ಉದ್ಯೋಗದ ನಿರೀಕ್ಷಯಲ್ಲಿರುವವರಿಗೆ ಇದೊಂದು ಒಳ್ಳೆಯ ಅವಕಾಶ ಕರ್ನಾಟಕ ಹಿಂದೂಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಹಾಸ್ಟೇಲ್ ವಾರ್ಡನ್ ಹುದ್ದೆಗಳು ಸೇರಿದಂತೆ ವಿವಿಧ ಖಾಲಿ ಇರುವ ಹುದ್ದೆಗಳ ನೇಮಕಾತಿ ಶೀಘ್ರದಲ್ಲೇ ನಡೆಯಲಿದೆ ಆಸಕ್ತರು ಅರ್ಜಿಸಲ್ಲಿ ಇದರ ಸದುಪಯೋಗ ಪಡೆದುಕೊಳ್ಳಿ. ಈ ಹುದ್ದೆಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
ಕರ್ನಾಟಕ ಲೋಕಸೇವಾ ಆಯೋಗವು ಮತ್ತೊಂದು ಹೊಸ ನೇಮಕಾತಿ ಅಧಿಸೂಚನೆಯನ್ನು ಶೀಘ್ರದಲ್ಲೇ ಪ್ರಕಟಿಸಲಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೇಲ್ ವಾರ್ಡನ್ ಹುದ್ದೆ ಸೇರಿದಂತೆ ಒಟ್ಟು 825 ವಿವಿಧ ಹುದ್ದೆಗಳಿಗೆ ಆನ್‌ಲೈನ್ ಅರ್ಜಿಗಳನ್ನು ಶೀಘ್ರದಲ್ಲೇ ತೆರೆಯಲಾಗುವುದು. ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು KPSC ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾದ ಅರ್ಹತಾ ಮಾನದಂಡಗಳನ್ನು ಪೂರೈಸಬೇಕು.
ಈ ಹುದ್ದೆಗಳ ವಿವರ ಹೀಗಿದೆ:
ಇಲಾಖೆ : ಹಿಂದೂಳಿದ ವರ್ಗಗಳ ಕಲ್ಯಾಣ ಇಲಾಖೆ
ಆಯ್ಕೆ ಪ್ರಾಧಿಕಾರ: ಕರ್ನಾಟಕ ಲೋಕಸೇವಾ ಆಯೋಗ
ಹುದ್ದೆಗಳ ಹೆಸರು: ವಾರ್ಡನ್ ಮತ್ತು ಇತರೆ ಹುದ್ದೆಗಳು
ಹುದ್ದೆಗಳು: 825
ಅಡುಗೆಯವರು-300
ಅಡುಗೆ ಸಹಾಯಕರು-300
ಹಾಸ್ಟೆಲ್ ವಾರ್ಡನ್-150
ರಾತ್ರಿ ಕಾವಲುಗಾರರು-75
ಈ ಹುದ್ದೆಗಳಿಗೆ ವಿದ್ಯಾರ್ಹತೆ ಹೀಗಿದೆ
ಈ ಹುದ್ದೆಗಳಿಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಅಂಗೀಕೃತ ವಿಶ್ವವಿದ್ಯಾಲಯದಿಂದ ಹತ್ತನೇ, ಪಿಯುಸಿ, ಪದವಿ, ಬಿಎಡ್ ವಿದ್ಯಾರ್ಹತೆಯನ್ನು ಹೊದಿರಬೇಕು.
ವಯೋಮಿತಿ: ಕನಿಷ್ಟ 18 ವರ್ಷ ತುಂಬಿರಬೇಕು ಅಭ್ಯರ್ಥಿಗಳು ಗರಿಷ್ಟ ಅಂದರೇ 35 ವರ್ಷದವರೆಗೆ ಅರ್ಜಿ ಸಲ್ಲಿಸಬಹುದು.
ವಯೋಮಿತಿ ಸಡಲಿಕೆ: ಪಜಾ/ ಪಪಂ : 05 ವರ್ಷ2ಎ/ 2ಬಿ/ 3ಎ/ 3ಬಿ : 03 ವರ್ಷವಿಕಲಚೇತನ ಅಭ್ಯರ್ಥಿಗಳಿಗೆ: 10 ವರ್ಷ
ಅರ್ಜಿಸಲ್ಲಿಸಲು ಅಧಿಕೃತ ವೆಬ್ಸೈಟ್: KPSC ಅಧಿಕೃತ ವೆಬ್ಸೈಟ್ kpsc.kar.nic.in ವೆಬ್ಸೈಟ್ ನಲ್ಲಿ ನಿಗದಿಪಡಿಸಿದ ದಿನಾಂಕಗಳಂದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು