ರಾಜಧಾನಿ ಬೆಂಗಳೂರು ಸಕಲ ಸೌಲಭ್ಯ ಇರುವ ಇಲೆಕ್ಟ್ರಾನಿಕ್ ಸಿಟಿ. ಇಂತಹ ಸೌಲಭ್ಯ ಇಲ್ಲ ಎನ್ನುವಂತಹ ಪರಿಸ್ಥಿತಿ ಇರುವುದು ಕಡಿಮೆಯೆ. ಇಂತಹ ಬೆಂಗಳೂರಿನಲ್ಲಿ ಈಗ ಇಲೆಕ್ಟ್ರಾನಿಕ್ ಬಸ್ ಗಳಿಗೆ ಚಾಲನೆ ನೀಡುವ ಪ್ರಯತ್ನ ನಡೆಯುತ್ತಿದೆ. ಹಾಗಾದರೆ ಈ ಬಸ್ ಹೇಗಿದೆ? ಇದರ ಉಪಯುಕ್ತತೆ ಏನೇನು ನಾವು ತಿಳಿಯೋಣ.
ಐರಾವತ ಬಸ್ ನಂತೆಯೇ ಕಾಣುವ ಈ ಎಲೆಕ್ಟ್ರಾನಿಕ್ ಬಸ್ ವ್ಯವಸ್ಥಿತ ಆಸನಗಳನ್ನು ಹೊಂದಿದೆ. ಈಗಾಗಲೇ ಪ್ರಾಯೋಗಿಕ ಪರೀಕ್ಷೆ ಮಾಡಲಾಗಿದೆ. ಸಾರಿಗೆ ಸಚಿವರು ಈ ಇಲೆಕ್ಟ್ರಾನಿಕ್ ಬಸ್ ಗಳ ಬಗ್ಗೆ ಮಾಹಿತಿಯನ್ನು ಕೇಳಿ ಪಡೆದುಕೊಂಡರು. ಬಿಳಿ ನೀಲಿ ಬಣ್ಣದಿಂದ ಹೊಳೆಯುವ ಬಿಎಂಟಿಸಿ ಬಸ್ ಬೆಂಗಳೂರಿನ ಜೀವನಾಡಿ. ಆರುಸಾವಿರಕ್ಕೂ ಹೆಚ್ಚು ಬಸ್ ಹೊಂದಿರುವ ಬಿಎಂಟಿಸಿ ಅವರ ಬಳಿ ಇಲೆಕ್ಟ್ರಿಕ್ ಬಸ್ ಇಲ್ಲದಿರುವುದು ಕೊರತೆ ಕಂಡಿತ್ತು. ಮಾಲಿನ್ಯ ರಹಿತ ಇಲೆಕ್ಟ್ರಿಕ್ ಬಸ್ ಗಳನ್ನು ಸರ್ಕಾರ ತನ್ನ ಬಜೆಟ್ ನಿಂದ ಪ್ರೋತ್ಸಾಹ ಧನವಾಗಿ ನೂರು ಕೋಟಿ ಕೊಟ್ಟಿತ್ತು. ಪ್ರತಿ ಬಸ್ ಗೆ 55 ಲಕ್ಷ ಫೇಮ್ 2 ಯೋಜನೆಗಳ ಅಡಿಯಲ್ಲಿ ಕೈಗಾರಿಕಾ ಇಲಾಖೆ ನೀಡಿತ್ತು. ಖಾಸಗಿ ಕಂಪನಿಗಳಿಂದ ಲಿಸ್ ಗೆ 300 ಇಲೆಕ್ಟ್ರಿಕ್ ಬಸ್ ಪಡೆಯಲು ಬಿಎಂಟಿಸಿ ನಿರ್ಧಾರ ಮಾಡಿದೆ. ಪ್ರಾಯೋಗಿಕ ಸಂಚಾರಕ್ಕೆ ಓಲೆಕ್ಟ್ರಾ ಕಂಪನಿ ಹೈದರಾಬಾದ್ ಕಡೆಯಿಂದ ಒಂದು ಬಸ್ ತರಲಾಗಿತ್ತು. ಲಕ್ಷ್ಮಣ ಸವದಿ ಸಾರಿಗೆ ಸಚಿವರು ಇಂದು ನಡೆದ ಪ್ರಾಯೋಗಿಕ ಪರೀಕ್ಷೆಗೆ ಬಿಎಂಟಿಸಿ ಕಛೇರಿಯಿಂದ ವಿಧಾನಸೌಧದ ವರೆಗೆ ಈ ಬಸ್ ನಲ್ಲಿ ಸಂಚರಿಸಿದರು. ಸಿಎಂ ಯಡಿಯೂರಪ್ಪ ಕೆಂಗಲ್ ಗೇಟ್ ಬಳಿ ನಿಂತ ಬಸ್ ಅನ್ನು ಪರೀಕ್ಷೆ ಮಾಡಿದರು. ಇದೆಲ್ಲ ಆದ ನಂತರ ನ್ಯೂಸ್ ಫಸ್ಟ್ ಚಾನೆಲ್ ನಲ್ಲಿ ಈ ಯೋಜನೆಯ ಬಗ್ಗೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಮಾಹಿತಿ ಹಂಚಿಕೊಂಡರು.
ಈ ಬಸ್ ನಲ್ಲಿ ಸಿಸಿ ಕ್ಯಾಮರಾಗಳ ಅಳವಡಿಕೆ ಇದ್ದು, ಪ್ರತಿಯೊಂದು ಪ್ರಯಾಣಿಕರ ಚಲನವಲನಗಳ ಮಾಹಿತಿ ಇರುತ್ತದೆ. ಜೊತೆಗೆ ಪ್ರಂಟ್ ಮತ್ತು ಬ್ಯಾಕ್ ಕ್ಯಾಮರಾಗಳ ವ್ಯವಸ್ಥೆ ಇದೆ. ಹೊರಗಡೆಯಲ್ಲಿ ಒಂದು ಕ್ಯಾಮರಾ ಇದ್ದು, ಒಳಗಡೆಯಲ್ಲಿ ಎರಡು ಕ್ಯಾಮರಾ ವ್ಯವಸ್ಥೆ ಇದೆ. ವೈಜ್ಞಾನಿಕ ಕಾರುಗಳಲ್ಲಿ ಇರುವ ಎಲ್ಲಾ ಸೌಲಭ್ಯಗಳು ಈ ಬಸ್ ನಲ್ಲಿದೆ. ಒಂದು ಬಾರಿ 2.50 ಗಂಟೆ ಚಾರ್ಜ್ ಮಾಡಿದ ಬಸ್ 250 ಕಿಲೊಮೀಟರ್ ಚಲಿಸುತ್ತದೆ. ಈ ಓಲೆಕ್ಟ್ರಾ ಬಸ್ ಹವಾನಿಯಂತ್ರಿತ ಸೌಲಭ್ಯ ಹೊಂದಿದ್ದು, 12 ಮೀಟರ್ ಉದ್ದದ ಬಸ್ ಇದಾಗಿದೆ. ಈ ಬಸ್ ನಲ್ಲಿ 35 ಆಸನಗಳು ಇವೆ. ಬಸ್ ಸಂಚಾರದ ಸಮಯದಲ್ಲಿ ಪ್ರಯಾಣಿಕರಿಗೆ ಆರೋಗ್ಯ ಸಮಸ್ಯೆ ಎದುರಾದರೆ ಆ್ಯಂಬುಲೆನ್ಸ್ ಸೈರನ್ ವ್ಯವಸ್ಥೆ ಕೂಡಾ ಇದೆ. ಎಮರ್ಜೆನ್ಸಿ ಕರೆಗಳ ಜೊತೆಗೆ ಸ್ವಯಂ ಚಾಲಿತ ಮಾರ್ಗ ಬದಲಾವಣೆಯ ಸೌಲಭ್ಯ ಹೊಂದಿದೆ. ಓಲೆಕ್ಟ್ರಾ ಬಸ್ ನಲ್ಲಿ ಪೋಲ್ಡಿಂಗ್ ಸ್ಟೆಪ್ ಅನ್ನು ಅಂಗವಿಕಲರಿಗೆ ಸಹಾಯವಾಗುವಂತೆ ಅಳವಡಿಸಲಾಗಿದೆ. ಇಲೆಕ್ಟ್ರಿಕ್ ಬಸ್ ಚಾಲನೆಗೆ ಬಂದ ಮೇಲೆ ಕಂಪನಿ ಚಾಲಕರನ್ನು ನೀಡಲಿದ್ದು, ನಿರ್ವಾಹಕರನ್ನು ಮಾತ್ರ ಬಿಎಂಟಿಸಿ ನೀಡುತ್ತದೆ. ಮೂರು ಚಾರ್ಜಿಂಗ್ ಸ್ಟೇಷನ್ ಹಾಗೂ ಮೂರು ಡಿಪೊ ಅನ್ನು ಬಿಎಂಟಿಸಿ ನೀಡಲಿದೆ. ಆದಷ್ಟು ಬೇಗ ಈ ಇಲೆಕ್ಟ್ರಿಕ್ ಬಸ್ ರಸ್ತೆಗೆ ಇಳಿಯಲಿದೆ.
ಇವೆಲ್ಲವೂ ಎಲೆಕ್ಟ್ರಿಕ್ ಬಸ್ ಗಳ ಮಾಹಿತಿ ಆಗಿದ್ದು, ಕೆಲವೇ ದಿನಗಳ ಅಂತರದಲ್ಲಿ ಒಲೆಕ್ಟ್ರಾ ಕಂಪನಿಯ ಬಸ್ ಗಳು ರಸ್ತೆಗಿಳಿಯಲು ಸಿದ್ದವಾಗಿದೆ. ಬಿಎಂಟಿಸಿ ಕೂಡಾ ಈ ಬಸ್ ಸಂಚಾರಕ್ಕೆ ಸಿದ್ಧವಾಗಿದ್ದು, ಇದಕ್ಕೆ ಬೇಕಾದ ಎಲ್ಲಾ ತಯಾರಿಗಳನ್ನು ಮಾಡಿಕೊಂಡಿದೆ.