ದೇವತಾವಾದವು ಒಂದು ಧರ್ಮವಲ್ಲ, ಅದೊಂದು ತತ್ವಶಾಸ್ತ್ರ ಆ ತತ್ವಶಾಸ್ತ್ರವು ಬ್ರಹ್ಮಾಂಡವು ಹೇಗೆ ಪ್ರಾರಂಭವಾಯಿತು ಅನ್ನುವುದು ಒಳಗೊಂಡಿದೆ. ಯಾವುದೇ ಅಧಿಕೃತ ದೇವತಾ ಚರ್ಚ್, ಪವಿತ್ರ ಪುಸ್ತಕ, ಪಾದ್ರಿ ಜಾತಿ ಇತ್ಯಾದಿಗಳಿಲ್ಲದ ಕಾರಣ, ನಂತರ ಪೂಜೆಯ ಮಾನ ದಂಡವಿಲ್ಲ. ಇದು ದೇವತಾ ವಾದವನ್ನು ಆಸ್ತಿಕ ದರ್ಮಗಳಿಂದ ಪ್ರತ್ಯೇಕಿಸುವ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ದೇವರ ಮೇಲೆ ನಂಬಿಕೆಯನ್ನಿಡುವುದು ಮತ್ತು ಪ್ರತಿನಿತ್ಯ ಶುದ್ಧ ಮನಸ್ಸಿನಿಂದ ದೇವರನ್ನು ಪೂಜಿಸುವುದು ಶಾಂತಿ ಮತ್ತು ಸಂತೋಷದ ಜೀವನಕ್ಕೆ ತಳಹದಿ.
ಪುರಾಣಗಳ ಪ್ರಕಾರ ಮನೆಯಲ್ಲಿ ದೇವರ ಕೋಣೆಯನ್ನು ಸ್ಥಾಪಿಸುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳು ನೆಲೆಯಾಗುತ್ತವೆ ದುಷ್ಟ ಶಕ್ತಿಗಳು ನಾಶವಾಗುತ್ತದೆ. ಹಾಗು ಮನೆಯಲ್ಲಿನ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ. ಪೂಜೆಯ ಫಲವನ್ನು ಪಡೆಯಲು ನಾವು ವೀಳ್ಯದೆಲೆಯನ್ನು ಪೂಜೆಯಲ್ಲಿ ಬಳಸಬೇಕು. ಪೂಜೆಗೆ ಬಳಸುವ ವೀಳ್ಯದೆಲೆಯು ಮುರಿದಿರಬಾರದು. ಪೂಜೆಯ ಸಂದರ್ಭದಲ್ಲಿ ನೀವು ದೇವರಿಗೆ ಹಚ್ಚಿ ಇಟ್ಟ ದೀಪ ಆರಾದಂತೆ ನೋಡಿಕೊಳ್ಳಿ. ಒಂದು ವೇಳೆ ಪೂಜೆಯ ಮಧ್ಯೆ ದೇವರಿಗೆ ಹಚ್ಚಿದ ದೀಪ ಆರಿ ಹೋದರೆ ಪೂಜೆಯ ಫಲಗಳು ನಿಷ್ಪ್ರಯೋಜಕವಾಗುತ್ತದೆ.
ದೇವರಿಗೆ ಅಭಿಷೇಕ ಮಾಡಿ, ದೀಪವನ್ನು ಬೆಳಗಿಸಿ ಮತ್ತು ಧೂಪವನ್ನು ಅರ್ಪಿಸಿ, ದೇವರಿಗೆ ಅಕ್ಕಿ ಸೇರಿದಂತೆ ಆತನಿಗೆ ಪ್ರಿಯವಾದ ಧಾನ್ಯವನ್ನು ಅರ್ಪಿಸಿ, ಚಂದನ ಅಥವಾ ಸಿಂಧೂರವನ್ನು ಹಚ್ಚಿ, ಹೂವುಗಳನ್ನು ಅರ್ಪಿಸಿ, ಪ್ರಸಾದ ಅಥಾವ ಕೆಲವು ವಿವಿಧ ಬಗೆಯ ಭಕ್ಷಗಳನ್ನು ನೀಡಿ. ಹೂಮಾಲೆ ಯನ್ನು ಅಥವಾ ಆತನಿಗೆ ಪ್ರಿಯವಾದ ಎಲೆಗಳನ್ನು ಬಳಸಿ. ಭಗವಾನ್ ವಿಷ್ಣುವನ್ನು ಪೂಜಿಸುತ್ತಿದ್ದರೆ ಹಳದಿ ಬಣ್ಣದ ರೇಷ್ಮೆ ಬಟ್ಟೆಯನ್ನು ಅರ್ಪಿಸ ಬೇಕು. ದುರ್ಗಾ ದೇವಿಗೆ, ಸೂರ್ಯ ನಿಗೆ, ಮತ್ತು ಗಣೇಶನಿಗೆ ಕೆಂಪು ಬಟ್ಟೆಯನ್ನು ಅರ್ಪಿಸ ಬೇಕು ಹಾಗೂ ಶಿವನಿಗೆ ಬಿಳಿ ಬಟ್ಟೆಯನ್ನು ಅರ್ಪಿಸಿ ಬೇಕು. ನೀವು ಪೂಜೆಗೆ ಕುಳಿತು ಕೊಳ್ಳಲು ಉಪಯೋಗಿಸುವ ಆಸನವನ್ನು ಎಂದಿಗೂ ಕಾಲಿಂದ ದೂಡಬಾರದು ಅಥವಾ ಕಾಲಿಂದ ಮುಟ್ಟಬಾರದು.
ಪ್ರತಿ ನಿತ್ಯ ತುಪ್ಪದ ದೀಪವನ್ನು ಹಚ್ಚುವುದರಿಂದ ವಾಸ್ತುಗೆ ಸಂಬಂಧಿತ ನಾನಾ ಸಮಸ್ಯೆಗಳು ದೂರವಾಗುತ್ತದೆ. ಸೂರ್ಯ ದೇವರು, ದುರ್ಗಾ ದೇವತೆ, ವಿಷ್ಣು ಮತ್ತು ಇನ್ನಿತರ 5 ದೇವರನ್ನು ಯಾವುದೇ ಶುಭ ಸಂದರ್ಭದಲ್ಲಿ ಪೂಜಿಸಬಹುದು ಹೀಗೆ ಮಾಡುವುದರಿಂದ ನೀವು ಸಂಪತ್ತು ಮತ್ತು ಆರೋಗ್ಯವನ್ನು ಪಡೆಯುವಿರಿ.