ಸರ್ಕಾರ ಈಗ ಎಲ್ಲಾ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಸಲು ಕಡ್ಡಾಯಗೊಳಿಸಿದೆ. HSRP ನಂಬರ್ ಪ್ಲೇಟ್ ಹಾಕಿಸುವುದಕ್ಕೆ ಫೆಬ್ರವರಿ 17 ಕೊನೆಯ ದಿನಾಂಕ ಆಗಿದ್ದು, ಆ ದಿನಾಂಕದ ಒಳಗೆ ಹಾಕಿಸಬೇಕು. ದೇಶದಲ್ಲಿ ವಾಹನಗಳ ವಿಚಾರಕ್ಕೆ ಆಗುತ್ತಿರುವ ಮೋಸ ಅಕ್ರಮಗಳನ್ನು ತಡೆಯುವ ಸಲುವಾಗಿ ಸರ್ಕಾರ ಈ ಒಂದು ಆದೇಶ ಜಾರಿಗೆ ತಂದೆ. ಹೈ ಸೆಕ್ಯೂರಿಟಿ ಹೊಂದಿರುವ ಈ ನಂಬರ್ ಪ್ಲೇಟ್ ಅನ್ನು ಬದಲಾಯಿಸಲು ಆಗುವುದಿಲ್ಲ.

ಹಾಗಾಗಿ ಮೋಸ ಆಗುವ ಸಂಖ್ಯೆ ಕಡಿಮೆ ಅಗುತ್ತದೆ. ದ್ವಿಚಕ್ರ ಅಥವಾ ಇನ್ಯಾವುದೇ ವಾಹನ ಹೊಂದಿರುವ ಎಲ್ಲರೂ ಕೂಡ HSRP ನಂಬರ್ ಪ್ಲೇಟ್ ಹಾಕಿಸಿಕೊಳ್ಳಬೇಕು. ಇದನ್ನು ಹಾಕಿಸುವುದಕ್ಕೆ ನೀವು boomyhsrp ವೆಬ್ಸೈಟ್ ಇಂದ ಮಾತ್ರ ಬುಕ್ ಮಾಡಿ, ನಿಮ್ಮ ಹತ್ತಿರದ ಡೀಲರ್ಶಿಪ್ ಆಫೀಸ್ ಆಯ್ಕೆ ಮಾಡಿ, ಅಲ್ಲಿ ಮಾತ್ರ ಹಾಕಿಸಬೇಕು.. hsrp ಮಾಡಿಸುವುದಕ್ಕೆ ಇನ್ನು ಕೆಲವೇ ದಿನಗಳು ಉಳಿದಿದ್ದು, ಒಂದು ವೇಳೆ ನೀವು ಇನ್ನು ಮಾಡಿಸಿಲ್ಲ ಎಂದರೆ, ಮೊಬೈಲ್ ನಲ್ಲಿ ಸುಲಭವಾಗಿ ಬುಕ್ ಮಾಡುವುದು ಹೇಗೆ ಎಂದು ತಿಳಿಸುತ್ತೇವೆ ನೋಡಿ..

1ಮೊದಲಿಗೆ Bookmyhsrp.com ಈ ಲಿಂಕ್ ಓಪನ್ ಮಾಡಿ. ಇದು HSRP ಬುಕ್ ಮಾಡುವ ಅಧಿಕೃತ ವೆಬ್ಸೈಟ್ ಆಗಿದೆ.
2ಇಲ್ಲಿ ಕಾಣುವ ಹೈ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ಅಥವಾ ಓನ್ಲಿ ಕಲರ್ ಸ್ಟಿಕರ್ ಎಂದು ಇರುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ.
3ಈ ಎರಡರಲ್ಲಿ ಒಂದು ಆಯ್ಕೆಯನ್ನು ಸೆಲೆಕ್ಟ್ ಮಾಡಿದಾಗ, ನೇರವಾಗಿ https://bookmyhsrp.com/plate/VahanBookingDetail.aspx ಈ ಲಿಂಕ್ ಓಪನ್ ಆಗುತ್ತದೆ.
4ಈಗ HSRP ಬುಕ್ ಮಾಡಲು ಡೀಟೇಲ್ಸ್ ಫಿಲ್ ಮಾಡಬೇಕಾದ ಪೇಜ್ ಓಪನ್ ಆಗುತ್ತದೆ.

5ಈ ಪೇಜ್ ನಲ್ಲಿ ವಾಹನ ನೋಂದಣಿ ಸ್ಥಿತಿ, ನೋಂದಣಿ ಸಂಖ್ಯೆ, ಚಾಸಿಸ್ ಸಂಖ್ಯೆ, ಇಂಜಿನ್ ಸಂಖ್ಯೆ ಇದೆಲ್ಲವನ್ನು ಫಿಲ್ ಮಾಡಿ.. ಬಳಿಕ ಇಲ್ಲಿ ಕ್ಲಿಕ್ ಮಾಡಿ ಎಂದು ಇರುವ ಆಪ್ಶನ್ ಸೆಲೆಕ್ಟ್ ಮಾಡಿ.

6ಈಗ ನಿಮ್ಮ ರಾಜ್ಯವನ್ನು ಆಯ್ಕೆ ಮಾಡಬೇಕು
7ಈಗ ನೀವು ಆಯ್ಕೆ ಮಾಡುವ ಊರಿನಲ್ಲಿ, ನಿಮ್ಮ ಹತ್ತಿರದ Fitment ಸ್ಥಳದಲ್ಲಿ, ನೀವು ಆಯ್ಕೆ ಮಾಡುವ ಸಮಯಕ್ಕೆ HSRP ಅಳವಡಿಸಲು ಅಪಾಯಿಂಟ್ಮೆಂಟ್ ಫಿಕ್ಸ್ ಮಾಡಲಾಗುತ್ತದೆ. ಬಳಿಕ ಬುಕಿಂಗ್ ಬಗ್ಗೆ ಪೂರ್ತಿ ಡೀಟೇಲ್ಸ್ ನೊಡುತ್ತೀರಿ.

8ನೀವು ನೀಡಿರುವ ಎಲ್ಲಾ ಮಾಹಿತಿ ಮತ್ತು ನಿಮ್ಮ ಆಯ್ಕೆ ಸರಿ ಇದೆ ಎಂದು ಚೆಕ್ ಮಾಡಿದ ಬಳಿಕ, HSRP ಗೆ ಪಾವತಿ ಮಾಡಬೇಕು. ಇಂಟರ್ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅಥವಾ ಇನ್ಯಾವುದೇ ಆನ್ಲೈನ್ ಪೇಮೆಂಟ್ ಮೂಲಕ ಹಣವನ್ನು ಪಾವತಿ ಮಾಡಬಹುದು.

9ಈಗ ನೀವು ಬುಕಿಂಗ್ ಪ್ರಕ್ರಿಯೆಯನ್ನು ಪೂರ್ತಿಗೊಳಿಸಿದ್ದೀರಿ ಎಂದು ಅರ್ಥ. ಸ್ವೀಕೃತಿ ಕಾಪಿಯನ್ನು ಡೌನ್ಲೋಡ್ ಮಾಡಬಹುದು ಅಥವಾ ಪ್ರಿಂಟೌಟ್ ತೆಗೆದುಕೊಳ್ಳಬಹುದು. ನೀವು ಆಯ್ಕೆ ಮಾಡಿರುವ ಸಮಯದಲ್ಲಿ ಸ್ಥಳಕ್ಕೆ ಭೇಟಿ ನೀಡು, HSRP ಅಳವಡಿಸಿಕೊಳ್ಳಬಹುದು.

ಇದಕ್ಕಾಗಿ ಬೇಕಾಗುವ ಮಾಹಿತಿ..
ಆದೇಶದ ದಿನಾಂಕ, ವಾಹನ ರೆಜಿ ನಂ, ಆರ್ಡರ್ ಐಡಿ, ಬ್ಯಾಂಕ್ ಟ್ರ್ಯಾಕಿಂಗ್ ಐಡಿ, ಪಾವತಿ/ಆರ್ಡರ್ ಸ್ಥಿತಿ/ಸ್ಥಿತಿ ಸಂದೇಶ, ಪಾರ್ಕ್+ಫಾಸ್ಟ್‌ಟ್ಯಾಗ್, ಫ್ರೇಮ್ ಮೊತ್ತ, HSRP ಮೊತ್ತ, ಬಿಲ್ಲಿಂಗ್ ಹೆಸರು, ಬಿಲ್ಲಿಂಗ್ ಮೊಬೈಲ್, ಬಿಲ್ಲಿಂಗ್ ಇಮೇಲ್ ಐಡಿ, ನೇಮಕಾತಿ ದಿನಾಂಕ ಸಮಯ, ಫಿಟ್ಮೆಂಟ್ ಸೆಂಟರ್ ವಿಳಾಸ, ಫಿಟ್ಮೆಂಟ್ ಶುಲ್ಕಗಳು, ವಹಿವಾಟಿನ ರಸೀದಿ, ಫಿಟ್ಮೆಂಟ್ ವ್ಯಕ್ತಿಯ ಹೆಸರು, ಮೊಬೈಲ್ ನಂ.. ಇದಿಷ್ಟು ಬೇಕಾಗುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!