ರಾಜ್ಯದ ಮಹಿಳೆಯರಿಗೆ ಸಹಾಯ ಆಗಲಿ ಎಂದು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆ ಜಾರಿಗೆ 4 ತಿಂಗಳು ಕಲೆಯುತ್ತಿದೆ. ಸುಮಾರು ಮಹಿಳೆಯರಿಗೆ 3 ಕಂತಿನ ಹಣ ಕೂಡ ಬಂದಿದೆ. ಆದರೆ ಇನ್ನೂ ಸಾಕಷ್ಟು ಮಹಿಳೆಯರಿಗೆ ಮೊದಲ 2 ಕಂತುಗಳ ಹಣ ಬಿಟ್ಟು ಇನ್ನೇನು ಬಂದಿಲ್ಲ ಎನ್ನುತ್ತಿದ್ದಾರೆ. ಇತ್ತ ಸರ್ಕಾರ ರೇಷನ್ ಕಾರ್ಡ್, ಬ್ಯಾಂಕ್ ಅಕೌಂಟ್ ಇವುಗಳ ಸಮಸ್ಯೆ ಇರೋದಕ್ಕೆ ಹಣ ಬಂದಿಲ್ಲ ಎಂದು ಹೇಳುತ್ತಿದೆ.
ವಿಚಾರಿಸಲು ಆಹಾರ ಇಲಾಖೆಗೆ ಹೋದರೆ ಅವರಲ್ಲಿ ಸರಿಯಾದ ಮಾಹಿತಿ ಇಲ್ಲ, ಬ್ಯಾಂಕ್ ನಲ್ಲಿ ವಿಚಾರಿಸಿ ಎನ್ನುತ್ತಾರೆ, ಬ್ಯಾಂಕ್ ಗ್3 ಹೋದರೆ ನಮಗೆ ಗೊತ್ತಿಲ್ಲ ಆಹಾರ ಇಲಾಖೆಗೆ ಹೋಗಿ ಅಂತ ಹೇಳುತ್ತಾರೆ ಎಂದು ಮಹಿಳೆಯರು ತಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತಾ ಇಲ್ವಾ ಎಂದು ಆತಂಕಕ್ಕೆ ಒಳಗಾಗಿದ್ದಾರೆ. ಮಹಿಳೆಯರು ಹೇಳುವ ಪ್ರಕಾರ ಅವರ ಬ್ಯಾಂಕ್ ಅಕೌಂಟ್ ಸರಿಯಾಗಿಯೇ ಇದೆ, ಸರ್ಕಾರದ ಸಮಸ್ಯೆ ಇಂದಲೇ ಹಣ ಬಂದಿಲ್ಲ. ಹೀಗಾಗಿ ಇದು ಸರ್ಕಾರದ ತೊಂದರೆಯೇ ಎಂದು ಗೊತ್ತಾಗುತ್ತಿದೆ.
ಹಲವು ಮಹಿಳೆಯರಿಗೆ ಒಂದು ಕಂತಿನ ಹಣವು ಬಂದಿಲ್ಲದೇ ಇರುವವರು ಮೂರು ದಿನಗಳ ಕ್ಯಾಂಪ್ ಅಟೆಂಡ್ ಮಾಡಿದ್ದಾರೆ. ಕ್ಯಾಂಪ್ ನಲ್ಲಿ ಮಹಿಳೆಯರು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಂಡಿದ್ದಾರೆ. ಹಾಗಾಗಿ 4ನೇ ಕಂತಿನ ಗಣ ಬಹುತೇಕ ಮಹಿಳೆಯರಿಗೆ ಬರುವುದು ಪಕ್ಕಾ ಆಗುತ್ತದೆ. ಈಗಾಗಲೇ 15 ಜಿಲ್ಲೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಆಗಿತ್ತು, ಇದೀಗ ಪೆಂಡಿಂಗ್ ಇರುವ ಜಿಲ್ಲೆಗಳಲ್ಲಿ ಕೂಡ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಆಗಿದೆ.
ನಿಮಗೂ ಕೂಡ 4ನೇ ಕಂತಿನ ಹಣ ಬಂದಿರಬಹುದು. ನಿಮಗೆ ಹಣ ಬಂದ ತಕ್ಷಣವೇ ಎಸ್.ಎಂ.ಎಸ್ ಬರುತ್ತದೆ ಒಂದು ವೇಳೆ ಎಸ್.ಎಂ.ಎಸ್ ಬಂದಿಲ್ಲ ಎಂದರೆ ಬ್ಯಾಂಕ್ ಗೆ ಹೋಗಿ ಚೆಕ್ ಮಾಡಿಕೊಳ್ಳಬಹುದು. ಜೊತೆಗೆ ಡಿಬಿಟಿ ಕರ್ನಾಟಕ ಆಪ್ ಇನ್ಸ್ಟಾಲ್ ಮಾಡುವ ಮೂಲಕ ಸ್ಟೇಟಸ್ ಚೆಕ್ ಮಾಡಬಹುದು. ಈ ಆಪ್ ಗೆ ನೀವು ಆಧಾರ್ ಕಾರ್ಡ್ ನಂಬರ್ ಅಥವಾ ಅದಕ್ಕೆ ಲಿಂಕ್ ಆಗಿರುವ ಫೋನ್ ನಂಬರ್ ಇಂದ ಲಾಗಿನ್ ಮಾಡಬೇಕಾಗುತ್ತದೆ. ಲಾಗಿನ್ ಮಾಡಿ, ಗೃಹಲಕ್ಷ್ಮೀ ಯೋಜನೆಯ ಡಿಬಿಟಿ ಸ್ಟೇಟಸ್ ಅನ್ನು ಚೆಕ್ ಮಾಡಬಹುದು.