ಹಲವರು ಪುಣ್ಯಕ್ಷೇತ್ರಗಳಲ್ಲಿ ಮಂತ್ರಾಕ್ಷತೆಯನ್ನು ನೀಡಲಾಗುತ್ತದೆ ಮಂತ್ರಾಕ್ಷತೆಗೆ ಇರುವ ಪ್ರಾಮುಖ್ಯತೆ ನಮ್ಮ ಯುವ ಪೀಳಿಗೆಗೆ ತಿಳಿದಿಲ್ಲ. ಮಂತ್ರಾಕ್ಷತೆಯನ್ನು ಬೇಕಾಬಿಟ್ಟಿ ಬಳಸುತ್ತಾರೆ ತಲೆಗೂ ಸರಿಯಾಗಿ ಹಾಕಿಕೊಳ್ಳದೆ ಜೇಬಿನಲ್ಲಿಯೂ ಇಡದೆ ಅರ್ಧ ತಲೆಯಲ್ಲಿ ಅಥವಾ ಅರ್ಧ ಜೇಬಿನಲ್ಲಿ ಅರ್ಧ ನೆಲದ ಮೇಲೆ ಇರುತ್ತದೆ. ಗುರುಗಳಿಂದ ಸಿಕ್ಕ ಮಂತ್ರಾಕ್ಷತೆ ಬಹಳ ಶಕ್ತಿಯುತವಾಗಿರುತ್ತದೆ ಗುರುಗಳ ಮಂತ್ರಾಕ್ಷತೆಯನ್ನು ಪಡೆದ ಎಲ್ಲರಿಗೂ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸು ಖಚಿತ. ಮದುವೆ ಶುಭ ಸಮಾರಂಭಗಳಲ್ಲಿಯೂ ಶುಭ ಸಂಕೇತವಾಗಿ ಮಂತ್ರಾಕ್ಷತೆಯನ್ನು ಬಳಸಲಾಗುತ್ತದೆ ಮದುವೆ ಮಾಡಿಕೊಳ್ಳುವ ಹುಡುಗ-ಹುಡುಗಿಯರಿಗೆ ಹಾಕುವ ಆರತಕ್ಷತೆಯಲ್ಲಿ ಸಾವಿರಾರು ಪ್ರಾರ್ಥನೆ ಗಳಿರುತ್ತವೆ. ಮಂತ್ರಾಲಯದಲ್ಲಿ ಗುರು ರಾಘವೇಂದ್ರ ಸ್ವಾಮಿಯ ಆಶೀರ್ವಾದ ಇರುವ ಮಂತ್ರಾಕ್ಷತೆಯ ಮಹತ್ವವನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ.
ರಾಯರ ಮಠದಲ್ಲಿ ನೀಡುವ ಮಂತ್ರಾಕ್ಷತೆಯನ್ನು ನೀವು ತಲೆಯ ಮೇಲೆ ಹಾಕಿಕೊಳ್ಳುತ್ತೀರಿ ಅದು ಕೆಲವು ನಿಮಿಷಗಳಲ್ಲಿ ಕೆಳಗೆ ಬೀಳುತ್ತದೆ. ಮಂತ್ರಾಕ್ಷತೆಯ ಶಕ್ತಿ ಅಪಾರ ಅದನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಯಶಸ್ಸು ಖಚಿತ. ಒಂದು ವೇಳೆ ನೀವು ಅದನ್ನು ಸರಿಯಾಗಿ ಬಳಸಲಿಲ್ಲ ಎಂದರೆ ನಿಮಗೆ ಅಪಾಯ ಕಟ್ಟಿಟ್ಟ ಬುತ್ತಿ. ಯಾಕೆಂದರೆ ಇದು ನೀವು ರಾಯರಿಗೆ ಮಾಡುವಂತಹ ಅಪಮಾನ ಅವಮಾನವಾಗಿದೆ. ಯಾವುದೇ ರೀತಿ ಆರೋಗ್ಯ ಸಮಸ್ಯೆಯಿಂದ ಮುಕ್ತಿ ಹೊಂದಲು ಮಂತ್ರಾಕ್ಷತೆ ಒಳ್ಳೆಯ ಕಾರ್ಯವನ್ನು ಮಾಡುತ್ತದೆ ರಾಯರ ಮಠದಲ್ಲಿ ಇರುವ ಮಂತ್ರಾಕ್ಷತೆಯನ್ನು ಒಂದು ಬಿಳಿ ಬಟ್ಟೆಯಲ್ಲಿ ಹಾಕಿ ಅದನ್ನು ನಿಮ್ಮ ದೇಹದ ಬಲಭಾಗದಲ್ಲಿ ಇಟ್ಟುಕೊಳ್ಳಬೇಕು ಅಂದರೆ ಬಲಭಾಗದ ಜೇಬಿನಲ್ಲಿ ನಂತರ ಮನೆಗೆ ತಲುಪಿದಾಗ ಅದಕ್ಕೆ ಶ್ರೀಗಂಧವನ್ನು ನೀರಿನಲ್ಲಿ ಕಲಕಿ ಒಂದೆರಡು ತುಳಸಿ ದಳಗಳನ್ನು ಹಾಕಿ ನೀರನ್ನು ತಲೆಯ ಮೇಲೆ ಪ್ರೋಕ್ಷಣೆ ಮಾಡಿಕೊಳ್ಳಬೇಕು.
ಗುರು ರಾಯರನ್ನು ನೆನೆಯುತ್ತ ಯಾವುದೇ ಕಾರ್ಯವನ್ನು ಮಾಡಿದರು ಯಶಸ್ಸು ಕಟ್ಟಿಟ್ಟ ಬುತ್ತಿ. ಬಟ್ಟೆಯಲ್ಲಿರುವ ಮಂತ್ರಾಕ್ಷತೆಯನ್ನು ನಿತ್ಯ ಎರಡು ಕಾಳು ಹಾಕಿಕೊಳ್ಳಿ ಮಂತ್ರಾಕ್ಷತೆಯನ್ನು ಶೇಖರಣೆ ಮಾಡಿಕೊಳ್ಳುವುದು ಒಳ್ಳೆಯದು. ಯಾವುದೇ ರೀತಿಯ ಸಮಸ್ಯೆ ಬಂದಾಗ ಮಂತ್ರಾಕ್ಷತೆಯನ್ನು ನಿಮ್ಮ ತಲೆಯ ಮೇಲೆ ಹಾಕಿಕೊಳ್ಳುವುದರಿಂದ ರಾಯರ ಶ್ರೀರಕ್ಷೆಯ ನಿಮ್ಮ ಮೇಲೆ ಇದ್ದ ಹಾಗೆ. ಕಷ್ಟಕಾಲದಲ್ಲಿ ರಾಯರ ಮಂತ್ರಾಕ್ಷತೆಯನ್ನು ಬಳಸಿ ರಾಯರ ಪವಾಡ ನಿಮ್ಮ ಮೇಲೆ ನೇರವಾಗಿ ಆಗುತ್ತದೆ. ಮಂತ್ರಾಕ್ಷತೆಯ ಅಪಾರವಾದ ಶಕ್ತಿ ಇದು ಸರಿಯಾದ ಕ್ರಮದಲ್ಲಿ ಬಳಸಿದರೆ ಮಾತ್ರ ನಿಮ್ಮ ಕೆಲಸದಲ್ಲಿ ಜಯ ನಿಶ್ಚಿತ. ಆರೋಗ್ಯ ಸಮಸ್ಯೆಯಿಂದ ಮುಕ್ತಿ ಪಡೆಯುವುದಕ್ಕೆ ಸಾಧ್ಯವಾಗುತ್ತದೆ.ಇದೇ ಕಾರಣಕ್ಕೆ ಮಂತ್ರಾಕ್ಷತೆ ಗೆ ಜೀವನಾಮೃತ ಎಂದು ಹೇಳಲಾಗುತ್ತದೆ. ಮಂತ್ರಾಕ್ಷತೆ ಎಂದರೆ ಮಂತ್ರಿಸಿದ ಮಂತ್ರಪೂರ್ವಕವಾದಂತಹ ಅಕ್ಷತೆ ಎಂದು ಅರ್ಥ.
ಗುರುಗಳು ಕೊಡುವ ಮಂತ್ರಾಕ್ಷತೆಯನ್ನು ಸುವರ್ಣ ಮಂತ್ರಾಕ್ಷತೆ ಎಂದು ಕೂಡ ಕರೆಯುತ್ತಾರೆ ಮಂತ್ರಾಕ್ಷತೆ ದೇಹ ಆತ್ಮ ಮತ್ತು ಪ್ರಾಣಕ್ಕೆ ಪೋಷಕ ವಾಗಿದೆ. ಇದೊಂದು ದೊಡ್ಡ ಕವಚ ಇದ್ದಹಾಗೆ ಇಷ್ಟಪ್ರಾಪ್ತಿ ಅನಿಷ್ಟ ನಿರ್ವಹಣೆ ದೌರ್ಭಾಗ್ಯ ನಾಶ ದಿವ್ಯತ್ವದ ಉದಯ ಈ ಮಂತ್ರಾಕ್ಷತೆಯಿಂದಲೇ ಸಾಧ್ಯ. ಅರ್ಪಣೆ ಹಾಗೂ ಅನುಗ್ರಹಗಳ ದ್ವಿಮುಖ ಸಂವಹನೆಯನ್ನು ಈ ಮಂತ್ರಾಕ್ಷತೆ ನಿರ್ವಹಿಸುತ್ತದೆ ಆಧ್ಯಾತ್ಮಿಕವಾಗಿ ಹೇಳುವುದಾದರೆ ಅಕ್ಷತೆ ಫಲಾಪೇಕ್ಷೆಯು ಹೌದು. ಧಾರ್ಮಿಕ ವಿಧಿವಿಧಾನಗಳಲ್ಲಿ ಬಳಕೆಮಾಡುವ ಮಂತ್ರಾಕ್ಷತೆಗೆ ವಿಶಿಷ್ಟವಾದ ಅರ್ಥವಿದೆ ಶ್ರೇಯಸ್ಸು ಆಶೀರ್ವಾದದ ಪ್ರತೀಕವೇ ಈ ಮಂತ್ರಾಕ್ಷತೆ ಎನ್ನಲಾಗುತ್ತದೆ. ಸಾಮಾನ್ಯವಾಗಿ ನಾವು ರಾಯರ ಮಠದಲ್ಲಿ ನೀಡುವ ಮಂತ್ರಾಕ್ಷತೆಯನ್ನು ಸರಿಯಾದ ಕ್ರಮದಲ್ಲಿ ಬಳಕೆ ಮಾಡುತ್ತಿಲ್ಲ.
ಹಲವಾರು ಧಾರ್ಮಿಕ ಕ್ಷೇತ್ರಗಳಲ್ಲಿ ಮಂತ್ರಾಕ್ಷತೆಯನ್ನು ನೀಡಲಾಗುತ್ತದೆ ಅದರ ಒಳ ಅರ್ಥ ಇಂದಿನ ಯುವ ಪೀಳಿಗೆಗೆ ತಿಳಿಯುತ್ತಿಲ್ಲ ಗುರು-ಶಿಷ್ಯರ ಬಾಂಧವ್ಯದ ಸಂಕೇತವಾಗಿದೆ ಈ ಮಂತ್ರಾಕ್ಷ.ತೆ ಮಠಕ್ಕೆ ಬಂದಿರುವ ಶಿಷ್ಯರು ಗುರುಗಳಿಂದ ಆಶೀರ್ವಚನ ಆಶೀರ್ವಾದವನ್ನು ಪಡೆದು ಬರಿಗೈಯಲ್ಲಿ ಹೋಗುವುದಿಲ್ಲ ಎಂಬ ವಾಡಿಕೆ ಇದೆ. ಬರುವಾಗ ಫಲ ತಾಂಬೂಲವನ್ನು ತರುವ ಶಿಷ್ಯರು ಗುರುಗಳಿಂದ ಮಂತ್ರಾಕ್ಷತೆಯನ್ನು ಪಡೆದುಕೊಳ್ಳುವುದು ಸಂಪ್ರದಾಯವಾಗಿದೆ. ಇದಕ್ಕೆ ಒಂದು ಅದ್ಭುತವಾದ ಕಥೆ ಇದೆ. ಹಿಂದೆ ಗುರು ರಾಘವೇಂದ್ರ ಸ್ವಾಮಿಯ ಮಠದಲ್ಲಿ ಅನೇಕ ವಿದ್ಯಾರ್ಥಿಗಳು ವ್ಯಾಸಂಗವನ್ನು ಮಾಡುವುದಕ್ಕೆ ಬರುತ್ತಿದ್ದರು ಅವರಲ್ಲೊಬ್ಬ ಬಡ ವಿದ್ದ್ಯಾರ್ಥಿ ತನ್ನ ವಿದ್ಯಾಭ್ಯಾಸ ಮುಗಿಸಿ ಹೊರಡುವಾಗ ರಾಯರ ಬಳಿ ಬಂದು ತನ್ನ ಬಡತನದ ಕಷ್ಟವನ್ನು ಹೇಳಿಕೊಂಡು ತನ್ನನ್ನು ಅನುಗ್ರಹಿಸಬೇಕೆಂದು ಬೇಡಿಕೊಳ್ಳುತ್ತಾನೆ. ಸ್ನಾನದ ಸಮಯದಲ್ಲಿದ್ದ ರಾಯರು ತಮ್ಮ ಬಳಿ ಕೊಡುವುದಕ್ಕೆ ಏನೂ ಇರಲಿಲ್ಲ ಆಗ ರಾಯರು ಶಿಷ್ಯನಿಗೆ ನಾನು ನಿನಗೆ ಏನನ್ನು ಕೊಡಬೇಕು ಎಂದು ಕೇಳುತ್ತಾರೆ.
ಆಗ ಶಿಷ್ಯ ನೀವು ಏನನ್ನು ಕೊಟ್ಟೂರು ಅದು ನನಗೆ ಮಹಾಪ್ರಸಾದ ಒಂದು ಹಿಡಿ ಮಂತ್ರಾಕ್ಷತೆಯನ್ನಾದರು ತಮ್ಮ ಕೈಯಿಂದ ಕೊಡುವಂತೆ ಭಕ್ತಿಯಿಂದ ಬೇಡಿಕೊಳ್ಳುತ್ತಾನೆ. ಆಗ ರಾಯರು ಅಲ್ಲೇ ಇರುವ ಅಕ್ಕಿಯನ್ನು ತೆಗೆದುಕೊಂಡು ಅದನ್ನು ತಮ್ಮ ಮಂತ್ರದಿಂದ ಮಂತ್ರಾಕ್ಷತೆಯನ್ನಾಗಿ ಮಾಡಿ ಅವನಿಗೆ ದಯಪಾಲಿಸುತ್ತಾರೆ. ಅದನ್ನು ತೆಗೆದುಕೊಂಡು ವಿದ್ಯಾರ್ಥಿ ಊರ ಕಡೆಗೆ ಹೊರಡುತ್ತಾನೆ ದಾರಿಯಲ್ಲಿ ಸಿಕ್ಕ ಮನೆಯೊಂದರಲ್ಲಿ ಆಶ್ರಯವನ್ನು ಪಡೆಯುವುದಕ್ಕೆ ನಿರ್ಧಾರ ಮಾಡುತ್ತಾನೆ ಹೀಗೆ ಆಶ್ರಯ ಪಡೆದ ಮನೆಯ ಮಾಲಿಕನ ಹೆಂಡತಿ ಗರ್ಭಿಣಿಯಾಗಿದ್ದಳು ಆ ದಿನ ರಾತ್ರಿ ಪಿಶಾಚಿ ಒಂದು ಹುಟ್ಟಲಿರುವ ಮಗುವನ್ನು ಕೊಲ್ಲಬೇಕೆಂದು ಮನೆಗೆ ನುಗ್ಗಿತ್ತು. ಆದರೆ ಅಲ್ಲೇ ಬಾಗಿಲಲ್ಲಿ ರಾಯರ ಭಕ್ತ ಮಲಗಿದ್ದ ಅವನ ಬಳಿ ಇರುವ ಮಂತ್ರಾಕ್ಷತೆಯನ್ನು ನೋಡಿ ಪಿಶಾಚಿ ಸುಟ್ಟು ಬೂದಿಯಾಯಿತು ಎಂದು ಈ ಕಥೆ ಸಾರುತ್ತದೆ. ಇದೇ ಕಾರಣದಿಂದ ಮಂತ್ರಾಲಯಕ್ಕೆ ಬರುವ ಭಕ್ತರಿಗೆ ರಾಯರ ಮಂತ್ರಾಕ್ಷತೆಯನ್ನು ನೀಡಲಾಗುತ್ತದೆ.
ಮಂತ್ರಾಕ್ಷತೆಯ ಧಾರಣೆಯಿಂದ ದೇಹ ಮನಸ್ಸುಗಳು ಮಾಲಿನ್ಯವನ್ನು ಕಳೆದುಕೊಂಡು ಶುದ್ಧತೆಯನ್ನು ಪಡೆದುಕೊಳ್ಳುತ್ತವೆ ಈ ಹಿನ್ನೆಲೆಯಲ್ಲಿ ವೇದಮಂತ್ರಗಳನ್ನು ಪಠಿಸಿ ಮಂತ್ರಾಕ್ಷತೆಯನ್ನು ಭಗವಂತನಿಗೆ ಅರ್ಪಿಸಿ ಭಕ್ತರು ಅದನ್ನು ಸ್ವೀಕರಿಸುತ್ತಾರೆ. ಜೀವನದಲ್ಲಿ ಸೋಲದಿರಲು ಮಂತ್ರಾಕ್ಷತೆ ಹಾಗೂ ಅದರ ಮೇಲೆ ಇರುವ ವಿಶ್ವಾಸ ಮುಖ್ಯವಾಗಿದೆ. ರಾಯರ ಮಂತ್ರಾಕ್ಷತೆಯನ್ನು ಮೆಚ್ಚಿದವರಿಗೆ ಸೋಲೇ ಇಲ್ಲ ಮಂತ್ರಾಕ್ಷತೆ ಎಲ್ಲಾ ಕ್ಷಯಗಳನ್ನು ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುತ್ತದೆ ಎಂದು ಮಂತ್ರಾಲಯಕ್ಕೆ ಭೇಟಿ ನೀಡುವ ಭಕ್ತರು ನಂಬಿದ್ದಾರೆ. ನೀವು ಕೂಡ ಮಂತ್ರಾಲಯಕ್ಕೆ ರಾಯರ ಮಠಕ್ಕೆ ಭೇಟಿ ನೀಡಿದಾಗ ಮಂತ್ರಾಕ್ಷತೆಯನ್ನು ಸ್ವೀಕರಿಸಿ ನಾವು ಹೇಳಿದ ಹಾಗೆ ಮಾಡಿ ಇದರಿಂದ ನಿಮ್ಮ ಜೀವನ ಸುಖಮಯವಾಗುತ್ತದೆ. ನೀವು ಜೀವನದಲ್ಲಿ ಯಶಸ್ಸು ಹಾಗೂ ಜಯವನ್ನ ಸಾಧಿಸಲಿ ಎಂದು ನಾವು ಕೂಡ ಹಾರೈಸುತ್ತೇವೆ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರಿಗೂ ತಿಳಿಸಿರಿ.