Gruhalakshmi: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದಾಗಿದ್ದು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನಗಳಿಂದ ಇವತ್ತಿನವರೆಗೆ ಗೃಹಲ ಲಕ್ಷ್ಮಿ ಯೋಜನೆಯ ಸೌಲಭ್ಯವನ್ನು ರಾಜ್ಯದ ಬಹುತೇಕ ಮಹಿಳೆಯರು ಪಡೆದುಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಕಳೆದ 2 ತಿಂಗಳಿಂದ ಹಣ ಜಮಾ ಆಗಿಲ್ಲ, ಇದರ ಬೆನ್ನಲ್ಲಿ ಬಹುತೇಕ ಮಂದಿ ಗ್ಯಾರಂಟಿ ಸ್ಕೀಮ್ ನಿಲ್ಲಿಸಲಾಗಿದೆ ಎನ್ನುವ ವದಂತಿ ಸುಳ್ಳು ಸುದ್ದಿಗಳಿಗೆ ಇದೀಗ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ತೆರೆ ಎಳೆದಿದ್ದಾರೆ.

ಹೌದು ರಾಜ್ಯದ ಮಹಿಳೆಯರು ಕಳೆದ 2 ರಿಂದ 3 ತಿಂಗಳಿನ ಹಣ ಇವತ್ತು ಬರತ್ತೆ ನಾಳೆ ಬರುತ್ತೆ ಎಂಬುದಾಗಿ ಕಾದು ಕುಳಿತಿದ್ದಾರೆ, ಆದ್ರೆ ಈ ವಿಚಾರವನ್ನು ಅಧಿಕೃತವಾಗಿ ಯಾರೇ ರಾಜಕೀಯ ಅಧಿಕಾರಿ ಅಥವಾ ಸರ್ಕಾರ ಸ್ಪಷ್ಟಣೆ ಕೊಟ್ಟಿರಲಿಲ್ಲ, ಆದ್ರೆ ಇದೀಗ ಈ ವಿಚಾರ ಕುರಿತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟಣೆ ನೀಡಿದ್ದಾರೆ.

ಹೌದು ಗೃಹಲಕ್ಷ್ಮಿ ಯೋಜನೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ ಇದು ಬಂದ್ ಆಗಲ್ಲ ತಾಂತ್ರಿಕ ದೋಷದಿಂದ ಕಳೆದ 2 ತಿಂಗಳ ಹಣ ಜಮೆ ಮಾಡಲು ಆಗಿಲ್ಲ, ನಮ್ಮ ತಾಂತ್ರಿಕ ತಂಡ ಇದರ ಸಲುವಾಗಿ ಕೆಲಸ ಮಾಡುತ್ತಿದೆ, ಇನ್ನೂ 10 ದಿನಗಲ್ಲಿ DBT ಮೂಲಕ ಗೃಹಲಕ್ಷ್ಮಿಯರ ಖಾತೆಗೆ 2 ಕಂತುಗಳ ಹಣ 4000 ಸಾವಿರ ಒಟ್ಟಿಗೆ ಜಮಾ ಆಗುತ್ತೆ. ಎನ್ನುವುದನ್ನ ಮಾಧ್ಯಮದ ಮೂಲಕ ಎಲ್ಲ ಉಹಾ ಪೋಹಗಳಿಗೆ ಸ್ಪಷ್ಟನೇ ಕೊಟ್ಟಿದ್ದಾರೆ.

ಒಟ್ಟಾರೆಯಾಗಿ ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಇರುವಂತ 4000 ಹಣ ಈ ತಿಂಗಳ ಕೊನೆಯಲ್ಲಿ ಅಥವಾ ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ನಿಮ್ಮ ಖಾತೆಗೆ ಜಮಾ ಆಗಲಿದೆ ಅನ್ನೋದು ಖಚಿತವಾಗಿದೆ.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!