ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ಗೆ ಬಂದ ಭಾರತೀಯ ಕ್ರಿಕೆಟ್ ತಂಡ ಆರಂಭದಲ್ಲಿಯೇ ಕೆಎಲ್ ರಾಹುಲ್ ಅವರನ್ನು ಕಳೆದುಕೊಂಡಿತು. ರೋಹಿತ್ ಶರ್ಮಾ ಅವರು ಕೂಡ ನಿಧಾನಗತಿಯ ಬ್ಯಾಟಿಂಗ್ ಅನ್ನು ಪ್ರದರ್ಶಿಸಿದರು. ಸೂರ್ಯ ಕುಮಾರ್ ಯಾದವ್ ಅವರು ಕೂಡ ಸಣ್ಣ ಮೊತ್ತಕ್ಕೆ ಔಟ್ ಆಗುತ್ತಾರೆ.

ನಂತರ ಜೊತೆಯಾದ ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ ಅವರ ಪಾರ್ಟ್ನರ್ಶಿಪ್ ಎನ್ನುವುದು ಭಾರತೀಯ ಕ್ರಿಕೆಟ್ ತಂಡವನ್ನು 168 ರನ್ನುಗಳ ಸ್ಪರ್ಧಾತ್ಮಕ ಮೊತ್ತಕ್ಕೆ ತರುವಂತೆ ಮಾಡುತ್ತದೆ. ಕೊನೆಯ ಕೆಲವು ಓವರ್ ಗಳಲ್ಲಿ ಎಡವಿದರೂ ಕೂಡ ಇಂಗ್ಲೆಂಡ್ ತಂಡ ಬೌಲಿಂಗ್ ನಲ್ಲಿ ಬಿಗು ಪ್ರದರ್ಶನ ನೀಡಿತ್ತು.

ಇನ್ನು ಎರಡನೇ ಬ್ಯಾಟಿಂಗಿಗೆ ಇಳಿದ ಇಂಗ್ಲೆಂಡ್ ತಂಡ ಚೇಸಿಂಗ್ ವಿಚಾರದಲ್ಲಿ ಮಾತ್ರ ಭಾರತೀಯ ಕ್ರಿಕೆಟ್ ತಂಡ ಓಹಿಸಿದ್ದಕ್ಕಿಂತ ಅತ್ಯದ್ಭುತವಾಗಿ ಪ್ರದರ್ಶನ ನೀಡುವ ಮೂಲಕ 16 ಓವರ್ ಗಳಲ್ಲಿ ಭರ್ಜರಿ 169 ರನ್ನುಗಳನ್ನು ಚೇಸ್ ಮಾಡುವ ಮೂಲಕ ಈ ಬಾರಿಯ ಟಿ ಟ್ವೆಂಟಿ ವರ್ಲ್ಡ್ ಕಪ್ ಫೈನಲ್ ಗೆ ಪಾಕಿಸ್ತಾನ ತಂಡದ ಎದುರು ಆಡಲು ಪ್ರವೇಶವನ್ನು ಪಡೆದುಕೊಂಡಿದೆ. ಆರಂಭಿಕರಾಗಿ ಬ್ಯಾಟಿಂಗಿಗೆ ಇಳಿದ ಜಾಸ್ ಬಟ್ಲರ್ ಹಾಗೂ ಅಲೆಕ್ಸ್ ಹೇಲ್ಸ್ ಇಬ್ಬರೂ ಕೂಡ ಅಜೇಯರಾಗಿ ಉಳಿದುಕೊಂಡಿದ್ದರು‌.

ಟೀಮ್ ಇಂಡಿಯಾ ಸೆಮಿ ಫೈನಲ್ ನಲ್ಲಿ ಹೀನಾಯವಾಗಿ ಸೋಲಲು ಇರುವಂತಹ ಕಾರಣಗಳನ್ನು ಹುಡುಕುತ್ತಾ ಹೊರಟರೆ ಮೊದಲಿಗೆ ಕಂಡುಬರುವುದು ರೋಹಿತ್ ಶರ್ಮ ಅವರ ಕಳಪೆ ಮಟ್ಟದ ಕ್ಯಾಪ್ಟನ್ಸಿ ಎಂದು ಹೇಳಬಹುದಾಗಿದೆ. ಯಾಕೆಂದರೆ ಬೌಲಿಂಗ್ ವಿಚಾರದಲ್ಲಿ ಅವರು ಬುದ್ಧಿವಂತ ನಿರ್ಣಯಗಳನ್ನು ತೆಗೆದುಕೊಂಡಿದ್ದರೆ ಕನಿಷ್ಠ ಪಕ್ಷ ಭಾರತೀಯ ಕ್ರಿಕೆಟ್ ತಂಡ ಈ ರೀತಿಯಲ್ಲಿ ಸೋಲನ್ನು ಅನುಭವಿಸುತ್ತಿರಲಿಲ್ಲ ಎಂಬುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದು.

ಎಲ್ಲದಕ್ಕಿಂತ ಪ್ರಮುಖವಾಗಿ ಕೆಎಲ್ ರಾಹುಲ್ ರವರು ಆರಂಭಿಕ ಆಟಗಾರನಾಗಿ ಭಾರತೀಯ ಕ್ರಿಕೆಟ್ ತಂಡಕ್ಕೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದ್ದು ಅತ್ಯಂತ ಕಳಪೆ ಆಟಗಾರ ಎಂದು ಹೇಳಬಹುದು. ಇನ್ನು ಪ್ರತಿ ಬಾರಿ ತಂಡಕ್ಕೆ ನೆರವಾಗುತ್ತಿದ್ದ ಬೌಲಿಂಗ್ ಲೈನ್ ಅಪ್ ಈ ಪ್ರಮುಖ ಪಂದ್ಯದಲ್ಲಿ ಕೈಕೊಟ್ಟಿದ್ದು ನಿಜಕ್ಕೂ ಕೂಡ ತಂಡದ ದುರದೃಷ್ಟ ಎಂದು ಹೇಳಬಹುದಾಗಿದೆ.

ಎಲ್ಲಕ್ಕಿಂತ ಬೇಸರವಾಗುತ್ತಿರುವುದು ಬಹುತೇಕ ಪ್ರತಿಯೊಂದು ಪಂದ್ಯಗಳಲ್ಲಿ ಕೂಡ ಅರ್ಧಶತಕವನ್ನು ಬಾರಿಸುತ್ತಿದ್ದ ವಿರಾಟ್ ಕೊಹ್ಲಿ ಅವರು ಈ ಬಾರಿ ಕೂಡ ವಿಶ್ವಕಪ್ ಗೆಲ್ಲುವ ಕನಸನ್ನು ಕೈಬಿಡಬೇಕಾಗಿ ಬಂದಿದೆ ಎಂಬುದೇ ನಿಜಕ್ಕೂ ಕೂಡ ಬೇಸರವಾಗಿರುವಂತಹ ವಿಚಾರ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!