ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿ ಚಕ್ರಕ್ಕೆ ಸಂಚಾರ ಮಾಡುತ್ತವೆ. 2024ರ ಆಗಸ್ಟ್ ತಿಂಗಳ ಎಲ್ಲ ರಾಶಿಯವರ ಮಾಸ ಭವಿಷ್ಯವನ್ನು ತಿಳಿಯೋಣ.

ಮೇಷ ರಾಶಿ :-ಈ ರಾಶಿಯ ಜನರು ಭೂಮಿಗೆ ಕುರಿತಾದ ಯಾವುದೇ ವಿಚಾರದಲ್ಲಿ ಮುಂದುವರೆಯಬಹುದು. ನೂತನ ಭೂಮಿ ಖರೀದಿ ಮಾಡುವವರು ಅಥವಾ ಇರುವ ಭೂಮಿಯನ್ನು ಬೇರೆಯವರಿಗೆ ಮಾರಾಟ ಮಾಡುವ ಜನರು ಆಗಸ್ಟ್ ತಿಂಗಳಿನಲ್ಲಿ ಆ ಕೆಲಸಗಳನ್ನು ಮಾಡಬಹುದು.
ಪರಿಹಾರ :ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಆಗಸ್ಟ್ ತಿಂಗಳ 4 ಮಂಗಳವಾರದಂದು 900 ಗ್ರಾಂ ತೊಗರಿ ಬೇಳೆ ಮತ್ತು ಕೆಂಪು ಪುಷ್ಪವನ್ನು ಕೊಡಬೇಕು.

ವೃಷಭ ರಾಶಿ :-ಯಾವುದೇ ಕೆಲಸ ಮಾಡಲು ಹೋದರು ಅದು ನಿಧಾನಗತಿಯಲ್ಲಿ ಸಾಗುತ್ತಿರುತ್ತದೆ. ಉದ್ಯೋಗ ಬದಲಾವಣೆ ಮಾಡಲು ಆಗಸ್ಟ್ ತಿಂಗಳಿನಲ್ಲಿ ಕಷ್ಟಕರ. ವಿದೇಶದಲ್ಲಿ ಕೆಲಸ ಮಾಡಲು ಇಚ್ಛೆ ಪಡುವ ಜನರಿಗೆ ಆಗಸ್ಟ್ ತಿಂಗಳು ಸೂಕ್ತವಾದ ಸಮಯ.
ಪರಿಹಾರಗಳು :ಆಗಸ್ಟ್ ತಿಂಗಳಿನಲ್ಲಿ ಬರುವ 4 ಶನಿವಾರಗಳು ವೃದ್ರಶ್ರಮಗಳಿಗೆ ಭೇಟಿ ನೀಡಿ ಅವರಿಗೆ ಹೊದ್ದಿಕೆಗಳನ್ನು ಕೊಡುವುದು ಒಳ್ಳೆಯದು. ಬೀದಿ ಬದಿಯಲ್ಲಿ ಇರುವ ನಿರ್ಗತಿಕರು, ಗುಡಿಸಿಲಿನಲ್ಲಿ ವಾಸ ಮಾಡುವ ಜನರು ಇವರಿಗೆ ಹೊದ್ದಿಕೆ ಮತ್ತು ಸ್ವೆಟರ್ಗಳನ್ನು ದಾನವಾಗಿ ಕೊಟ್ಟರೆ ಒಳ್ಳೆಯದು.

ಮಿಥುನ ರಾಶಿ :-ಮಿಥುನ ರಾಶಿಯ ಉದ್ಯೋಗದ ನಿರೀಕ್ಷೆಯಲ್ಲಿರುವ ಜನರಿಗೆ ಆಗಸ್ಟ್ ತಿಂಗಳು ಒಳ್ಳೆಯ ಕಾಲ, ಉದ್ಯೋಗ ಬದಲಾವಣೆ ಮಾಡುವ ಇಚ್ಛೆ ಇರುವ ಜನರು ಕೂಡ ಆಗಸ್ಟ್ ತಿಂಗಳಿನಲ್ಲಿ ಬದಲಾವಣೆಯನ್ನು ಮಾಡಬಹುದು.
ಪರಿಹಾರಗಳು:4 ಸೋಮವಾರ ಶಿವನ ದೇವಸ್ಥಾನಕ್ಕೆ ಹಾಲಿನ ಅಭಿಷೇಕ ಕೊಡುವುದು ಅಥವಾ ಒಣದ್ರಾಕ್ಷಿ ಅಭಿಷೇಕ ಮಾಡಿಸುವುದು ಒಳ್ಳೆಯ ಫಲಗಳನ್ನು ತಂದುಕೊಡುತ್ತದೆ. ಪ್ರತಿನಿತ್ಯ ಸೂರ್ಯ ನಮಸ್ಕಾರ ಮಾಡುವುದು ಶುಭ ಫಲಗಳನ್ನು ನೀಡುತ್ತದೆ.

ಕರ್ಕಾಟಕ ರಾಶಿ :-ಈ ರಾಶಿಯ ಜನರಿಗೆ ಆಗಸ್ಟ್ ತಿಂಗಳಿನಲ್ಲಿ ದುಡ್ಡು ಚೆನ್ನಾಗಿ ಬರುತ್ತದೆ. ತಾಯಿಯ ಜೊತೆಗಿನ ಬಾಂಧವ್ಯ ಅಭಿವೃದ್ಧಿಯಾಗುತ್ತದೆ. ತಾಯಿಗೆ ಉಡುಗೊರೆಗಳನ್ನು ನೀಡುವ ಸಾಧ್ಯತೆ ಇದೆ.
ಪರಿಹಾರಗಳು: 4 ಶುಕ್ರವಾರ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಮಲ್ಲಿಗೆ ಹೂವು ಕೊಡಬೇಕು. ಊದುಬತ್ತಿ ಮತ್ತು ಕರ್ಪೂರವನ್ನು ಸಹ ದೇವರಿಗೆ ಕೊಡಬೇಕು ಇದರಿಂದ, ಒಳ್ಳೆಯ ಫಲಗಳು ಸಿಗುತ್ತವೆ.

ಸಿಂಹ ರಾಶಿ:-ಈ ರಾಶಿಯ ಜನರು ಆಗಸ್ಟ್ ತಿಂಗಳಿನಲ್ಲಿ ಭೂಮಿ ಖರೀದಿ ಮಾಡುವ ಯೋಚನೆಯಲ್ಲಿ ಇದ್ದರೆ ಈ ಮಾಸ ಅದಕ್ಕೆ ಸೂಕ್ತ ಕಾಲ.
ಪರಿಹಾರಗಳು :ಸಾಯಿಬಾಬಾ ದೇವಸ್ಥಾನಗಳು ಅಥವಾ ರಾಘವೇಂದ್ರ ದೇವಸ್ಥಾನಗಳಿಗೆ 4 ಗುರುವಾರ ಹೋಗಿ ಬಂದರೆ ಒಳ್ಳೆಯದು. 300 ಗ್ರಾಂ ಕಡಲೆ ಬೇಳೆ ಕೊಡುವುದು ಉತ್ತಮ ಫಲಗಳನ್ನು  ತಂದುಕೊಡುತ್ತದೆ.

ಕನ್ಯಾ ರಾಶಿ :-ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಏರುಪೇರು ಕಂಡುಬರುತ್ತದೆ ಕನ್ಯಾ ರಾಶಿಯ ಜನರಿಗೆ. ಆಗಸ್ಟ್ ತಿಂಗಳಿನ ಮೊದಲು 15 ದಿವಸ ಈ ತೊಂದರೆ ಕಾಡಬಹುದು, ಜೊತೆಗೆ ಅನಿರೀಕ್ಷಿತ ಕೆಲಸಗಳು ಸಹ ಬರಬಹುದು. ನಂತರದ 15 ದಿವಸ ಹಣಕಾಸು ಚೆನ್ನಾಗಿರುತ್ತೆ.
ಪರಿಹಾರಗಳು :ಹಸುವಿನ ಸೇವೆ ಮಾಡುವುದು ಒಳ್ಳೆಯದು. ಶನಿವಾರ ಅನಾಥಾಶ್ರಮ ಅಥವಾ ವೃದ್ಧಾಶ್ರಮಗಳಿಗೆ ಊಟದ ವ್ಯವಸ್ಥೆ ಮಾಡುವುದು ಮಂಗಳಕರ ಫಲಗಳನ್ನು ತಂದುಕೊಡುತ್ತದೆ.

ತುಲಾ ರಾಶಿ:- ನೂತನ ಮನೆ ಖರೀದಿ, ನೂತನ ಜಮೀನು ವ್ಯಾಪಾರ ವ್ಯವಹಾರಗಳಿಗೆ ಕೈ ಹಾಕದೆ ಇರುವುದು ಉತ್ತಮ ಈ ರೀತಿಯ ವಿಚಾರವಾಗಿ ತುಲಾ ರಾಶಿಯ ಜನರಿಗೆ ಸಮಸ್ಯೆಗಳು ಎದುರಾಗಬಹುದು. ಇದರಿಂದ, ಹಣ ನಷ್ಟ ಕೂಡ ಸಂಭವಿಸುವ ಸಾಧ್ಯತೆ ಇದೆ. ಈ ವಿಚಾರಗಳ ಕುರಿತು ಚಿಂತೆ ಮಾಡಿ ಆರೋಗ್ಯ ಸಮಸ್ಯೆಗಳಿಗೆ ಕೂಡ ಬರಬಹುದು.
ಪರಿಹಾರಗಳು :4 ಮಂಗಳವಾರಗಳು ಆಗಸ್ಟ್ ತಿಂಗಳಿನಲ್ಲಿ, 900 ಗ್ರಾಂ ತೊಗರಿ ಬೇಳೆಯನ್ನು ಮತ್ತು ಕೆಂಪು ವಸ್ತ್ರವನ್ನು ಸುಬ್ರಹ್ಮಣ್ಯ ಸ್ವಾಮಿ ದೇವರಿಗೆ ಕೊಡಬೇಕು. ಸೂರ್ಯ ನಮಸ್ಕಾರ ಹಾಗೂ ಧ್ಯಾನವನ್ನು ರೂಢಿ ಮಾಡಿಕೊಳ್ಳಬೇಕು..

ವೃಶ್ಚಿಕ ರಾಶಿ:- ಈ ರಾಶಿಯ ಜನರು ಶುಭ ಸಮಾರಂಭಗಳನ್ನು ಮಾಡುವ ಇಚ್ಛೆ ಹೊಂದಿದ್ದರೆ, ಅದನ್ನು ಆಗಸ್ಟ್ ತಿಂಗಳಿನಲ್ಲಿ ಮಾಡಬಹುದು.
ಪರಿಹಾರಗಳು: ಶಿವ ಪಾರ್ವತಿಯ ದೇವಸ್ಥಾನಕ್ಕೆ ಸೋಮವಾರ ಇಲ್ಲ ಮಂಗಳವಾರ ಹೋಗುವುದು ಉತ್ತಮ. ದೇವಸ್ಥಾನಗಳಿಗೆ ಕೈಯಲ್ಲಿ ಆಗುವಷ್ಟು ಕಾಣಿಕೆಯನ್ನು ಕೊಡಬೇಕು.

ಧನಸ್ಸು ರಾಶಿ:- ಧನು ರಾಶಿ ಜನರಿಗೆ ಶತ್ರುಗಳ ನಾಶ ಆಗುವ ಸಾಧ್ಯತೆ ಆಗಸ್ಟ್ ತಿಂಗಳಿನಲ್ಲಿ ಇದೆ. ಅದರ, ಜೊತೆಗೆ ಸರ್ಕಾರಿ ಕೆಲಸಕ್ಕೆ ಪ್ರಯತ್ನ ಪಡುತ್ತಿದ್ದರೆ ತೊಂದರೆಗಳನ್ನು ಅನುಭವಿಸುವ ಸಾಧ್ಯತೆ ಸಹ ಇದೆ. ನೂತನ ಮನೆ ನಿರ್ಮಾಣ ಮಾಡಲು ಈ ತಿಂಗಳು ಒಳ್ಳೆಯ ಕಾಲ.
ಪರಿಹಾರಗಳು: ಸೂರ್ಯ ನಮಸ್ಕಾರ ಮಾಡಬೇಕು ಜೊತೆಗೆ ತಂದೆಯ ತಾಯಿಯ ಆಶೀರ್ವಾದವನ್ನು ಪಡೆದುಕೊಳ್ಳಬೇಕು. ಶುಕ್ರವಾರದಂದು ಮಹಾಲಕ್ಷ್ಮಿ ದೇವಸ್ಥಾನಕ್ಕೆ 600 ಗ್ರಾಂ ಅವರೆಕಾಳನ್ನು ದಾನವಾಗಿ ಕೊಡಬೇಕು.

ಮಕರ ರಾಶಿ:- ಮಕರ ರಾಶಿಯ ಜನರು ಆಗಸ್ಟ್ ತಿಂಗಳಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ಅಥವಾ ಸರ್ಕಾರಿ ಉದ್ಯೋಗಕ್ಕೆ ಪ್ರಯತ್ನ ಪಡುತ್ತಿದ್ದಾರೆ ಅದು, ಸಫಲವಾಗುವ ಸಾಧ್ಯತೆ ಇದೆ.
ಪರಿಹಾರಗಳು :ಸೂರ್ಯ ನಮಸ್ಕಾರ ಪ್ರತಿನಿತ್ಯ ಮಾಡಬೇಕು ಅದರ ಜೊತೆಗೆ ಭಾನುವಾರದಂದು ವೆಂಕಟೇಶ್ವರ ದೇವಸ್ಥಾನಕ್ಕೆ 1/2 ಕೆಜಿ ದಾಳಿಂಬೆ ಹಣ್ಣನ್ನು ದಾನವಾಗಿ ಕೊಡಬೇಕು.

ಕುಂಭ ರಾಶಿ:- ಹಾರ್ದಿಕ ತೊಂದರೆಗಳಿಂದ ಕುಂಭ ರಾಶಿಯವರು ಆಗಸ್ಟ್ ತಿಂಗಳಿನಲ್ಲಿ ಹೊರ ಬರುವರು ಅದರ, ಜೊತೆಗೆ ಅವರಿಗೆ ಹಣಕಾಸಿನ ವಿಚಾರದಲ್ಲಿ ಎಲ್ಲ ಸಮಸ್ಯೆಗಳು ದೂರವಾಗಿ ಹಣದ ಒಳಹರಿವು ಚೆನ್ನಾಗಿ ಇರುತ್ತದೆ. ಬೇರೆಯವರಿಂದ ಬರಬೇಕಾದ ಹಣ ಕೂಡ ಬಂದು ಕೈ ಸೇರುತ್ತದೆ.

ಪರಿಹಾರಗಳು : ಮಹಾಲಕ್ಷ್ಮಿ ದೇವಸ್ಥಾನಕ್ಕೆ ಮಲ್ಲಿಗೆ ಹೂವು, ಸ್ವಲ್ಪ ತುಪ್ಪ, ಕರ್ಪೂರ ಮತ್ತು ಗಂಧದ ಕಡ್ಡಿ ಇವುಗಳನ್ನು ಶುಕ್ರವಾರ ಸಂಜೆಯ ಸಮಯದಲ್ಲಿ ದೇವರಿಗೆ ಸಮರ್ಪಣೆ ಮಾಡಬೇಕು.

ಮೀನ ರಾಶಿ:- ಈ ರಾಶಿಯವರ ತಾಯಿಗೆ ಆರೋಗ್ಯ ಸಮಸ್ಯೆ ಕಾಡಬಹುದು. ಬಿಸಿನೆಸ್ ವಿಚಾರವಾಗಿ ಸರಿಯಾದ ನಿರ್ಧಾರಗಳನ್ನು ಕೈಗೊಂಡರೆ ಒಳ್ಳೆಯದು ಹಾಗೂ ಉತ್ತಮ ಫಲಗಳು ಲಭಿಸುತ್ತದೆ ಜೊತೆಗೆ ಲಾಭ ಗಳಿಕೆ ಕೂಡ ಹೆಚ್ಚಾಗಿ ಆಗುವ ಸಾಧ್ಯತೆ ಇದೆ. ಆದರೆ, ಸರಿಯಾದ ನಿರ್ಧಾರಗಳನ್ನು ಮಾಡುವುದು ಮೀನ ರಾಶಿಯವರ ಮೇಲೆ ಅವಲಂಬಿತವಾಗಿ ಇರುತ್ತದೆ.

ಪರಿಹಾರಗಳು :ಶನಿವಾರ ಬೆಳಗ್ಗೆ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಹೆಸರುಕಾಳನ್ನು 1/2 ಕೆಜಿ ದಾನವಾಗಿ ಕೊಡಬೇಕು. ಇದರಿಂದ ಒಳ್ಳೆಯ ಫಲ ಲಭಿಸುತ್ತದೆ.ಇದು ಕೇವಲ ರಾಶಿಗಳ ಗೋಚಾರ ಫಲಗಳು ಅಷ್ಟೇ, ಜನ್ಮ ಜಾತಕಕ್ಕೆ ಮತ್ತು ಇದಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.

ಶ್ರೀ ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513 
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಾಹು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ. ಈ ಕೂಡಲೇ ನಮ್ಮ ನಂಬರಿಗೆ ಕರೆಮಾಡಿ 9606655513

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!