ಸಾಮುದ್ರಿಕ ಶಾಸ್ತ್ರ ವೈದಿಕ ಪರಂಪರೆಯಲ್ಲಿ ಒಂದು ಭಾಗ ಆಗಿದ್ದು ವ್ಯಕ್ತಿಯ ಮುಖ ಸೆಳೆತ ಓದುವಿಕೆ ಹಾಗೂ ಸಂಪೂರ್ಣ ದೇಹದ ವಿಶ್ಲೇಷಣೆ ಆಗಿದೆ ಇನ್ನೂ ಪುರಾತನ ಕಾಲದಿಂದ ಕೂಡ ಈ ಪದ್ಧತಿ ಅಳವಡಿಕೆಯಲ್ಲಿ ಇದ್ದು ಮುಖ ನೋಡಿ ಮಣೆ ಹಾಕಬೇಡಿ ಎಂಬ ಮಾತು ಈ ಶಾಸ್ತ್ರದಿಂದ ಉಲ್ಲೇಖ ಈ ಶಾಸ್ತ್ರದಲ್ಲಿ ಹೆಣ್ಣು ಇಲ್ಲವೇ ಗಂಡಿನ ಕಣ್ಣು ಮಚ್ಚೆ ಹಾಗೂ ದೇಹದ ಆಕಾರವನ್ನು ನೋಡಿ ಅವರ ಗುಣ ಹಾಗೂ ನಡತೆಯನ್ನು ಪರಿಗಣಿಸಲ್ಪಟ್ಟಿದೆ ಇನ್ನೂ ಪಾದ ಬೆರಳು ಮತ್ತು ಕೈ ಬೆರಳು ನೋಡಿ ಶಾಸ್ತ್ರವನ್ನು ಹೇಳುತ್ತಾರೆ.
ಹಿಂದಿನ ಕಾಲದಲ್ಲಿ ಹೆಣ್ಣು ನೋಡಲು ಹೋದಾಗ ಇವೆಲ್ಲವನ್ನೂ ಪರಿಗಣಿಸಿ ಮದುವೆಯ ಮಾತುಕತೆ ನಡೆಸುತ್ತಿದ್ದಾರೆ ಎಂದು ಹಿರಿಯರು ಹೇಳುತ್ತಿದ್ದರು ಹಾಗಾದ್ರೆ ಇಂದಿನ ಈ ಲೇಖನದಲ್ಲಿ ಯಾವ ಭಾಗವನ್ನು ಗಣನೆಗೆ ಸಾಮುದ್ರೀಕ ಶಾಸ್ತ್ರದಲ್ಲಿ ಇದೆ ಎಂಬುದನ್ನು ನೋಡೋಣ ಸಾಮುದ್ರಿಕ ಶಾಸ್ತ್ರದಲ್ಲಿ ಮಹಿಳೆಯರ ಮುಖ ದೇಹದ ಭಾಗ ಹಾಗೂ ಗುಣ ಲಕ್ಷಣಗಳನ್ನು ನೋಡಿ ಅವರ ಅದೃಷ್ಟದ ಬಗ್ಗೆ ತಿಳಿಯುವ ಪ್ರಯತ್ನ ಮಾಡುತ್ತಾ ಇದ್ದರು.
ಇನ್ನೂ ಹೆಣ್ಣನ್ನು ದೇವತೆಗೆ ಹೋಲಿಸುತ್ತಾರೆ ಪುರಾತನ ಕಾಲದಿಂದಲೂ ದೇವಿಯ ಸ್ವರೂಪ ಎಂದು ಪೂಜಿಸುತ್ತಾರೆ ಮನೆಯಲ್ಲಿ ಇರುವ ಹೆಣ್ಣು ಸದಾ ಮನೆಯ ಸುಖ ಶಾಂತಿ ನೆಮ್ಮದಿ ಹಾಗೂ ಐಶ್ವರ್ಯವನ್ನು ತರುತ್ತಾರೆ ಮನೆಯ ಹೆಣ್ಣು ಮಗಳು ಸದಾ ನಗುತ ನಗುತ ಇದ್ದರೆ ಆ ಮನೆ ಸದಾ ಸಮೃದ್ಧಿ ಹಾಗೂ ಖುಷಿ ಶಾಂತಿ ಇಂದ ಕೂಡಿದ್ದು ಹೆಣ್ಣು ಮನೆಯ ಕಣ್ಣು ಅವಳು ಖುಷಿಯಿಂದ ಇದ್ದರೆ ಆ ಮನೆಯು ಸದಾ ಸಮೃದ್ಧಿಯಿಂದ ಕೂಡಿರುತ್ತದೆ
ಮನೆಯ ಯಜಮಾನಿ ಸಂತೋಷ ಇದ್ದರೆ ಆ ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರುತ್ತಾಳೆ ಇನ್ನೂ ಪ್ರತಿಯೊಬ್ಬರ ಗುಣ ಲಕ್ಷಣಗಳು ವಿಭಿನ್ನ ಆಗಿರುತ್ತದೆ ಇದರಲ್ಲಿ ಪುರುಷ ಮತ್ತು ಸ್ತ್ರೀ ಲಕ್ಷಣಗಳು ವಿಭಿನ್ನ ಸಮುದ್ರಿಕ ಶಾಸ್ತ್ರದಲ್ಲಿ ಇದರ ಬಗ್ಗೆ ಉಲ್ಲೇಖ ಇದ್ದು ಅದರ ಬಗ್ಗೆ ತಿಳಿಯೋಣ . ಈ ಶಾಸ್ತ್ರದಲ್ಲಿ ಹೆಣ್ಣಿನ ಎತ್ತರ ಅಳತೆ ಲಕ್ಷಣ ಮೂಲಕ ಲಕ್ಷಣ ಬಗ್ಗೆ ತಿಳಿಯಬಹುದು ಹೆಣ್ಣು ಮಕ್ಕಳ ಹಣೆಯ ಭಾಗವು ಅಗಲವಾಗಿದ್ದು ಆ ಹೆಣ್ಣು ಮಗಳು ತನ್ನ ಗಂಡನ ಮನೆಗೆ ಹೋದಾಗ ಆ ಮನೆಯಲ್ಲಿ ಯಾವುದೇ ಕೊರತೆ ಇಲ್ಲದೇ ಸುಖ ಸಂಪನ್ನವಾಗಿರುತದೆ ಹಾಗೂ ಉದ್ದನೆಯ ಬೆರಳನ್ನು ಹೊಂದಿರುವ ಹೆಣ್ಣು ಮಕ್ಕಳು ತಮ್ಮ ಗಂಡಂದಿರ ಪಾಲಿಗೆ ಅದೃಷ್ಟ ದೇವತೆ ಕೆಲವು ಹೆಣ್ಣು ಮಕ್ಕಳು ಉದ್ದನೆಯ ಕತ್ತನ್ನು ಹೊಂದಿದ್ದು ಅವರು ಹುಟ್ಟಿದ ಮನೆ ಹಾಗೂ ಹೋದ ಮನೆ ಎರಡು ಕಡೆಯೂ ಸಂಪತ್ತನ್ನು ತರುತ್ತಾರೆ ಎಂದು ಶಾಸ್ತ್ರದಲ್ಲಿ ಉಲ್ಲೇಖವಾಗಿದೆ
ಇನ್ನೂ ಮಹಿಳೆಯರು ಉದ್ದನೆಯ ಹಾಗೂ ನೇರ ತೋಳುಗಳನ್ನು ಹೊಂದಿದ್ದು ದಪ್ಪಗಿರುವ ಮಹಿಳೆಯನ್ನು ಅವರ ಪತಿಯು ತುಂಬಾ ಪ್ರೀತಿಸುತ್ತಾರೆ ಹಾಗೂ ದಪ್ಪಗಿರುವ ಮಹಿಳೆಯರು ಆರ್ಥಿಕವಾಗಿ ಏನೇ ಕಷ್ಟ ಬಂದರು ಸದೃಢವಾಗಿ ಎದುರಿಸುವ ಸಾಮರ್ಥ್ಯ ಹೊಂದಿರುತ್ತಾರೆ ಇನ್ನು ದುಂಡನೆಯ ಮುಖ ಮತ್ತು ದೊಡ್ಡದಾದ ಕಣ್ಣು ನೋಡಲು ಆಕರ್ಷಕವಾಗಿದ್ದು ಈ ಹೆಣ್ಣು ಮನೆಯಲ್ಲಿ ಸದಾ ಖುಶಿ ಹಾಗೂ ಅಲ್ಹಾದಕರ ವಾತಾವರಣವನ್ನು ನಿರ್ಮಿಸಿ ಸದಾ ದಯಾಳು ಮತ್ತು ಕರುಣಾಮಯಿ ಸ್ವಭಾವದವಳು ಎಂದು ಪರಿಗಣಿಸಲಾಗುತ್ತೆ ಇಂತಹ ಮಹಿಳೆಯರು ತನ್ನ ಗಂಡ ಮನೆಯಲ್ಲಿ ಸದಾ ಸಂತೋಷದಿಂದ ಕೂಡಿದ್ದು ತನ್ನ ಗಂಡನಿಗೆ ತುಂಬಾ ನಿಷ್ಟೆಯಿಂದ ಕೂಡಿರುತ್ತಾರೆ
ಇನ್ನೂ ಹೆಣ್ಣಿನ ನಾಲಿಗೆ ಕೆಂಪು ಹಾಗೂ ವಿಭಿನ್ನವಾಗಿ ಇದ್ದು ನೋಡಲು ಸುಂದರವಾಗಿ ಕಾಣುವ ಹೆಣ್ಣು ಮಕ್ಕಳು ಕುಟುಂಬದ ಬಗ್ಗೆ ಸಂಪೂರ್ಣ ಕಾಳಜಿ ವಹಿಸುತ್ತಾರೆ ತುಟಿಯು ದಪ್ಪಗೆ ದುಂಡಗೆ ಇದ್ದವರು ಅವರ ಜೀವನದಲ್ಲಿ ಯಾವುದೇ ಕೆಟ್ಟ ಘಟನೆ ನಡೆಯದೇ ಸದಾ ಸಂತೋಷದಿಂದ ಇರುತ್ತಾರೆ ಇನ್ನೂ ಯಾವ ಮಹಿಳೆಯ ಮೇಲು ತುಟಿ ದೊಡ್ಡದಾಗಿ ಇರುತ್ತದೆಯೋ ಅವರು ಜಗಳಗಂಟಿ ಹಾಗೂ ತುಂಬಾ ಕೋಪದ ಸ್ವಭಾವ ಹೊಂದಿರುತ್ತಾರೆ ಹಲ್ಲುಗಳ ನಡುವೆ ಅಂತರ ಇದ್ದವರು ಬಹಳ ಭಾಗ್ಯಶಾಲಿ ಆಗಿರುತ್ತಾರೆ
ಇನ್ನೂ ಉದ್ದನೆಯ ತೆಳ್ಳಗಿನ ಕತ್ತನ್ನು ಹೊಂದಿದ್ದು ಮದುವೆಯಾದ ಪುರುಷನ ವ್ಯಾಪಾರಸ್ಥರು ಆಗಿದ್ದಲ್ಲಿ ಅವರ ಜೀವನದಲ್ಲಿ ಉನ್ನತಿ ಸಾಧಿಸುತ್ತಾರೆ ಹಾಗೂ ಈ ಮಹಿಳೆಯರು ಭಾಗ್ಯಶಾಲಿ ಆಗಿರುತ್ತಾರೆ ಮಹಿಳೆಯ ಕೈ ಬೆರಳಿಗೆ ಶಂಖ ಹಾಗೂ ಶುಭ ಚಿನ್ಹೆ ಇದ್ದಲ್ಲಿ ಆಕೆಯ ಸೌಭಾಗ್ಯವನ್ನು ಕಾಣಬಹುದು ಕಣ್ಣು ಕೆಂಪು ಆಗಿರುವ ಮಹಿಳೆಯ ಜಗಳ ಗಂಟಿ ಹಾಗೂ ಕುತ್ತಿಗೆ ದಪ್ಪ ಹೊಂದಿರುವ ಮಹಿಳೆಯು ಶಾಂತ ಸ್ವಭಾವದ ಪುರುಷನನ್ನು ಮದುವೆ ಆದಲ್ಲಿ ಜಗಳ ಜಾಸ್ತಿ ಆಗುತ್ತೆ ಇನ್ನೂ ಕಾಲು ಬೆರಳು ಉದ್ದವಾಗಿರುವ ಹೆಣ್ಣು ಮಕ್ಕಳು ಲಕ್ಷ್ಮಿ ಸ್ವರೂಪ ಎಂದು ಉಲ್ಲೇಖಿಸುತ್ತಾರೆ
ಈ ಮಹಿಳೆಯು ಹೋದ ಕಡೆ ಸುಖ ಶಾಂತಿ ಹಾಗೂ ಧನ ಸಂಪತ್ತು ಕೂಡಿದು ಯಾವ ಮಹಿಳೆಯ ಪಾದ ಗುಲಾಬಿ ಬಣ್ಣದ ಹಾಗೂ ಮೃದುವಾಗಿದಲ್ಲಿ ಆ ಮಹಿಳೆಯು ಸಂಪೂರ್ಣ ಮಹಿಳೆ ಆಗಿದ್ದು ಈ ಮಹಿಳೆಯ ದೈಹಿಕ ಸಂಪರ್ಕದಲ್ಲಿ ತನ್ನ ಗಂಡನಿಗೆ ಸಂಪೂರ್ಣವಾಗಿ ತನ್ನನ್ನು ವಿನಿಯೋಗಿಸಿ ಆತ ಎಂದು ಆಕೆಯನ್ನು ದೂರ ಮಾಡುವ ಸಂದರ್ಭ ಇರುವುದಿಲ್ಲ ಅಷ್ಟು ಚೆನ್ನಾಗಿ ತನ್ನ ಗಂಡ ಅಥವಾ ಪ್ರೇಮಿಯನ್ನು ನೋಡಿಕೊಳ್ಳುತ್ತಾರೆ
ಚಪ್ಪಟೆ ಪಾದಗಳನ್ನು ಹೊಂದಿರುವ ಮಹಿಳೆಯರು ತನ್ನ ಅತ್ತೆ ಮಾವ ಅದೃಷ್ಟ ದೇವತೆ ಆಗಿದ್ದು ಇನ್ನೂ ಕುಟುಂಬದಲ್ಲಿ ಯಾವುದೇ ಕಲಹ ಬಿಡೋದಿಲ್ಲ ಕುಟುಂಬ ಸದಸ್ಯರ ಜೊತೆ ಒಗ್ಗುಡುತ್ತಾರೆ ಹಾಗೂ ಉದ್ದವಾಗ ಕಿವಿಯನ್ನು ಹೊಂದಿರುವ ಮಹಿಳೆಯರು ಭಾಗ್ಯಶಾಲಿ ಆಗಿದ್ದು ಆಯಸ್ಸು ಮತ್ತು ಆರೋಗ್ಯ ವೃದ್ಧಿಯಾಗುತ್ತದೆ ಎಂದು ಸಮುದ್ರಿಕಾ ಶಾಸ್ತ್ರದಲ್ಲಿ ಉಲ್ಲೇಖ ಇದೆ ಇನ್ನೂ ಮೂಗಿನ ಮೇಲೆ ಮಚ್ಚೆ ಅಥವಾ ನರೊಳ್ಳಿ ಹೊಂದಿರುವರು ಭಾಗ್ಯಶಾಲಿ ಆಗಿದ್ದು ದೊಡ್ಡ ತಲೆ ಹೊಂದಿರುವ ಮಹಿಳೆಯನ್ನು ಸರಸ್ವತಿ ದೇವಿಗೆ ಹೋಲಿಸಲಾಗಿದೆ ತನ್ನ ಮನೆಯ ಸದಸ್ಯರೊಂದಿಗೆ ಸಾಮರಸ್ಯ ಹೊಂದಿದ್ದು ತಾನು ಇರುವ ಮನೆಯಲ್ಲಿ ಸುಖ ಶಾಂತಿ ಮತ್ತು ಸಮೃದ್ಧ ತುಂಬಿರುತ್ತದೆ
ಇನ್ನು ಪಾದದ ಅಡಿಬಾಗದಲಿ ಶಂಖ ಚಕ್ರ ಹಾಗೂ ಕಮಲ ಹೊಂದಿರುವ ಮಹಿಳೆ ಹಾಗೂ ಆಕೆಯ ಗಂಡ ಸಮಾಜದಲ್ಲಿ ಉನ್ನತ ಹಾಗೂ ಗೌರವ ಸ್ಥಾನ ಅಲ್ಲಿ ಇರುತ್ತಾರೆ ಕೆಲವರು ಆಳವಾದ ಹೊಕ್ಕಳನ್ನು ಮತ್ತು ಚಪ್ಪಟೆ ಮತ್ತು ಅಗಲವಾದ ಹೆಬ್ಬೆರಳನ್ನು ಹೊಂದಿರುವ ಮಹಿಳೆಯರು ಕೂಡ ಭಾಗ್ಯಶಾಲಿ ಇನ್ನೂ ಹೊಕ್ಕುಳ ಸುತ್ತ ಮಚ್ಚೆ ಅಥವಾ ನರೋಲಿ ಹೊಂದಿರುವ ಮಹಿಳೆ ಅದೃಷ್ಟ ಶಾಲಿ ಹಾಗೂ ಸುಖ ಶಾಂತಿ ನೆಮ್ಮದಿ ತರುತಾರೆ ಎಂಬ ನಂಬಿಕೆ ಶಾಸ್ತ್ರದಲ್ಲಿ ಇದೆ
ಸಾಮುದ್ರಿಕಾ ಶಾಸ್ತ್ರದಲ್ಲಿ ಮಹಿಳೆಯರು ಹಿಮ್ಮಡಿ ತ್ರಿಕೋನಾಕಾರದ ಆಗಿದ್ದಲ್ಲಿ ಆ ಮಹಿಳೆಯರು ಅತಿಯಾದ ಬುದ್ದಿವಂತರು ತನ್ನ ತಿಳುವಳಿಕೆಯಿಂದ ಕುಟುಂಬ ಅನ್ನು ಒಗ್ಗಟ್ಟಿನಲ್ಲಿ ಇರಿಸಿ ಎಲ್ಲ ರೀತಿಯಲ್ಲೂ ಸಹಾಯ ಮಾಡುವ ಮನೋಭಾವ ಹೊಂದಿರುತ್ತಾರೆ ಇನ್ನು ಪಾದದಲ್ಲಿ ಹಾವಿನ ಆಕಾರ ಇದ್ದವರು ಕೂಡ ಅದೃಷ್ಟ ಶಾಲಿ . ಮಹಿಳೆಯ ತನ್ನ ಮುಖ ಎಡಭಾಗದಲ್ಲಿ ಮಚ್ಚೆ ಅಥವಾ ನಾರೊಳ್ಳಿ ಹೊಂದಿರುವ ಮಹಿಳೆ ಮದುವೆ ಆಗುವ ಮನೆಯಲ್ಲಿ ಸದಸ್ಯರು ಎಲ್ಲ ಪ್ರಗತಿಯ ಹೊಂದುತ್ತಾರೆ ಹಾಗೂ ತನ್ನ ಕುಟುಂಬ ಸಂತೋಷ ನೆಮ್ಮದಿ ಹಾಗೂ ಅತಿಯಾಗಿ ಕಾಳಜಿ ವಹಿಸುತ್ತಾರೆ ಇನ್ನು ದೇವಿಯ ಹಾಗೆ ದಟ್ಟವಾದ ಕೂದಲು ಮತ್ತು ನೇರವಾದ ಕೂದಲು ಹೊಂದಿರುವ ಮಹಿಳೆ ಸುಖ ಶಾಂತಿ ಹಾಗೂ ಅದೃಷ್ಟ ಹೆಚ್ಚಿಗೆ ಇರುತ್ತದೆ ಎಂದು ಸಮುದ್ರೀಕ ಶಾಸ್ತ್ರದಲ್ಲಿ ಉಲ್ಲೇಖಿಸಿದ್ದಾರೆ .