ನಮ್ಮ ದೇಶದಲ್ಲಿ ಕಂಡುಬರುವ ದೊಡ್ಡ ಸಮಸ್ಯೆಯೆಂದರೆ ನಿರುದ್ಯೋಗ ಸಮಸ್ಯೆ ಜನರು ಉದ್ಯೋಗಕ್ಕಾಗಿ ದಿನನಿತ್ಯ ಹುಡುಕಾಟ ನಡೆಸುತ್ತಿರುತ್ತಾರೆ. ಕರೋನಾ ಮಹಾಮಾರಿ ಇಂದಾಗಿಯು ಅನೇಕ ಜನರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಉದ್ಯೋಗ ಹುಡುಕುತ್ತಿರುವವರಿಗೆ ಕೇಂದ್ರ ಸರ್ಕಾರವು ಅನೇಕ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಅಹ್ವಾನ ಮಾಡಿದೆ ಇಂದು ನಾವು ನಿಮಗೆ ಎರಡು ಉದ್ಯೋಗ ನೇಮಕಾತಿಯ ಬಗ್ಗೆ ತಿಳಿಸಿಕೊಡುತ್ತೇವೆ.
ಮೊದಲನೆಯ ಹುದ್ದೆ ಭಾರತೀಯ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮದಿಂದ ನೇಮಕಾತಿ ನಡೆಯುತ್ತಿದೆ ಆಯ್.ಆರ್.ಸಿ.ಬಿ ಇಂದ ನೇಮಕಾತಿ ನಡೆಯುತ್ತಿದೆ ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಸುವವರು ಹತ್ತನೇ ತರಗತಿಯನ್ನು ಪಾಸಾಗಿರಬೇಕು. ಈ ಒಂದು ಹುದ್ದೆಗೆ ವಯೋಮಿತಿ ಆಯ್.ಆರ್.ಸಿ.ಟಿ.ಸಿ ರಿಕ್ರೂಟ್ಮೆಂಟ್ ಪ್ರಕಾರ ಇರುತ್ತದೆ. ಈ ಒಂದು ಹುದ್ದೆಗೆ ಆನ್ಲೈನಲ್ಲಿ ಅರ್ಜಿಯನ್ನು ಸಲ್ಲಿಸಲು ಸೆಪ್ಟೆಂಬರ್ ಮೂರು ಏರಡು ಸಾವಿರದ ಇಪ್ಪತ್ತೊಂದರಿಂದ ಪ್ರಾರಂಭವಾಗಿ ಅಕ್ಟೋಬರ್ ಮೂರು ಏರಡು ಸಾವಿರದ ಇಪ್ಪತ್ತೊಂದರವರೆಗೆ ಅರ್ಜಿಯನ್ನು ಸಲ್ಲಿಸಲು ಕಾಲಾವಕಾಶವಿದೆ. ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಒಂದು ತಿಂಗಳ ಕಾಲಾವಕಾಶವಿದ್ದು ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಈ ಹುದ್ದೆಗೆ ಅರ್ಜಿಯನ್ನು ಹೇಗೆ ಸಲ್ಲಿಸುವುದು ಎಂಬುದನ್ನು ನೋಡುವುದಾದರೆ ನೀವು ಅರ್ಜಿಯನ್ನು ಆನ್ಲೈನ್ನಲ್ಲಿ ಸಲ್ಲಿಸಬೇಕಾಗುತ್ತದೆ. ನೀವು ಅರ್ಜಿಯನ್ನು ಸಲ್ಲಿಸಲು ಆಯ್.ಆರ್.ಸಿ.ಟಿ.ಸಿ ವೆಬ್ಸೈಟ್ಗೆ ಲಾಗಿನ್ ಆಗಬೇಕು. ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಸುವುದಕ್ಕೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ. ಈ ವಿಭಾಗದಲ್ಲಿ ನೂರು ಹುದ್ದೆಗಳಿಗೆ ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಇನ್ನು ಈ ಹುದ್ದೆಯವರಿಗೆ ಸಂಬಳವನ್ನು ನೋಡುವುದಾದರೆ ಸ್ಟೆಫೆನ್ ಅಂತ ಏಳುಸಾವಿರದಿಂದ ಒಂಬತ್ತು ಸಾವಿರದ ವರೆಗೆ ಸಂಬಳ ಸಿಗುತ್ತದೆ ಆನಂತರದಲ್ಲಿ ಇದನ್ನು ಹೆಚ್ಚು ಮಾಡುತ್ತಾರೆ
ಇಲ್ಲಿ ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಅಸಿಸ್ಟೆಂಟ್ ವಿಭಾಗದ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಯಾವ ಪ್ರದೇಶದಲ್ಲಿ ಹುದ್ದೆ ಖಾಲಿ ಇದೆ ಎಂಬುದನ್ನು ನೋಡುವುದಾದರೆ ನವದೆಹಲಿಯಲ್ಲಿ ಹುದ್ದೆಯ ಆಯ್ಕೆಗೆ ಅರ್ಜಿಯನ್ನು ಕರೆಯಲಾಗಿದೆ ಇದು ಕೇಂದ್ರ ಸರ್ಕಾರದ ಉದ್ಯೋಗ ವಾಗಿರುತ್ತದೆ ಎಸ್ ಎಸ್ ಎಲ್ ಸಿ ಅಥವಾ ಅದಕ್ಕಿಂತ ಹೆಚ್ಚಿನ ವಿದ್ಯಾಭ್ಯಾಸವನ್ನು ಮುಗಿಸಿರುವವರು ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು.
ಈ ಒಂದು ಹುದ್ದೆಗೆ ಹೇಗೆ ಅರ್ಜಿಯನ್ನು ಸಲ್ಲಿಸಬಹುದು ಎಂಬುದನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ಮೊದಲಿಗೆ ಆಯ್.ಆರ್.ಸಿ.ಟಿ.ಸಿ ವೆಬ್ಸೈಟ್ಗೆ ಲಾಗಿನ್ ಆಗಬೇಕು ಅಲ್ಲಿ ಹುದ್ದೆಯ ಪೂರ್ತಿ ವಿವರವನ್ನು ಕೊಟ್ಟಿರುತ್ತಾರೆ ಜೊತೆಗೆ ಅಲ್ಲಿ ಅಪ್ಲೈ ಫಾರ್ ದಿಸ್ ಆಪರ್ಚುನಿಟಿ ಎನ್ನುವುದು ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿದಾಗ ಪ್ಲೀಸ್ ಲೋಗಿನ್ ಫಾರ್ ದಿಸ್ ಆಪರ್ಚುನಿಟಿ ಎಂಬುದು ಕಾಣಿಸುತ್ತದೆ ಅದರ ಮೇಲೆ ಓಕೆ ಬಟನ್ ಅನ್ನು ಕ್ಲಿಕ್ ಮಾಡಿ ನಂತರ ಅಲ್ಲಿ ರಿಜಿಸ್ಟರ್ ಅಂತ ಇರುತ್ತದೆ ಇಲ್ಲಿ ಕ್ಲಿಕ್ ಮಾಡಿ ನಂತರ ಕ್ಯಾಂಡಿಡೇಟ್ ಅಂತ ಕಾಣಿಸುತ್ತದೆ ಇಲ್ಲಿ ಕ್ಲಿಕ್ ಮಾಡಿ ಆಗ ಪರ್ಸನಲ್ ರಿಜಿಸ್ಟ್ರೇಷನ್ ಎನ್ನುವುದು ಕಾಣಿಸುತ್ತದೆ ಅಲ್ಲಿ ನಿಮ್ಮ ಬಗ್ಗೆ ಕೆಲವು ಮಾಹಿತಿಯನ್ನು ಕೇಳುತ್ತದೆ.
ಅಲ್ಲಿ ನೀವು ನಿಮ್ಮ ಪೂರ್ಣ ಹೆಸರನ್ನು ನಮೂದಿಸಬೇಕು ನಂತರ ನಿಮ್ಮ ತಂದೆ ತಾಯಿಯ ಹೆಸರನ್ನು ಟೈಪ್ ಮಾಡಬೇಕು. ನಂತರ ಅವರೊಂದಿಗೆ ಸಂಬಂಧವನ್ನು ಸೂಚಿಸಬೇಕು ನಂತರ ನಿಮ್ಮ ಜೆಂಡರ್ ಮೇಲೆ ಅಥವಾ ಫೀಮೇಲ್ ಎಂಬುದನ್ನು ಆಯ್ಕೆ ಮಾಡಬೇಕು ನಂತರ ಅಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಕೇಳುತ್ತದೆ ಅದನ್ನು ನಮೂದಿಸಬೇಕು ನಂತರ ನಿಮ್ಮ ಆಲ್ಟರ್ನೇಟ್ ಮೊಬೈಲ್ ಸಂಖ್ಯೆ ಇದ್ದರೆ ಅದನ್ನು ನಮೂದಿಸಬೇಕು ನಂತರ ಇಮೇಲ್ ಐಡಿಯನ್ನು ನಮೂದಿಸಬೇಕು ಇದನ್ನು ಸರಿಯಾಗಿ ನಮೂದಿಸಬೇಕು ಏಕೆಂದರೆ ಕೆಲವೊಮ್ಮೆ ಮೇಲ್ ಐಡಿಗೆ ಅವರು ಸಂದೇಶಗಳನ್ನು ಕಳಿಸುತ್ತಾರೆ ಹಾಗೆ ಅಲ್ಲಿ ಪಾಸ್ವರ್ಡ್ ಅನ್ನು ಎಂಟ್ರಿ ಮಾಡಿ ನಂತರ ಅಗ್ರಿ ಎಂಬ ಎನ್ನುವ ಬಟನ್ ಮೇಲೆ ಕ್ಲಿಕ್ ಮಾಡಬೇಕು ನಂತರ ಅದರ ಕೆಳಗೆ ಸಬ್ಮಿಟ್ ಎಂಬ ಬಟನ್ ಇರುತ್ತದೆ ಅದನ್ನು ಕ್ಲಿಕ್ ಮಾಡಬೇಕು ಆಗ ನೀವು ಸ್ಕಿಲ್ ಇಂಡಿಯಾ ಫೇಜ್ ಅಲ್ಲಿ ರಿಜಿಸ್ಟರ್ ಪಡೆದುಕೊಳ್ಳುತ್ತೀರಿ. ಅಲ್ಲಿ ನೀವು ಲಾಗಿನ್ ಆಗಿ ನಿಮ್ಮ ಅರ್ಜಿಯನ್ನು ಸಲ್ಲಿಸಬಹುದು.
ನಾವು ನಿಮಗೆ ತಿಳಿಸುತ್ತಿರುವ ಎರಡನೆಯ ಹುದ್ದೆಯ ನೇಮಕಾತಿ ಯಾವುದೆಂದರೆ ಭಾರತೀಯ ವಾಯುಪಡೆಯಲ್ಲಿ ನೇಮಕಾತಿ ನಡೆಯುತ್ತಿದೆ. ಭಾರತೀಯ ವಾಯುಪಡೆ ಇಲಾಖೆಯಲ್ಲಿ ಏರಡು ಸಾವಿರದ ಇಪ್ಪತ್ತೊಂದನೇ ಸಾಲಿಗೆ ಸಂಬಂಧಿಸಿದಂತೆ ಖಾಲಿ ಇರುವ ನೂರಾಎಪ್ಪತ್ನಾಲ್ಕು ವಿವಿಧ ಹುದ್ದೆಗಳ ನೇಮಕಾತಿಗೆ ಹತ್ತನೇ ತರಗತಿ ಪಾಸ್ ಆಗಿರುವ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿಯ ಪಾಸಾಗಿರಬೇಕು ಅದೇ ರೀತಿಯಾಗಿ ಐಟಿಐ ಡಿಗ್ರಿ ಮಾಡಿರುವವರು ಕೂಡ ಅರ್ಜಿಯನ್ನು ಸಲ್ಲಿಸಬಹುದು ಹಾಗಾದ್ರೆ ಈ ಒಂದು ವಿಭಾಗದಲ್ಲಿ ಯಾವೆಲ್ಲ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದ್ದಾರೆ ಎಂಬುದನ್ನ ತಿಳಿದುಕೊಳ್ಳೊಣ.
ಭಾರತೀಯ ವಾಯುಪಡೆಯ ಮಲ್ಟಿ ಟಾಸ್ಕಿಂಗ್ ಸ್ಟಾಪ್ ವಿಭಾಗದಲ್ಲಿ ತೊಂಬತ್ತೆಂಟು ಹುದ್ದೆಗಳಿಗೆ ಮೆನ್ಸ್ ಸ್ಟಾಫ್ ವಿಭಾಗದಲ್ಲಿ ಒಂದು ಹುದ್ದೆಗೆ ಹೌಸ್ ಕೀಪಿಂಗ್ ವಿಭಾಗದಲ್ಲಿ ಇಪ್ಪತ್ಮೂರು ಹುದ್ದೆಗಳಿಗೆ ಕಾರ್ಪೆಂಟರ್ ಹುದ್ದೆಗೆ ಮೂರು ಪೇಂಟರ್ ಹುದ್ದೆಗೆ ಎರಡು ಕುಕ್ ವಿಭಾಗದಲ್ಲಿ ಇಪ್ಪತ್ಮೂರು ಹುದ್ದೆಗಳಿಗೆ ಸ್ಟೋರ್ ಕೀಪರ್ ವಿಭಾಗದಲ್ಲಿ ಆರು ಹುದ್ದೆಗಳಿಗೆ ಲೋವರ್ ಡಿವಿಷನ್ ಕ್ಲರ್ಕ್ ವಿಭಾಗದಲ್ಲಿ ಹತ್ತು ಹುದ್ದೆಗಳಿಗೆ ಸ್ಟೋರ್ ವಿಭಾಗದಲ್ಲಿ ಮೂರು ಹುದ್ದೆಗಳಿಗೆ ಈ ರೀತಿಯಾಗಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಈ ಒಂದು ಹುದ್ದೆಗೆ ಹದಿನೆಂಟು ವರ್ಷ ಮೇಲ್ಪಟ್ಟ ಮತ್ತು ಮೂವತ್ತೈದು ವರ್ಷ ಒಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹುದ್ದೆಗೆ ಅಭ್ಯರ್ಥಿಗಳ ನೇಮಕವನ್ನು ಮಾಡಿಕೊಳ್ಳುವಾಗ ಕೌಶಲ್ಯ ಪರೀಕ್ಷೆ ಪ್ರಾಯೋಗಿಕ ಪರೀಕ್ಷೆ ದೈಹಿಕ ಪರೀಕ್ಷೆ ಮತ್ತು ಲಿಖಿತ ಪರೀಕ್ಷೆಗಳ ಮೂಲಕ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳು ಅಂಚೆಯ ಮೂಲಕ ತಮ್ಮ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಹುದ್ದೆಗಳಿಗೆ ಅನುಗುಣವಾಗಿ ಅಂಚೆ ವಿಳಾಸವನ್ನು ನಿಗದಿಪಡಿಸಲಾಗಿದೆ ಅಭ್ಯರ್ಥಿಗಳು ಅಧಿಸೂಚನೆಯನ್ನು ಗಮನಿಸಿ ಅರ್ಜಿಯನ್ನು ಸಲ್ಲಿಸಬೇಕು.
ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳು ಅಕ್ಟೋಬರ್ ಮೂರು ಏರಡು ಸಾವಿರದ ಇಪ್ಪತ್ತೊಂದರವರೆಗೆ ತಮ್ಮ ಅರ್ಜಿಯನ್ನು ಅಂಚೆ ಮೂಲಕ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ವಿಳಾಸ, ಹೆಡ್ ಕ್ವಾಟರ್ಸ್ ಏರ್ ಕಮಾಂಡ ಐ ಎ ಎಫ್, ಏರ್ ಆಫೀಸರ್ ಕಮಾಂಡಿಂಗ್ ಏರ್ ಫೋರ್ಸ್ ಸ್ಟೇಷನ್ ಆಗ್ರಾ ಯುಪಿ. ಪಿನ್ ಕೋಡ್ ಎರಡು ಎಂಟು ಎರಡು ಸೊನ್ನೆ ಸೊನ್ನೆ ಎಂಟು. ಇದು ಕೇಂದ್ರ ಸರ್ಕಾರದ ಹುದ್ದೆಯಾಗಿದ್ದು ಯಾರೆಲ್ಲಾ ಈ ಒಂದು ಹುದ್ದೆಗೆ ಅರ್ಹರಿರುತ್ತಾರೆ ಅವರು ಅರ್ಜಿಯನ್ನು ಸಲ್ಲಿಸಬಹುದು. ಇಲಾಖೆಯ ವೆಬ್ ಸೈಟ್ ಗೆ ಹೋಗಿ ಅಲ್ಲಿ ನೇಮಕಾತಿಯ ನೋಟಿಫಿಕೇಶನ್ ಅನ್ನು ಸಂಪೂರ್ಣವಾಗಿ ಓದಿಕೊಂಡು ಅಲ್ಲಿ ಅರ್ಜಿ ಫಾರ್ಮೆಟ್ ಇರುತ್ತದೆ ಅದನ್ನು ಡೌನ್ಲೋಡ್ ಮಾಡಿಕೊಂಡು ಅಲ್ಲಿ ಕೇಳಿರುವ ಮಾಹಿತಿಯನ್ನು ತುಂಬಿ ಅದನ್ನು ನೋಟಿಫಿಕೇಶನ್ ಅಲ್ಲಿ ಆಯಾ ಹುದ್ದೆಗಳಿಗೆ ಸಂಬಂಧಿಸಿದ ವಿಳಾಸವನ್ನು ನೀಡುರುತ್ತಾರೆ ಆ ವಿಳಾಸಕ್ಕೆ ನೀವು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
ಸ್ನೇಹಿತರೆ ನೀವು ಕೂಡ ಉದ್ಯೋಗಕ್ಕಾಗಿ ಹುಡುಕಾಟವನ್ನು ನಡೆಸುತ್ತಿದ್ದರೆ ಈ ಅವಕಾಶದ ಸದುಪಯೋಗವನ್ನು ಪಡೆದುಕೊಳ್ಳಿ ನಾವು ಮೇಲೆ ತಿಳಿಸಿರುವ ಹುದ್ದೆಗಳಲ್ಲಿ ನೀವು ಆಸಕ್ತಿಯನ್ನು ಹೊಂದಿದ್ದರೆ ಅರ್ಜಿಯನ್ನು ಸಲ್ಲಿಸಿ ಹುದ್ದೆಯನ್ನು ನಿಮ್ಮದಾಗಿಸಿಕೊಳ್ಳಿ ಈ ಮಾಹಿತಿಯನ್ನು ನಿಮ್ಮ ಪರಿಚಯದವರಿಗು ತಿಳಿಸಿ.
ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430