ಗೃಹಲಕ್ಷ್ಮಿ ಯೋಜನೆಯನ್ನು ಕರ್ನಾಟಕ ರಾಜ್ಯ ಸರ್ಕಾರ ಅವರು ನೀಡಿದ ಆಶ್ವಾಸನೆ ಉಳಿಸಿಕೊಳ್ಳಲು ,ಯಾವುದೇ ಆದಾಯ ಇಲ್ಲದೆ ಮನೆಯಲ್ಲೆ ಇರುವ ಮನೆಯ ಒಡತಿಗೆ (ಯಜಮಾನಿ) ತಿಂಗಳಿಗೆ 2,000 ಹಣವನ್ನು ಅವರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುವರು.
ಅದಕ್ಕೂ ಕೆಲವು ನಿಯಮಗಳು ಇದೆ. ಮಹಿಳೆಯರ ಹೆಸರು ಪಡಿತರ ಚೀಟಿಯಲ್ಲಿ ಇರಬೇಕು ಅಂತವರಿಗೆ ಮಾತ್ರ ಈ ಯೋಜನೆಯ ಫಲ ಸಿಗುತ್ತದೆ. ಈಗಾಗಲೇ 5ದು ಮತ್ತು 6ನೇ ಕಂತಿನ ಹಣ ಸರ್ಕಾರ ಮಹಿಳೆಯರ ಖಾತೆಗೆ ವರ್ಗಾವಣೆ ಮಾಡಿದೆ. 7ನೇ ಮತ್ತು 8ನೇ ಕಂತಿನ ಹಣ ಪಾವತಿಗೆ ಮುನ್ನ ಸರ್ಕಾರ ಹೊಸ ನಿಯಮ ಜಾರಿ ಮಾಡಿದೆ. ಕೆಲವು ಮಹಿಳೆಯರಿಗೆ ತಾಂತ್ರಿಕ ದೋಷದ ಕಾರಣ ಮತ್ತು ಹಲವು ಕಾರಣದ ಪರಿಣಾಮ ಇನ್ನು ಹಣ ಅವರ ಖಾತೆ ಸೇರಿಲ್ಲ.
ಈ ದೃಢೀಕರಣ ಪತ್ರವನ್ನು ಸಲ್ಲಿಸದೆ ಹೋದರೆ ಖಾತೆಗೆ ಹಣ ಬರುವುದಿಲ್ಲ. ಯಾವುದು ಆ ದಾಖಲೆ, ಎಲ್ಲಿ ಅದನ್ನು ಸಲ್ಲಿಸಬೇಕು ಎಂದು ತಿಳಿಯೋಣ. ಹಣ ಕೈ ಸೇರದೆ ಇರುವ ಮಹಿಳೆಯರ ಬಗ್ಗೆ ಗಂಭೀರವಾಗಿ ಯೋಚನೆ ಮಾಡಿ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ. ವಿದ್ಯಮಾನ ನಾಗರಿಕ ಸೇವಾ ವಿತರಣಾ ನಿರ್ದೇಶಣಾಲಯದ ಜೊತೆ ಸಭೆ ಕೈಗೊಂಡು ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಮಹಿಳೆಯರಿಗೆ ಐ.ಟಿ. ( IT ) ಮತ್ತು ಜಿ.ಎಸ್.ಟಿ. ( GST ) ವ್ಯಾಪ್ತಿಗೆ ಬರುವುದಿಲ್ಲ ಎಂದು ದೃಢೀಕರಣ ಪತ್ರವನ್ನು ನೀಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಮಾಡಿ ಅವರು ಯಾವುದೇ ತೆರಿಗೆ ಪಾವತಿ ಮಾಡದೆ ಇದ್ದರು. ಪೋರ್ಟಲ್ ನಲ್ಲಿ ಜಿ.ಎಸ್.ಟಿ. ( GST ) ಎಂದು ತೋರಿಸುತ್ತಿತ್ತು.
ಈ ಕಾರಣದಿಂದ ಕೆಲವು ಮಹಿಳೆಯರಿಗೆ ಹಣ ಪಾವತಿ ಆಗಿಲ್ಲ. ಅರ್ಹತೆ ಉಳ್ಳವರು ಐ.ಟಿ. ( IT ) ಮತ್ತು ಜಿ.ಎಸ್.ಟಿ. ( GST ) ಪ್ರಾಧಿಕಾರದಿಂದ ಅವರು ತೆರಿಗೆ ವ್ಯಾಪ್ತಿಗೆ ಬರುವುದಿಲ್ಲ ಎಂದು ದೃಢೀಕರಣ ಪತ್ರವನ್ನು ಪಡೆದು. ಆ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾ ಕಛೇರಿಗೆ ಸಲ್ಲಿಸಬೇಕು.
ಈ ಕಛೇರಿಯ ಮಂದಿ ಆ ತಾಲ್ಲೂಕಿಗೆ ಸಂಬಂಧಪಟ್ಟ ಅರ್ಹತೆ ಇರುವ ಮಹಿಳೆಯರ ಪತ್ರವನ್ನು ಜಿಲ್ಲಾ ಉಪ ನಿರ್ದೇಶಕರ ಕಛೇರಿಗೆ ತಲುಪಿಸುವರು. ನಂತರ ಜಿಲ್ಲಾ ಉಪ ನಿರ್ದೇಶಕರು ತಮ್ಮ ಜಿಲ್ಲೆಯ ವ್ಯಾಪ್ತಿಯ ಪ್ರಧಾನ ನಿರ್ದೇಶಕರಿಗೆ ಆ ಪ್ರತ್ರವನ್ನು ಸಲ್ಲಿಸುವರು.
ಅದಾದ ನಂತರ ಆ ಕುಟುಂಬದ ವಿವರ ತಂತ್ರಾಂಶದ ಇಲಾಖೆ ಕೈ ಸೇರುತ್ತದೆ. ಅರ್ಜಿಗಳ ಪುನರ್ ಪರ್ಶೀಲನೆ ನಡೆಯುತ್ತದೆ. ನಂತರ ಸರ್ಕಾರದ ಕಡೆಯಿಂದ ಹಣ ಪಾವತಿ ಆಗುತ್ತದೆ. ಯಾವ ಮಹಿಳೆಯರಿಗೆ ಈ ಯೋಜನೆಯ ಫಲ ಸಿಗುತ್ತಿದೆ. ಅವರು, ತಪ್ಪದೆ ದಾಖಲೆಗಳನ್ನು ಸಲ್ಲಿಸಿ. ಇಲ್ಲ ಎಂದರೆ ನಿಮ್ಮ ಖಾತೆಗೆ ಹಣ ಪಾವತಿಯಾಗದೇ ಉಳಿಯಬಹುದು.