ಸಂಸಾರದಲ್ಲಿ ಗಂಡ ಹೆಂಡತಿ ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಇಬ್ಬರೂ ಹೊಂದಿಕೊಂಡು ಜೀವನ ನಡೆಸಿದಾಗ ಮಾತ್ರ ಸಂಸಾರ ಸುಖಮಯವಾಗಿರಲು ಸಾಧ್ಯ. ಇಲ್ಲೊಬ್ಬ ಮಹಿಳೆ 25 ಬಾರಿ ಪರಪುರುಷನೊಂದಿಗೆ ಓಡಿ ಹೋದರೂ ಅವಳ ಪತಿ ಅವಳು ವಾಪಸ್ ಬಂದರೆ ಮನೆಗೆ ಸೇರಿಸಿಕೊಳ್ಳುತ್ತೇವೆ ಎಂದು ಹೇಳುತ್ತಾನೆ. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.
ಸಂಸಾರದಲ್ಲಿ ಗಂಡ- ಹೆಂಡತಿ ನಡುವೆ ಒಮ್ಮೆ ಅನುಮಾನ ಮೂಡಿದರೆ ಜೀವನ ಪರ್ಯಂತ ಅನುಮಾನದ ಭೂತವೆ ಆವರಿಸಿ ಶಾಂತಿ ಹಾಳಾಗುತ್ತದೆ. ದೇಶದಲ್ಲಿ ಒಬ್ಬ ಮಹಿಳೆ ಪರ ಪುರುಷನೊಂದಿಗೆ ಮಾತನಾಡಿದರೂ ವಿಚ್ಛೇದನ ಹಂತದವರೆಗೂ ಹೋಗುವುದನ್ನು ನಾವೆಲ್ಲಾ ನೋಡಿದ್ದೇವೆ.
ಸಂಸಾರ ನೌಕೆ ನೆಮ್ಮದಿಯಿಂದ ನಡೆಯಬೇಕೆಂದರೆ ಗಂಡ- ಹೆಂಡತಿ ನಡುವೆ ಹೊಂದಾಣಿಕೆ ಬಹುಮುಖ್ಯವಾಗಿರುತ್ತದೆ. ಸಾಮಾನ್ಯವಾಗಿ ಒಬ್ಬರ ಜೊತೆ ಮಹಿಳೆ ಸಂಬಂಧ ಹೊಂದಿದ್ದರೆ ಗಂಡ ಮತ್ತೆ ಅವಳನ್ನು ಒಪ್ಪಿಕೊಳ್ಳುವುದು ಬಹಳ ಕಷ್ಟ ಒಂದು ವೇಳೆ ಒಪ್ಪಿಕೊಂಡರೂ ಸಂಸಾರ ಸುಖವಾಗಿರುವುದಿಲ್ಲ. 40 ವರ್ಷದ ಮಹಿಳೆಯೊಬ್ಬಳು ಅಸ್ಸಾಂ ರಾಜ್ಯದ ನಾಗಾಂವ್ ಜಿಲ್ಲೆಯ ಧಿಂಗ್ ಲಹ್ಕರ್ ಗ್ರಾಮದಲ್ಲಿ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ ಮಾಫಿಜುದ್ದೀನ್‍ರನ್ನು ವಿವಾಹವಾಗಿದ್ದಾಳೆ.
ಮದುವೆಯ ಬಳಿಕ ಹತ್ತು ವರ್ಷಗಳಲ್ಲಿ 25 ಬಾರಿ ಹಲವು ಪುರುಷರೊಂದಿಗೆ ಮನೆ ಬಿಟ್ಟು ಓಡಿ ಹೋಗಿದ್ದಾಳೆ ಆದರೂ ಪತಿ ಮತ್ತು ಅತ್ತೆ ಮಾತ್ರ ದೂರು ನೀಡದೆ ಆಕೆಯನ್ನು ಮರಳಿ ಮನೆಗೆ ಸೇರಿಸಿಕೊಂಡಿದ್ದಾರೆ. ಅವರಿಗೆ 3 ವರ್ಷ ಹಾಗೂ 3 ತಿಂಗಳ ಇಬ್ಬರು ಗಂಡು ಮಕ್ಕಳಿದ್ದು, 6 ವರ್ಷದ ಓರ್ವ ಮಗಳಿದ್ದಾಳೆ. ಆಕೆಯ ನೆರೆಮನೆಯವರು ಕೂಡ ಆಕೆ ಯುವಕನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು ಅಲ್ಲದೆ ಅನೇಕ ಬಾರಿ ಪ್ರೀತಿ ಮಾಡಿ ಓಡಿ ಹೋಗಿದ್ದಳು. ಕೆಲವು ತಿಂಗಳ ಬಳಿಕ ಅತ್ತೆ ಮನೆಗೆ ಮರಳಿದ್ದಾಳೆ ಎಂದು ಹೇಳಿದ್ದಾರೆ.
ಮಹಿಳೆಯ ಪತಿ ಮಾಫಿಜುದ್ದೀನ್ ನನ್ನ ಹೆಂಡತಿ ವಾಪಸ್ ಬಂದ ಬಳಿಕ ಮತ್ತೊಮ್ಮೆ ಓಡಿ ಹೋಗುವುದಿಲ್ಲ ಎಂದು ಮಾತು ನೀಡಿದ್ದಳು ಆದರೆ ಆ ಮಾತನ್ನು ಈಗ ಉಳಿಸಿಕೊಳ್ಳಲಿಲ್ಲ. ಕೆಲವು ಬಾರಿ ಅವಳು ತನ್ನ ಸಂಬಂಧಿಕರ ಮನೆಗೆ ಹೋಗಿರುವುದಾಗಿ ಹೇಳುತ್ತಿದ್ದಳು ಮತ್ತೆ ಕೆಲವು ಬಾರಿ ತನ್ನ ಸಂಬಂಧಿಗೆ ಅನಾರೋಗ್ಯದ ಕಾರಣ ಅವರನ್ನು ನೋಡಲು ಹೋಗಿದ್ದೆ ಎನ್ನುತ್ತಿದ್ದಳು. ಮಕ್ಕಳನ್ನು ನೋಡಿಕೊಳ್ಳುವ ಸಲುವಾಗಿ ನಾವು ಆಕೆಯನ್ನು ಮರಳಿ ಮನೆಗೆ ಸೇರಿಸಿಕೊಳ್ಳುತ್ತಿದ್ದೇವೆ ಎಂದಿದ್ದಾರೆ.
ಪುನಃ ಶನಿವಾರ ಆಕೆಯ ಗಂಡ ಕೆಲಸ ಮುಗಿಸಿಕೊಂಡು ಮನೆಗೆ ಹಿಂದಿರುಗಿದಾಗ ನೆರೆ ಮನೆಯವರ ಬಳಿ ಮೂರು ತಿಂಗಳ ಮಗುವನ್ನು ಬಿಟ್ಟು ಓಡಿ ಹೋಗಿದ್ದಾಳೆ. ನೆರೆಮನೆಯವರಿಗೆ ಆಡುಗಳಿಗೆ ಮೇವು ತರಲು ಹೋಗಿಬರುವುದಾಗಿ ಹೇಳಿ ಹೊರಟಿದ್ದಾಳೆ. ಇದೀಗ ಮತ್ತೆ ಅವಳು ಯಾವಾಗ ಮನೆಗೆ ಹಿಂದಿರುಗುತ್ತಾಳೆ ಎಂದು ಗೊತ್ತಿಲ್ಲ ಅಲ್ಲದೆ ಮನೆಯಲ್ಲಿದ್ದ 22,000 ರೂಪಾಯಿ ಹಣ ಮತ್ತು ಕೆಲವು ವಸ್ತುಗಳನ್ನು ಜೊತೆಗೆ ತೆಗೆದುಕೊಂಡು ಹೋಗಿದ್ದಾಳೆ ಆದರೆ ಯಾರ ಜೊತೆಗೆ ಹೋಗಿದ್ದಾಳೆ ಎಂಬ ಬಗ್ಗೆ ಮಾಹಿತಿ ಇಲ್ಲ.
ಆಕೆಯ ಪತಿ ನಾನು ಅವಳನ್ನು ಪ್ರಾಮಾಣಿಕವಾಗಿ ಪ್ರೀತಿಸುತ್ತೇನೆ ಹಾಗೂ ಅವಳನ್ನು ಮತ್ತೆ ಒಪ್ಪಿಕೊಳ್ಳುತ್ತೇನೆ. ನಮಗೆ ಸಣ್ಣಸಣ್ಣ ಮಕ್ಕಳಿದ್ದಾರೆ, ನಾನು ಅವಳನ್ನು ಒಪ್ಪಿಕೊಳ್ಳದಿದ್ದರೆ ಮಕ್ಕಳನ್ನು ನೋಡಿಕೊಳ್ಳುವವರು ಯಾರು ಅಲ್ಲದೆ ಕಾನೂನು ಮತ್ತು ಇತರೆ ಸಮಸ್ಯೆಗಳು ಆಗಬಾರದೆಂದು ಅವಳನ್ನು ಒಪ್ಪಿಕೊಳ್ಳುತ್ತೇನೆ ಮತ್ತು ನಾನು ಪೊಲೀಸರಿಗೆ ದೂರು ನೀಡಿಲ್ಲ ಎಂದು ಹೇಳುತ್ತಾರೆ. ಒಟ್ಟಿನಲ್ಲಿ ಮಾಫಿಜುದ್ದೀನ್ ಅವರ ಪ್ರಾಮಾಣಿಕ ಪ್ರೀತಿಗೆ ಅವರ ಹೆಂಡತಿಯಿಂದ ಮೋಸವಾಗುತ್ತಿದೆ.