ಸಿಂಹ, ಕನ್ಯಾ, ತುಲಾ, ವೃಶ್ಚಿಕ ಲಗ್ನದಲ್ಲಿ ಜನಿಸಿದವರ ಶಿಕ್ಷಣ, ಉದ್ಯೋಗ, ವೈವಾಹಿಕ ಜೀವನ ಯಾವ ರೀತಿ ಇದೆ ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಸಿಂಹ ಲಗ್ನದವರಿಗೆ ಹಣಕಾಸು ಬರುತ್ತದೆ ಆದರೆ ಆ ಹಣಕಾಸನ್ನು ಜೋಪಾನ ಮಾಡುವುದು ಮುಖ್ಯವಾಗಿದೆ ಏಕೆಂದರೆ ಖರ್ಚಾಗುವ ಸಂಭವವಿದೆ. ಶಿಕ್ಷಣದಲ್ಲಿ ಸೋಂಬೇರಿತನ ಬರುವಂತದ್ದು ಓದಲು ಕಾನ್ಸಂಟ್ರೇಷನ್ ಬರುವುದಿಲ್ಲ. ಮನಸಲ್ಲಿ ಆಸೆಗಳು ಹೆಚ್ಚಾಗುತ್ತದೆ ದುಡ್ಡು ಮಾಡುವ ಆಸೆ ಬರುತ್ತದೆ ದುಡ್ಡು ಮಾಡಲು ಬಿಸಿನೆಸ್ ಮಾಡಿದರೆ ಲಾಸ್ ಆಗುವ ಸಂಭವವಿದೆ. ಈ ಲಗ್ನದವರಿಗೆ ಉದ್ಯೋಗದಲ್ಲಿ ಕಿರಿ ಕಿರಿ ಇರುತ್ತದೆ ಆದರೆ ಈ ಒಂದು ವರ್ಷದಲ್ಲಿ ಅಷ್ಟಾಗಿ ಇರುವುದಿಲ್ಲ. ವೈವಾಹಿಕ ಜೀವನದಲ್ಲಿ ಜಗಳ ಆಗುತ್ತದೆ. ಆರೋಗ್ಯದ ವಿಷಯದಲ್ಲಿ ಹೊಟ್ಟೆ ನೋವು, ಗ್ಯಾಸ್ಟ್ರಿಕ್ ಸಮಸ್ಯೆ ಬರುತ್ತದೆ. ಕನ್ಯಾ ಲಗ್ನದವರಿಗೆ ಶಿಕ್ಷಣದಲ್ಲಿ ಸೊಂಬೇರಿತನ ಬೆಳೆಯಬಹುದು ಶ್ರಮವಹಿಸಿ ಓದಬೇಕಾಗುತ್ತದೆ. ಈ ಲಗ್ನದವರಿಗೆ ವೈವಾಹಿಕ ಜೀವನದಲ್ಲಿ ಸಣ್ಣಪುಟ್ಟ ಜಗಳಗಳು ಬರುತ್ತದೆ. ಈ ಒಂದು ವರ್ಷದಲ್ಲಿ ಉದ್ಯೋಗ ವಿಷಯದಲ್ಲಿ ಕಿರಿಕಿರಿ ಆಗುತ್ತದೆ. ಈ ಲಗ್ನದವರಿಗೆ ಆರೋಗ್ಯದಲ್ಲಿ ಯಾವುದೇ ತೊಂದರೆ ಬರುವುದಿಲ್ಲ.

ತುಲಾ ಲಗ್ನದವರಿಗೆ ಮನೆ, ವಾಹನ, ಸೈಟ್ ಖರೀದಿ ಮಾಡಲು ಒಳ್ಳೆಯ ಸಮಯವಾಗಿದೆ. ಈ ಲಗ್ನದವರಿಗೆ ಶಿಕ್ಷಣದಲ್ಲಿ ಈ ವರ್ಷ ಉತ್ತಮವಾಗಿದೆ. ಉದ್ಯೋಗ ಸಣ್ಣ ಪುಟ್ಟ ಕಿರಿ ಕಿರಿಗಳಾಗುತ್ತದೆ. ಈ ಲಗ್ನದವರಿಗೆ ವೈವಾಹಿಕ ಜೀವನದಲ್ಲಿ ನೆಮ್ಮದಿ ಕೆಡುತ್ತದೆ. ಬಿಸಿನೆಸ್, ಟೀಚರ್, ಅಗ್ರಿಕಲ್ಚರ್ ಸಂಬಂಧಿಸಿ ಕೆಲಸ ಮಾಡುವವರಿಗೆ ಉತ್ತಮವಾಗಿದೆ. ಈ ಲಗ್ನದವರಿಗೆ ಆರೋಗ್ಯದ ಸಮಸ್ಯೆಗಳು ಬರುತ್ತದೆ ಹೆಚ್ಚು ಗಮನ ಕೊಡಬೇಕು. ವೃಶ್ಚಿಕ ಲಗ್ನದವರಿಗೆ ಬಾಡಿಗೆ ಮನೆ ಮಾಡಲು ಒಳ್ಳೆ ಸಮಯ. ಈ ಲಗ್ನದವರಿಗೆ ಮೀಡಿಯಾ, ಸಿನಿಮಾ, ಸಾಫ್ಟವೇರ್ ಕ್ಷೇತ್ರದಲ್ಲಿ ಇರುವವರಿಗೆ ಉತ್ತಮ ಸಮಯವಾಗಿದೆ ಬ್ಯುಸಿ ಟೈಮ್ ಆಗಿರುತ್ತದೆ, ಶಿಕ್ಷಣದ ವಿಷಯದಲ್ಲಿ ಸಣ್ಣ ಪುಟ್ಟ ಕಿರಿಕಿರಿ. ಈ ಲಗ್ನದವರಿಗೆ ವೈವಾಹಿಕ ಜೀವನದಲ್ಲಿ ಸಣ್ಣ ಪುಟ್ಟ ಕಿರಿಕಿರಿ ಆಗುತ್ತದೆ. ಸೇಲ್ಸ್ ಮಾರ್ಕೆಟಿಂಗ್ ಮಾಡುವವರಿಗೆ ಒಳ್ಳೆಯದಾಗುತ್ತದೆ. ಆರೋಗ್ಯದ ವಿಷಯದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಬರುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!