Home Loan: ಪ್ರತಿಯೊಬ್ಬರು ಸ್ವಂತ ಮನೆ ನಿರ್ಮಾಣ ಮಾಡುವ ಕನಸನ್ನು ಹೊಂದಿರುತ್ತಾರೆ ಶ್ರೀಮಂತರಿಗೆ ಹಣವಿರುತ್ತದೆ ತಮ್ಮ ಕನಸನ್ನು ನನಸು ಮಾಡಿಕೊಳ್ಳುತ್ತಾರೆ ಆದರೆ ಮಧ್ಯಮ ವರ್ಗದ ಕಾರ್ಮಿಕರು ಹಣವಿಲ್ಲದ ಕಾರಣ ಸ್ವಂತ ಮನೆ ಕನಸು ನನಸಾಗುವುದಿಲ್ಲ ಆದರೆ ಇದೀಗ ಬ್ಯಾಂಕ್ ಗಳಿಂದ ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲ (Home Loan) ಪಡೆಯಬಹುದು ಹಾಗಾದರೆ ಯಾವ ಬ್ಯಾಂಕ್ ನಲ್ಲಿ ಬಡ್ಡಿದರ ಹೇಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ

ಮಧ್ಯಮ ಕುಟುಂಬದವರು ಪ್ರತಿ ತಿಂಗಳು ಬಾಡಿಗೆ ಕೊಡುವ ಬದಲು ತಮ್ಮದೆ ಸ್ವಂತ ಮನೆ ಇರಬೇಕೆಂದು ಆಸೆ ಹೊಂದಿರುತ್ತಾರೆ. ಪ್ರತಿ ತಿಂಗಳು ಮನೆ ಬಾಡಿಗೆ ಹಣ ಕಟ್ಟುವ ಬದಲು ಮಾಸಿಕ ಇಎಂಐ ರೂಪದಲ್ಲಿ ಹಣ ಪಾವತಿಸಿ ಸ್ವಂತ ಮನೆ ಹೊಂದುವ ಕನಸನ್ನು ಮನಸು ಮಾಡಿಕೊಳ್ಳಬಹುದು. ಇತ್ತೀಚಿಗೆ ಭಾರತದಲ್ಲಿ ಗೃಹ ಸಾಲದ ಬೇಡಿಕೆ ಹೆಚ್ಚಾಗುತ್ತಿದೆ ಹೆಚ್ಚಿನ ಬೇಡಿಕೆಯನ್ನು ಈಡೇರಿಸಲು ಎಲ್ಲಾ ಬ್ಯಾಂಕುಗಳು ಗೃಹ ಸಾಲ ನೀಡುತ್ತಿವೆ ಆದಾಗ್ಯೂ ಭಾರತದಲ್ಲಿ ಆರ್ ಬಿಐ ತೆಗೆದುಕೊಂಡ ಇತ್ತೀಚಿನ ಕ್ರಮಗಳು ಗೃಹ ಸಾಲದ ಮೇಲಿನ ಬಡ್ಡಿ ದರವನ್ನು ಮತ್ತಷ್ಟು ಕಡಿಮೆ ಮಾಡಿದೆ.

ಭಾರತೀಯ ರಿಸರ್ವ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದ ಹಣಕಾಸು ನೀತಿ ಸಮಿತಿಯು ರೆಪೊ ದರವನ್ನು ಶೇಕಡಾ 6.5 ಕ್ಕೆ ಬದಲಾಯಿಸದೆ ಸತತವಾಗಿ ಐದು ಬಾರಿ ಎಂಸಿಎಲ್ ಆರ್ ದರಗಳನ್ನು ಪರಿಷ್ಕರಿಸಿತು ಆದರೆ ಏಪ್ರಿಲ್ ನಲ್ಲಿ ಈ ವಿರಾಮದ ಮೊದಲು ಸೆಂಟ್ರಲ್ ಬ್ಯಾಂಕ್ ಸತತ ಆರು ದರ ಏರಿಕೆಗಳನ್ನು ಜಾರಿಗೆ ತಂದಿತು ಅಂದರೆ ಸುಮಾರು 250 ಮೂಲ ಅಂಕಗಳು ಆದ್ದರಿಂದ ಬಿಐ ಎಂಸಿಎಲ್ಎಲ್ಆರ್ ದರಗಳನ್ನು ಪರಿಷ್ಕರಿಸಿದ ನಂತರ ಗೃಹ ಸಾಲಗಳ ಮೇಲೆ ಎಲ್ಲಾ ಬ್ಯಾಂಕುಗಳು ನೀಡುವ ಬಡ್ಡಿ ದರಗಳು ಬೇರೆ ಬೇರೆಯಾಗಿರುತ್ತದೆ. ಹೀಗಾಗಿ ಬೇರೆ ಬೇರೆ ಬ್ಯಾಂಕುಗಳು ಗೃಹ ಸಾಲಗಳ ಮೇಲೆ ಪ್ರಸ್ತುತ ಬಡ್ಡಿ ದರಗಳನ್ನು ಬೇರೆ ಬೇರೆ ರೀತಿಯಲ್ಲಿ ಕೊಡುತ್ತವೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಡಿಸೆಂಬರ್ 2023ರವರೆಗಿನ ಆಯ್ದ ಅವಧಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 5 ರಿಂದ 10 ಬೇಸಿಸ್ ಪಾಯಿಂಟ್ ಗಳಿಂದ ಎಂಸಿಎಲ್ಆರ್ ಅನ್ನು ಹೆಚ್ಚಿಸಿದೆ ಎಸ್ ಬಿಐ ವೆಬ್ಸೈಟ್ ಪ್ರಕಾರ ಒಂದು ವರ್ಷದ ಅವಧಿಗೆ ಎಂಸಿಎಲ್ಆರ್ ಡಿಸೆಂಬರ್ 15 ರಿಂದ 8.65% ಕ್ಕೆ ಏರಿದೆ ಅದರಂತೆ ಒಂದರಿಂದ ಮೂರು ತಿಂಗಳವರೆಗೆ ಎಂಸಿಎಲ್ಆರ್ 8.20 ಪರ್ಸೆಂಟ್ ಎಂಸಿಎಲ್ಆರ್ ಆರು ತಿಂಗಳಿಗೆ 8.55 ಶೇಕಡಾ ಒಂದು ವರ್ಷಕ್ಕೆ 8.65 ಶೇಕಡಾ ಎರಡು ವರ್ಷಕ್ಕೆ 8.75 ಶೇಕಡಾ ಮತ್ತು ಮೂರು ವರ್ಷಕ್ಕೆ 8.85 ಶೇಕಡಾ ಮತ್ತು ಮೂರು ವರ್ಷಕ್ಕೆ 8.85 ಶೇಕಡಾ ಇದೆ.

ಎಚ್ ಡಿ ಎಫ್ ಸಿ ಬ್ಯಾಂಕ್ ತನ್ನ ಎಂಸಿಎಲ್ಆರ್ ಅನ್ನು ಜನವರಿ 8, 2024ರಂದು ಪರಿಷ್ಕರಿಸಿತು ಅದರ ಆರು ತಿಂಗಳ ಎಂಸಿಎಲ್ಆರ್ ಶೇಕಡ 9.20 ಕ್ಕೆ ಏರಿಕೆಯಾಗಿದೆ. ಅದೆ ಸಮಯದಲ್ಲಿ ಎಂಸಿಎಲ್ಆರ್ ಹತ್ತು ಬೇಸಿಸ್ ಪಾಯಿಂಟ್ ಗಳಿಂದ 8.80 ಪ್ರತಿಶತಕ್ಕೆ ಮತ್ತು ಮೂರು ತಿಂಗಳ ಎಂಸಿಎಲ್ಆರ್ 5 ಬೇಸಿಸ್ ಪಾಯಿಂಟ್ ಗಳಿಂದ ಶೇಕಡ 9ಕ್ಕೆ ಏರಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಜನವರಿ 1 2024 ರಂದು ಎಮ್ ಸಿ ಎಲ್ ಆರ್ ಪರಿಷ್ಕರಿಸಿತು. ಎಂಸಿಎಲ್ಆರ್ 8.25 ಶೇಕಡಾ ಆಗಿದೆ. ಎಂಸಿಎಲ್ಆರ್ ದರವು ಒಂದು ತಿಂಗಳಿಗೆ 8.30 ಪ್ರತಿಶತ ಮೂರು ತಿಂಗಳಿಗೆ 8.40 ಪ್ರತಿಶತ ಆರು ತಿಂಗಳಿಗೆ 8.60 ಪ್ರತಿಶತ ಒಂದು ವರ್ಷಕ್ಕೆ 8.70 ಪ್ರತಿಶತ ಮತ್ತು ಮೂರು ವರ್ಷಕ್ಕೆ9 ಪ್ರತಿಶತ ಬಡ್ಡಿದರ ನೀಡಲಾಗುತ್ತದೆ. ಐಡಿ ಫ ಸಿ ಬ್ಯಾಂಕ್ ತನ್ನ ಎಂಸಿಎಲ್ ಆರ್ ದರವನ್ನು ಜನವರಿ 8, 2024 ರಂದು ಪರಿಷ್ಕರಿಸಿತು. ಬ್ಯಾಂಕ್ ಒಂದು ತಿಂಗಳಿಗೆ 9.50 ಶೇಕಡಾ ಮೂರು ತಿಂಗಳಿಗೆ 9.75ಶೇಕಡಾ, ಆರು ತಿಂಗಳಿಗೆ 10.10 ಶೇಕಡಾ, ಒಂದು ವರ್ಷಕ್ಕೆ 10.25 ಶೇಕಡಾ ನೀಡುತ್ತದೆ. ಈ ಮಾಹಿತಿಯನ್ನು ತಪ್ಪದೆ ಗೃಹ ಸಾಲ ಬೇಕಾದವರಿಗೆ ತಿಳಿಸಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!