Gruhalakshmi Scheme Status Check: ಈಗಾಗಲೇ ಗ್ರಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿರುವವರು, ಅವರು ಸಲ್ಲಿಸಿದ ಅರ್ಜಿ ಸ್ವೀಕಾರಗೊಂಡಿದೆಯೋ ಅಥವಾ ಇಲ್ಲವೋ, ಅವುಗಳಲ್ಲಿ ಯಾವುದಾದರು ದೋಷಗಳಿವೆಯೇ, ಅಥವಾ ಸ್ವೀಕೃತ ದಾಖಲೆಯನ್ನ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ? ಎಂಬಲ್ಲ ಹಲವಾರು ಯೋಚನೆಯನ್ನು ಮಾಡುತ್ತಿರಬಹುದು ಇವೆಲ್ಲಾ ಗೊಂದಲಗಳಿಗೆ ಈ ಕೆಳಗಿನ ಲೇಖನದಲ್ಲಿ ನಾವು ಪರಿಹಾರವನ್ನು ಕಂಡುಕೊಳ್ಳೋಣ.
ಮೊದಲನೆಯದಾಗಿ ಗೃಹಲಕ್ಷ್ಮಿಗೆ ಅರ್ಜಿ ಸಲ್ಲಿಸಿರುವ ಮಹಿಳೆಯರ ಮಂಜೂರಾತಿ ಪತ್ರ ಹೇಗಿರುತ್ತದೆ ಎಂದು ನೋಡುವುದಾದರೆ ಈ ಪತ್ರವು ಕರ್ನಾಟಕ ಸರ್ಕಾರದ ಚಿಹ್ನೆಯನ್ನು ಹೊಂದಿದ್ದು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರ ಫೋಟೋ ಅನ್ನ ಹೊಂದಿರುತ್ತದೆ
ಈ ಪತ್ರದಲ್ಲಿ ಅರ್ಜಿಯನ್ನು ಸ್ವೀಕರಿಸಿ ಹಣವನ್ನು ಮಂಜೂರು ಮಾಡಲಾಗಿರುವಂತಹ ವಿಷಯವನ್ನು ಬರವಣಿಗೆಯ ರೂಪದಲ್ಲಿ ತಿಳಿಸಿರಲಾಗಿದೆ ಈ ಮಂಜೂರು ಪತ್ರದಲ್ಲಿ ಒಂದು ಸ್ಕ್ಯಾನರ್ ಇದ್ದು ಇದನ್ನು ಮಂಜೂರು ಪತ್ರದ ನೈಜತೆಯನ್ನು ತಿಳಿಸಲು ನೀಡಲಾಗಿದೆ.
Gruhalakshmi Scheme Status Check
ಇನ್ನು ಈ ರೀತಿಯ ಮಂಜೂರಾತಿ ಪತ್ರವನ್ನ ಅರ್ಜಿ ಸಲ್ಲಿಸಿದ ಪ್ರತಿಯೊಬ್ಬರು ಪಡೆದಿಲ್ಲ ಏಕೆಂದರೆ ಕೆಲವೊಂದು ಕಡೆಗಳಲ್ಲಿ ಮಾತ್ರ ಈ ರೀತಿಯ ಪತ್ರಗಳನ್ನ ಅರ್ಜಿ ಹಾಕಿದ ತಕ್ಷಣವೇ ನೀಡುತ್ತಾರೆ. ಈ ಪತ್ರವನ್ನು ಮೊಬೈಲ್ ಮೂಲಕ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ಈ ಕೆಳಗೆ ನೋಡೋಣ.
ಗೃಹ ಜ್ಯೋತಿ ಅಪ್ಲಿಕೇಶನ್ ಹಾಕಲು ಬಳಸುತ್ತಿದ್ದ ಸೇವಾ ಸಿಂಧು ವೆಬ್ಸೈಟ್ನಲ್ಲಿ ಈ ಗೃಹಲಕ್ಷ್ಮಿ ಯೋಜನೆಯ ಮಂಜೂರಾತಿ ಪತ್ರವನ್ನು ಪಡೆದುಕೊಳ್ಳಬಹುದು ಈ ವೆಬ್ಸೈಟ್ನ ಹೋಂ ಪೇಜ್ ನಲ್ಲಿ ಸರ್ಕಾರದ ಎಲ್ಲಾ ಸೌಲಭ್ಯಗಳ ಅಪ್ಲಿಕೇಶನ್ ವಿವರ ಕಾಣಿಸುತ್ತದೆ. ಗೃಹಲಕ್ಷ್ಮಿ ಯೋಜನೆ ಅರ್ಜಿಯನ್ನು ಸಲ್ಲಿಸಿರುವ ಅಭ್ಯರ್ಥಿಗಳು ಸ್ಕ್ರೀನ್ ಮೇಲೆ ಕಾಣುವಂತಹ ‘ನಿಮ್ಮ ಅಪ್ಲಿಕೇಶನ್ ಸ್ಥಿತಿಯನ್ನು ತಿಳಿಯಿರಿ’ ಎನ್ನುವ ಪ್ಲೇಸ್ ಅನ್ನು ಕ್ಲಿಕ್ ಮಾಡಬೇಕಾಗುತ್ತದೆ ಕ್ಲಿಕ್ ಮಾಡಿದ ತಕ್ಷಣ ಗೃಹಜೋತಿಯ ಅಪ್ಲಿಕೇಶನ್ ನಿಮಗೆ ಕಾಣಿಸುತ್ತದೆ
ಇದೇ ಪ್ಲೇಸ್ ನಲ್ಲಿ ಗೃಹಲಕ್ಷ್ಮಿಯ ಅಪ್ಲಿಕೇಶನ್ ವಿವರಗಳನ್ನು ಸಹ ಇನ್ನೂ ಕೆಲವೇ ದಿನಗಳಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆಗ ಗೃಹಲಕ್ಷ್ಮಿ ಗ್ರಹ ಜ್ಯೋತಿ ಎಂಬ ಎರಡು ಆಪ್ಷನ್ಗಳಲ್ಲಿ ಗೃಹಲಕ್ಷ್ಮಿ ಯೋಜನೆ ಆಪ್ಶನ್ ನನ್ನ ಕ್ಲಿಕ್ ಮಾಡಿ ನಿಮ್ಮ ರೇಷನ್ ಕಾರ್ಡ್ ನಂಬರ್ ಅನ್ನು ಅಪ್ಡೇಟ್ ಮಾಡಬೇಕಾಗುತ್ತದೆ ಇದಾದ ನಂತರ ನಿಮ್ಮ ಮಂಜೂರಾತಿ ಪತ್ರ ಸಿಗುತ್ತದೆ ಅದನ್ನು ಸೇವ್ ಮಾಡಿಟ್ಟುಕೊಳ್ಳಬಹುದು.
ಇನ್ನೂ ಇದುವರೆಗೂ ಗೃಹಲಕ್ಷ್ಮಿ ಯೋಜನೆಗೆ ಅಪ್ಲೈ ಮಾಡದೇ ಇರುವವರು ಚಿಂತಿಸುವ ಅಗತ್ಯ ಇಲ್ಲ ಏಕೆಂದರೆ ಆಗಸ್ಟ್ 5 ರಿಂದ ಜನಪ್ರತಿನಿಧಿಗಳು ತಮ್ಮ ತಮ್ಮ ಮನೆಗಳಿಗೆ ಬಂದು ಪ್ರತಿಯೊಬ್ಬ ಮನೆಯ ಯಜಮಾನಿಗು ಕೂಡ ಗೃಹಲಕ್ಷ್ಮಿ ಯೋಜನೆ ಸೌಲಭ್ಯ ದೊರೆಯುವಂತೆ ಮನೆಯಲ್ಲಿಯೇ ಅಪ್ಲಿಕೇಶನ್ ಹಾಕಿ, ಮಂಜೂರಾತಿ ಪತ್ರವನ್ನು ನೀಡುತ್ತಾರೆ. ಇದನ್ನೂ ಓದಿ ರೈತರ ಕೃಷಿ ಭೂಮಿಯಲ್ಲಿ ಕರೆಂಟ್ ಕಂಬ ಅಥವಾ TC ಇದ್ದವರಿಗೆ ಇದೀಗ ಸಿಹಿ ಸುದ್ದಿ