ನರೇಂದ್ರ ಮೋದಿ ಅವರು ಈ ಹಿಂದೆ ನೋಟ್ ಬ್ಯಾನ್ ಮಾಡಿರುವ ವಿಚಾರ ನಮಗೆ ಗೊತ್ತಿದೆ. ಈಗ 100 ರೂಪಾಯಿ ನೋಟನ್ನು ಚಲಾವಣೆಯಿಂದ ತೆಗೆಯುವ ನಿರ್ಧಾರ ಮಾಡಲಾಗಿದೆ ಎಂದು ಆರ್ಬಿಐ ಮಾಹಿತಿ ನೀಡಿದೆ ಹಾಗಾದರೆ ಇದರ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
2016 ನವೆಂಬರ್ 8 ರ ರಾತ್ರಿ ನಮ್ಮ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 1,000 ಮತ್ತು 500 ರೂಪಾಯಿಯ ನೋಟನ್ನು ಬ್ಯಾನ್ ಮಾಡಿ ಆದೇಶ ಹೊರಡಿಸಿದರು. ಅದು ನಡೆದು ಇಂದಿಗೆ 4 ವರ್ಷ ಕಳೆದಿದೆ. ಇದರ ಫಲವಾಗಿ ಹೊಸದಾಗಿ 2,000 ರೂಪಾಯಿ ಮತ್ತು 500ರ ನೋಟು ಚಲಾವಣೆಗೆ ಬಂತು. 2,000 ರೂಪಾಯಿಯ ಪಿಂಕ್ ನೋಟ್ ನ ಚಲಾವಣೆ ತಾತ್ಕಾಲಿಕವಾಗಿದ್ದು ಇದು ಸದ್ಯದಲ್ಲೇ ಅಮಾನ್ಯಿಕರಣ ಆಗುತ್ತದೆ ಎಂಬ ಸುದ್ದಿ ಆಗಾಗ ಕೇಳಿ ಬರುತ್ತಲೇ ಇದೆ. ಇದೀಗ ಹೊಸ ಸುದ್ದಿಯೊಂದು ಭಾರಿ ಸದ್ದು ಮಾಡುತ್ತಿದೆ. 100 ರೂಪಾಯಿ ಮುಖಬೆಲೆಯ ನೋಟುಗಳ ಚಲಾವಣೆ ಸ್ಥಗಿತಗೊಳ್ಳಲಿದೆ ಎಂದು ಆರ್ಬಿಐ ಎಜಿಎಂ ಮಹೇಶ್ ಅವರು ಮಾಹಿತಿ ನೀಡಿದ್ದಾರೆ.
ಇದೇ 2021ರ ವರ್ಷದ ಮಾರ್ಚ ತಿಂಗಳಿನ ಅಂತ್ಯದ ವೇಳೆಗೆ 100 ರೂಪಾಯಿಯ ಮುಖಬೆಲೆಯ ನೋಟುಗಳನ್ನು ಹಿಪಡೆಯಲಾಗುವುದು ಎಂದು ಹೇಳಿದ ಅವರು ಇದು ನೋಟ್ ಅಮಾನ್ಯಿಕರಣ ಅಲ್ಲ ಪ್ರಸರಣದಿಂದ ಹಿಂದಕ್ಕೆ ಪಡೆಯಲಾಗುವುದು ಎಂದು ಹೇಳಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಯೋತ್ಪಾದನೆ, ಕಪ್ಪು ಹಣ, ಖೋಟಾ ನೋಟು ದಂಧೆ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಸಲುವಾಗಿ ಹಾಗೂ ನಗದು ರಹಿತ ವ್ಯವಹಾರವನ್ನು ಉತ್ತೇಜಿಸಲು ನೋಟ್ ಬ್ಯಾನ್ ಮಾಡಲಾಗಿತ್ತು. ಇದೀಗ 100 ರೂಪಾಯಿ ಮುಖಬೆಲೆಯ ನೋಟಿನ ಪ್ರಸರಣ ಹಿಂದಕ್ಕೆ ಪಡೆದು ಗ್ರಾಹಕರಿಗೆ ಉತ್ತಮ ನೋಟನ್ನು ಕೊಡುವ ಮಹತ್ತರ ಉದ್ದೇಶ ಹೊಂದಲಾಗಿದೆ. ಈ ಮಾಹಿತಿಯನ್ನು ತಪ್ಪದೇ ಎಲ್ಲರಿಗೂ ತಿಳಿಸಿ, ಸರ್ಕಾರ ಮಾಡುವ ಜನ ಪರ ಯೋಜನೆಗಳಿಗೆ ಕೈ ಜೋಡಿಸೋಣ.