ರೈತರಿಗೆ ಒಳ್ಳೆಯ ಆದಾಯ ತಂದುಕೊಡುವಂಥ ಒಳ್ಳೆಯ ಬ್ಯುಸಿನೆಸ್ ಗಳಲ್ಲಿ ಒಂದು ಹೈನುಗಾರಿಕೆ. ರೈತರು ಕೃಷಿಯ ಜೊತೆಗೆ ಕೂಡ ಹೈನುಗಾರಿಕೆಯನ್ನು ಕೂಡ ಮಾಡಿಕೊಂಡು ಹೋಗಬಹುದು. ಆದರೆ ಹಲವರಿಗೆ ಹೈನುಗಾರಿಕೆ ಬಗ್ಗೆ ಸರಿಯಾಗಿ ಗೊತ್ತಿಲ್ಲದ ಕಾರಣ, ಅವರುಗಳು ಈ ಉದ್ಯಮ ಶುರು ಮಾಡುವುದಿಲ್ಲ. ಇಂದು ನಾವು ನಿಮಗೆ ಹೈನುಗಾರಿಕೆ ಬಗ್ಗೆ ತಿಳಿಸಿಕೊಡುತ್ತೇವೆ. ಈ ರೀತಿ ಮಾಡಿದರೆ, ನಿಮಗೆ ಒಳ್ಳೆಯ ಆದಾಯ ಬರುತ್ತದೆ, ಹಸುವು ಹೆಚ್ಚಿನ ಹಾಲನ್ನು ಕೊಡುತ್ತದೆ.
ಹಲವಾರು ಜನರು ಜಾಸ್ತಿ ಹಾಲು ಕೊಡುವ ಹಸು ಬೇಕು ಎಂದು, ಉತ್ತರ ಭಾರತದಿಂದ ತರುತ್ತಾರೆ ಅಥವಾ ಕ್ರಾಸ್ ಬ್ರೀಡ್ ಮಾಡಿಸುತ್ತಾರೆ. ಆ ರೀತಿ ಮಾಡುವುದಕ್ಕಿಂತ ನಾವು ಹೆಚ್ಚು ಹಾಲು ಕೊಡುವಂಥ ತಳಿಯನ್ನು ಸಾಕಬಹುದು. ಈ ರೀತಿ ನಿಮಗೆ ನಷ್ಟ ಆಗದ ಹಾಗೆ, ಹೈನುಗಾರಿಕೆಯಲ್ಲಿ ಲಾಭ ಪಡೆಯುವುದು ಹೇಗೆ, ಯಾವ ವಿಷಯದ ಬಗ್ಗೆ ಗಮನ ಕೊಡಬೇಕು ಎಂದು ಬೆಂಗಳೂರಿನ ರಾಜಾಜಿನಗರಕ್ಕೆ ಸೇರಿದ ಯುವಕನೊಬ್ಬರು ತಿಳಿಸಿದ್ದಾರೆ.
ಈ ವ್ಯಕ್ತಿ ಹಲವು ವರ್ಷಗಳಿಂದ ಹೈನುಗಾರಿಕೆಯಲ್ಲೇ ಇದ್ದು, 7 ರಿಂದ 8 ಹಸುಗಳನ್ನು ನಿರ್ವಹಿಸುತ್ತಿದ್ದಾರೆ. ಇವರು ಸಾಕುತ್ತಿರುವ ಹಸುಗಳು ಒಂದು ವೇಳೆಗೆ ಮಿನಿಮಮ್ 35 ಲೀಟರ್ ಹಾಲು ಕೊಡುತ್ತಿದೆ. ಹೀಗೆ ಇಷ್ಟು ಉತ್ತಮವಾಗಿ ಹಾಲು ಕೊಡಲು ಯಾವ ಪೋಷಕ ಆಹಾರಗಳನ್ನು ಕೊಡುತ್ತಾರೆ ಎಂದು ತಿಳಿಸಿದ್ದಾರೆ. ಹಸುಗಳನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು, ಅವುಗಳಿಗೆ ಒಂದೂವರೆ ವರ್ಷದ ವರೆಗು ಇಂಜೆಕ್ಷನ್ ಕೊಡಿಸಬಾರದು. ಅವುಗಳನ್ನು ಚೆನ್ನಾಗಿ ಬೆಳೆಸಬೇಕು.
ಬಳಿಕ ಒಳ್ಳೆ ಸಿಮೆನ್ ಸ್ಯಾಂಪಲ್ ಅನ್ನು ಇಂಜೆಕ್ಟ್ ಮಾಡಬೇಕು. ಹೆಣ್ಣು ಕರು ಹುಟ್ಟಿದರೆ ಚೆನ್ನಾಗಿ ನೋಡಿಕೊಳ್ಳಬೇಕು.ತಾಯಿ 40 ಲೀಟರ್ ಹಾಲು ಕೊಡುತ್ತಿದ್ದರೆ, ಕರು 35 ಲೀಟರ್ ಹಾಲನ್ನಾದರು ಕೊಡುತ್ತದೆ. ಈ ರೀತಿ ಮಾಡಿದರೆ, ಹಸುಗಳು ಜೆನೆಟಿಕಲಿ ಮಾಡಿಫೈ ಆಗುತ್ತದೆ. ನಾವು ಅದಕ್ಕೆ ಸರಿಯಾಗಿ ಬದಲಾಗಬೇಕು, ಹಳೆಯ ರೀತಿ ಆಹಾರ ಕೊಡಬಾರದು, ಹಸುಗಳಿಗೆ ಒಳ್ಳೆಯ ಪ್ರೊಟೀನ್ ಕೊಡಬೇಕು. ಜೋಳದ ಕಡ್ಡಿ, ತರಕಾರಿ ಹಾಕ್ತಿವಿ, ಚೆನ್ನಾಗಿ ನೀರು ಕುಡಿಸುತ್ತೇವೆ.
ಹಸು ಗರ್ಭ ಧರಿಸಿದರೆ, 6 ತಿಂಗಳು ಜೋಪಾನವಾಗಿ ನೋಡಿಕೊಳ್ತೀವಿ. ಇಷ್ಟು ಕೆಲಸ ಮಾಡಿದರೆ ಸಾಕು, ಬಹಳಷ್ಟು ವರ್ಷಗಳ ಕಾಲ ಅವು ನಮ್ಮನ್ನು ನೋಡಿಕೊಳ್ಳುತ್ತವೆ. ಕರುಗೆ 2 ವರ್ಷ ಅಗೋವರೆಗೂ ಹಾಲು ಕೊಡುತ್ತವೆ. ಹೈನುಗಾರಿಕೆ ಮಾಡಲು ಬಯಸುವವರಿಗೆ ಹೇಳೋದು ಒಂದೇ, ಕಡಿಮೆ ಹಾಲು ಕೊಡುವ ಜಾಸ್ತಿ ಹಸುಗಳನ್ನ ಸಾಕೋದಕ್ಕಿಂತ, ಒಳ್ಳೆ ಇಳುವರಿ ಕೊಡೋ ಕೆಲವು ಹಸುಗಳನ್ನ ಸಾಕೋದು ಲಾಭದಾಯಕ. ಹಸು ಖರೀದಿ ಮಾಡೋ ಮೊದಲು ಎಲ್ಲವನ್ನು ಚೆನ್ನಾಗಿ ಪರಿಶೀಲಿಸಿ, ನಾಲ್ಕೈದು ದಿನ ಜೊತೆಗಿರಿ..
ಅವರು ಹೇಳಿದಷ್ಟೇ ಹಾಲು ಕೊಡುತ್ತಿದ್ಯಾ ಎಂದು ಎಲ್ಲವನ್ನು ನೋಡಿ..15 ರಿಂದ 20 ತಿಂಗಳು ಹಸುಗಳನ್ನು ಸಾಕಿ, ಕೆಲಸ ಕಲಿತುಕೊಂಡರೆ, ಹೈನುಗಾರಿಕೆ ಮಾಡಬಹುದು. ಒಂದು ಹಸುಗೆ ಈಗ ಲಕ್ಷಗಟ್ಟಲೇ ಹಣ ಕೊಡಬೇಕು. ಅಷ್ಟು ಕೊಟ್ಟು, ಸರಿಯಾಗಿ ನೋಡಿಕೊಳ್ಳಲು ಆಗಿಲ್ಲ ಅಂದ್ರೆ ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾಗುತ್ತದೆ. ಹಾಗಾಗಿ ಮೊದಲು ಎಲ್ಲಾನು ಕಲಿತು ನಂತರ ಹೈನುಗಾರಿಕೆ ಶುರುಮಾಡಿ. ಎಂದು ಹೇಳಿದ್ದಾರೆ.