ಕಾಂಗ್ರೆಸ್ ಸರ್ಕಾರವು ರಾಜ್ಯದ ಮಹಿಳೆಯರಿಗೆ, ಮನೆ ನಡೆಸಿಕೊಂಡು ಹೋಗುತ್ತಿರುವ ಗೃಹಲಕ್ಷ್ಮಿಯರಿಗೆ ಸಹಾಯ ಆಗಲಿ ಎಂದು ಜಾರಿಗೆ ತಂದಿರುವ ಯೋಜನೆ ಗೃಹಲಕ್ಷ್ಮಿ ಯೋಜನೆ ಆಗಿದೆ. ಈ ಯೋಜನೆಯ ಮೂಲಕ ರಾಜ್ಯದ ಮಹಿಳೆಯರಿಗೆ ಪ್ರತಿ ತಿಂಗಳು ₹2000 ರೂಪಾಯಿ ಪರಿಹಾರ ಹಣವನ್ನು ನೀಡುವ ಪ್ಲಾನ್ ಹೊಂದಿದೆ ಸರ್ಕಾರ. ಗೃಹಲಕ್ಷ್ಮಿ ಯೋಜನೆಗೆ ರಾಜ್ಯದ 1.17 ಕೋಟಿ ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ. ಅವರ ಪೈಕಿ ಸುಮಾರು 80% ಮಹಿಳೆಯರಿಗೆ ಹಣ ಕೂಡ ತಲುಪುತ್ತಿದೆ.

ಆದರೆ ಕೆಲ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ತಲುಪಿಲ್ಲ, ಅವರ ಬ್ಯಾಂಕ್ ಅಕೌಂಟ್ ನಲ್ಲಿರುವ ಸಮಸ್ಯೆ, ಆಧಾರ್ ಕಾರ್ಡ್ ಸಮಸ್ಯೆ, ರೇಷನ್ ಕಾರ್ಡ್ ನಲ್ಲಿ ತಪ್ಪು ಮಾಹಿತಿ ಈ ಕಾರಣಗಳಿಗೆ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರದೇ ಇರಬಹುದು. ಈ ಸಮಸ್ಯೆಗಳನ್ನು ಸರಿಪಡಿಸಲು, ಸರ್ಕಾರವು ಗೃಹಲಕ್ಷ್ಮಿ ಅದಾಲತ್, ಗೃಹಲಕ್ಷ್ಮಿ ಕ್ಯಾಂಪೇನ್ ಅನ್ನು ಕೂಡ ನಡೆಸಿತು..

ಇದರಲ್ಲಿ ಲಕ್ಷಾಂತರ ಮಹಿಳೆಯರು ಭಾಗಿಯಾಗಿ ತಮ್ಮ ಸಮಸ್ಯೆಗಳನ್ನು ಸರಿಪಡಿಸಿಕೊಂಡು, ಗೃಹಲಕ್ಷ್ಮೀ ಯೋಜನೆಯ ಹಣವನ್ನು ಪಡೆಯುತ್ತಿದ್ದಾರೆ. ಆದರೆ ಇನ್ನೂ ಕೂಡ ಕೆಲವರಿಗೆ ಗೃಹಲಕ್ಷ್ಮಿ ಯೋಜನೆಯಲ್ಲಿ ಹಣ ಬಂದಿಲ್ಲ. ಅನರ್ಹರು ಅರ್ಜಿ ಸಲ್ಲಿಸಿದರೆ, ಅವರಿಗೆ ಹಣ ಬಂದಿಲ್ಲದೇ ಇರಬಹುದು. ಅರ್ಜಿ ಬ್ಲಾಕ್ ಆಗಿದ್ದರು ಆಗಿರಬಹುದು. ಆದರೆ ಅರ್ಹರಾಗಿದ್ದು ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ ಅಂದ್ರೆ ಈ ರೀತಿ, ಹಣ ಖಂಡಿತವಾಗಿ ಬರುತ್ತದೆ…

*ಮೊದಲಿಗೆ ನಿಮ್ಮ ಕುಟುಂಬದ ರೇಷನ್ ಕಾರ್ಡ್ ನಲ್ಲಿ ಮನೆಯ ಮುಖ್ಯಸ್ಥೆಯ ಸ್ಥಾನದಲ್ಲಿ ಮನೆಯ ಯಜಮಾನಿಯ ಹೆಸರು ಇದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಹಾಗೆಯೇ ರೇಷನ್ ಕಾರ್ಡ್ ನಲ್ಲಿ ಯಾವುದಾದರು ತಪ್ಪಿದ್ದರೆ, ತಿದ್ದುಪಡಿ ಮಾಡಿಸಿಕೊಳ್ಳಿ. ಇದೆಲ್ಲವನ್ನು ಸರಿಪಡಿಸಿಕೊಂಡರೆ, ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಖಂಡಿತವಾಗಿ ತಲುಪುತ್ತದೆ.

*ಇನ್ಕಮ್ ಟ್ಯಾಕ್ಸ್ ಕಟ್ಟುತ್ತಿರುವವರಿಗೆ ಮತ್ತು ಸರ್ಕಾರಿ ಕೆಲಸ ಹೊಂದಿರುವವರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಸಿಗುವುದಿಲ್ಲ. ಅಂಥವರು ಅಪ್ಲೈ ಮಾಡಿದ್ದರೆ ನಿಮ್ಮ ಅಪ್ಲಿಕೇಶನ್ ರದ್ದಾಗುತ್ತದೆ. ಅಕಸ್ಮಾತ್ ಆ ರೀತಿ ಅಲ್ಲದೇ ಇದ್ದರು ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ ಅಂದರೆ ಮತ್ತೊಮ್ಮೆ ಅರ್ಜಿ ಸಲ್ಲಿಸಿ. ಹೀಗೆ ಮಾಡುವುದರಿಂದ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಖಂಡಿತವಾಗಿ ಸಿಗುತ್ತದೆ.

*ಆಧಾರ್ ಕಾರ್ಡ್ ಬ್ಯಾಂಕ್ ಅಕೌಂಟ್ ಗೆ ಸರಿಯಾಗಿ ಲಿಂಕ್ ಆಗಿದ್ಯಾ ಎಂದು ಚೆಕ್ ಮಾಡಿಕೊಳ್ಳಿ. Ekyc ಆಗಿದ್ಯಾ ಎಂದು ನೋಡಿ, ಆಗಿಲ್ಲ ಎಂದರೆ ಅದನ್ನು ಮಾಡಿಸಿಕೊಳ್ಳಿ. ಇದಿಷ್ಟು ಕೆಲಸಗಳನ್ನು ಮಾಡಿದರೆ, ಖಂಡಿತವಾಗಿ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಸಿಗುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!