ಜಾನುವಾರು ಮತ್ತು ಪಶುವೈದ್ಯಕೀಯ ಸೇವೆಗಳು ಹೈನುಗಾರಿಕೆ ಉತ್ತೇಜನಾ ಸಚಿವಾಲಯದ ಉಳಿಕೆ ಅನುದಾನದ ಅಡಿಯಲ್ಲಿ ಮಹಿಳಾ ರೈತರಲ್ಲಿ ಹೈನುಗಾರಿಕೆಯನ್ನು ಉತ್ತೇಜಿಸಲು ಹಸು ಅಥವಾ ಎಮ್ಮೆ ಖರೀದಿಸಲು ಸಾಲವನ್ನು ಸಮಯಕ್ಕೆ ಮರುಪಾವತಿ ಮಾಡುವ ಮಹಿಳಾ ರೈತರಿಗೆ 6% ಸಹಾಯಧನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಮಹಿಳಾ ರೈತರು ತಮ್ಮ ವ್ಯಾಪ್ತಿಯಲ್ಲಿರುವ ರಾಷ್ಟ್ರೀಕೃತ ಗ್ರಾಮೀಣ ಸಹಕಾರಿ ಬ್ಯಾಂಕ್‌ಗಳಲ್ಲಿ ಹೈನುಗಾರಿಕೆಗಾಗಿ ಸಾಲ ಪಡೆದು ಸಕಾಲದಲ್ಲಿ ಮರುಪಾವತಿ ಮಾಡಬೇಕು.
ಆಯ್ಕೆಯಾದ ಫಲಾನುಭವಿಯಿಂದ ಮುಂಗಡ ಪಾವತಿಯನ್ನು ಸ್ವೀಕರಿಸಿದ ನಂತರ, ಅನುದಾನವನ್ನು ನೇರವಾಗಿ ಫಲಾನುಭವಿಯ ಖಾತೆಗೆ ವರ್ಗಾಯಿಸಲಾಗುತ್ತದೆ. ಏಪ್ರಿಲ್ 1, 2024 ರಿಂದ, ವಿವಿಧ ಬ್ಯಾಂಕ್‌ಗಳಿಂದ ಸಾಲ ಪಡೆದ ರೈತರು ಸೂಕ್ತ ದಾಖಲೆಗಳೊಂದಿಗೆ ಪಶುವೈದ್ಯಕೀಯ ಸಂಸ್ಥೆಯಲ್ಲಿ ಪಶುವೈದ್ಯರನ್ನು ಭೇಟಿ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ನಿಮ್ಮ ತಾಲ್ಲೂಕ್ ಅಥವಾ ಜಿಲ್ಲೆಯ ಪಶು ವೈದ್ಯಕೀಯ ಇಲಾಖೆಯಲ್ಲಿ ಸಂಪರ್ಕಿಸಿ ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆದು ಈ ಸೌಲಭ್ಯವನ್ನು ಪಡೆದುಕೊಳ್ಳಿ.
ಬೇಕಾಗುವ ದಾಖಲಾತಿಗಳು :-
ಆಧಾರ ಕಾರ್ಡ್
ಜಮೀನಿನ ಪಹಣಿ ಪತ್ರ
ಬ್ಯಾಂಕ್‌ಖಾತೆ ಸಂಖ್ಯೆ,
ಬ್ಯಾಂಕಿನ ಹೆಸರು, ಶಾಖೆ ಮತ್ತು ಐ.ಎಫ್.ಎಸ್.ಸಿ. ಕೊಡ್ ನೊಂದಿಗೆ ಬ್ಯಾಂಕ್ ಖಾತೆ ವಿವರಗಳು ಮತ್ತು
ಭಾವ ಚಿತ್ರ.
ದಾವಣಗೆರೆ ಜಿಲ್ಲೆ ತಾಲ್ಲೂಕ್ ಪಶು ಆಸ್ಪತ್ರೆ ಮುಖ್ಯ ಪಶುವೈದ್ಯಾಧಿಕಾರಿಗಾಲ ಸಂಪರ್ಕ ಸಂಖ್ಯೆ ಈ ಕೆಳಗಿನಂತಿದೆ. ಚನ್ನಗಿರಿ ತಾಲ್ಲೂಕಿನ ಪಶು ಆಸ್ಪತ್ರೆ ಮುಖ್ಯ ಪಶುವೈದ್ಯಾಧಿಕಾರಿ ಮೊ.ಸಂ: 9880961745, ದಾವಣಗೆರೆ ತಾಲ್ಲೂಕು ಪಶು ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿ ಮೊ.ಸಂ: 9353567572, ಹರಿಹರ ತಾಲ್ಲೂಕು ಪಶು ಆಸ್ಪತ್ರೆ ಮುಖ್ಯ ಪಶುವೈದ್ಯಾಧಿಕಾರಿ ಮೊ.ಸಂ: 9900369113, ಹೊನ್ನಾಳಿ ತಾಲ್ಲೂಕು ಪಶು ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿ ಮೊ.ಸಂ: 9480506320, ಜಗಳೂರು ತಾಲ್ಲೂಕು ಪಶು ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿ ಮೊ.ಸಂ: 9901641942, ನ್ಯಾಮತಿ ತಾಲ್ಲೂಕು ಪಶು ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿ ಮೊ.ಸಂ: 9632916405 ಸಂಪರ್ಕಿಸಲು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ. ಚಂದ್ರಶೇಖರ, ಎಸ್. ಸುಂಕದ ತಿಳಿಸಿದ್ದಾರೆ.