡಿಪ್ಲೊಮಾ, ತಾಂತ್ರಿಕ ಅಟೆಂಡೆಂಟ್ ಹುದ್ದೆಗೆ 10ನೇತರಗತಿ, ಐಟಿಐ ಮಾಡಿರಬೇಕು.

ವಯೋಮಿತಿ: ಈ ಹುದ್ದೆಗಳಿಗೆ ಸೇರಬಯಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 26 ವರ್ಷಗಳನ್ನು ಹೊಂದಿರಬೇಕು. ಇನ್ನೂ ಮೀಸಲಾತಿ ಇರುವವರಿಗೆ ವಯಸ್ಸಿನಲ್ಲಿ ಸಡಲಿಕೆ ಇರುತ್ತೆ. ಅರ್ಜಿಶುಲ್ಕ SC/ST/PwBD/ExSM ಅಭ್ಯರ್ಥಿಗಳಿಗೆ ಅರ್ಜಿಶುಲ್ಕ ಇರೋದಿಲ್ಲ. ಸಾಮಾನ್ಯ ಅಭ್ಯರ್ಥಿಗಳಿಗೆ 300 ರೂ. ಅರ್ಜಿಶುಲ್ಕ ಇರುತ್ತೆ.

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 22-07-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21-ಆಗಸ್ಟ್-2024
ಈ ಹುದ್ದೆಯ ಕುರಿತು PDF
ಈ ಹುದ್ದೆಗೆ ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿದೆ

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!