Gruhalakshmi Scheme Money about New Information: ಕರ್ನಾಟಕ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ಚುನಾವಣೆಯ ಸಮಯದಲ್ಲಿ ಕೆಲವು ಯೋಜನೆಗಳ ಬಗ್ಗೆ ತಿಳಿಸಿದ್ದರು ಅದರಂತೆ ಇಂದು ಚುನಾವಣೆಯಲ್ಲಿ ಗೆದ್ದು ಸರ್ಕಾರ ನಡೆಸುತ್ತಿದ್ದು ತಾವು ಹೇಳಿದ ಮಾತಿನಂತೆ ಗೃಹಲಕ್ಷ್ಮೀ, ಶಕ್ತಿ ಯೋಜನೆ ಇತ್ಯಾದಿ ಯೋಜನೆಗಳನ್ನು ಜಾರಿಗೆ ತಂದಿದ್ದು ಇದೀಗ ಸರ್ಕಾರದ ಮಹತ್ತರವಾದ, ಮಹಿಳೆಯರಿಗಾಗಿ ಇರುವ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ದೊರೆತಿದ್ದು ಕೆಲವೆ ಕೆಲವು ಮಹಿಳೆಯರಿಗೆ ಹಣ ಬಂದಿದ್ದು ಹೆಚ್ಚಿನ ಮಹಿಳೆಯರಿಗೆ ಹಣ ಬಂದಿಲ್ಲ. ಹಣ ಬರದೆ ಇರುವ ಮಹಿಳೆಯರು ಮಾಡಬೇಕಾದ ಕೆಲಸ ಏನು ಎಂಬುದನ್ನು ಈ ಲೇಖನದಲ್ಲಿ ನೋಡೋಣ.
ಸರ್ಕಾರದ ಮಹತ್ತರ ಯೋಜನೆ ಗೃಹಲಕ್ಷ್ಮೀ ಯೋಜನೆಯ ಹಣ ಬಹುತೇಕ ಜನರಿಗೆ ಬಂದಿಲ್ಲ ಕೆಲವು ಜಿಲ್ಲೆಗಳಲ್ಲಿ ಕೆಲವು ಮಹಿಳೆಯರ ಖಾತೆಗೆ ಮಾತ್ರ ಹಣ ಬಂದಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಮಹಿಳೆಯರ ಖಾತೆಗೆ ಹಣ ಬರುತ್ತದೆ. ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದ ಕೆಲವು ಮಹಿಳೆಯರಿಗೆ ಸರ್ಕಾರದಿಂದ ಹಣ ಬಂದಿದೆ ಎಂದು ಮೆಸೇಜ್ ಬಂದಿದೆ ಅವರಿಗೆ ಹಣ ಬಂದಿದೆ. ಇನ್ನುಳಿದ ಮಹಿಳೆಯರಿಗೆ ಸರ್ಕಾರದಿಂದ ಹಣ ಬಂದಿದೆ ಎಂಬ ಮೆಸೇಜ್ ಬಂದಿಲ್ಲ ಹಾಗೆಯೆ ಹಣವು ಬಂದಿಲ್ಲ.
ಗೃಹಲಕ್ಷ್ಮೀ ಯೋಜನೆಯ ಹಣ ಬರದೆ ಇರುವವರು 8147500500 ಈ ನಂಬರ್ ಗೆ ರೇಷನ ಕಾರ್ಡ್ ನಂಬರ್ ಅನ್ನು ನಾರ್ಮಲ್ ಟೆಕ್ಸ್ಟ್ ಮೆಸೇಜ್ ಮಾಡಿ ನಂತರ ನಿಮಗೆ ಎರಡು ಮೆಸೇಜ್ ಬರುತ್ತದೆ ಒಂದು ಮೆಸೇಜ್ ನಿಮ್ಮ ಗೃಹಲಕ್ಷ್ಮೀ ಯೋಜನೆಯ ಅರ್ಜಿ ಸಂಖ್ಯೆ ಹೀಗಿದೆ ಯಶಸ್ವಿಯಾಗಿ ಸಲ್ಲಿಸಲಾಗಿದೆ ಎಂದು ಬಂದರೆ ಭಯ ಪಡುವ ಅಗತ್ಯವಿಲ್ಲ ಅರ್ಜಿಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.
ರೇಷನ್ ಕಾರ್ಡ್ ನಂಬರ್ ಅನ್ನು 8147500500 ಗೆ ಕಳುಹಿಸಿದಾಗ ನಿಮ್ಮ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಬಾಕಿ ಇದೆ ನಿಮ್ಮ ಹತ್ತಿರದ ಕರ್ನಾಟಕ ಒನ್, ಗ್ರಾಮ ಒನ್, ಬೆಂಗಳೂರು ಒನ್ ಅಥವಾ ಬಾಪೂಜಿ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಕರ್ನಾಟಕ ಸರ್ಕಾರ ಈ ರೀತಿ ಮೆಸೇಜ್ ಬಂದರೆ ಅರ್ಜಿ ಸಲ್ಲಿಕೆಯಾಗಿಲ್ಲ ಎಂದು ಅರ್ಥ ಈ ಕೂಡಲೆ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಮೊಬೈಲ್ ಅನ್ನು ತೆಗೆದುಕೊಂಡು ಹತ್ತಿರದ ಸೇವಾ ಸಿಂಧು ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು. ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲಾಗಿದೆ ಆದರೆ ಹಣ ಬರದೆ ಇರುವವರು ಆಧಾರ್ ಕಾರ್ಡ್ ನಂಬರ್ ಗೆ ಬ್ಯಾಂಕ್ ಅಕೌಂಟ್ ಲಿಂಕ್ ಆಗಿದೆಯಾ ನೋಡಿಕೊಳ್ಳಬೇಕು ರೆಸಿಡೆಂಟ್ ಡಾಟ್ ಯುಐಡಿಎಐ ಡಾಟ್ ಜಿಒವಿ ಡಾಟ್ ಇನ್ ಸ್ಲ್ಯಾಷ್ ಬಿಎಎನ್ ಕೆ ಡ್ಯಾಶ್ ಎಂಎಪಿಪಿಎಆರ್ ಈ ಲಿಂಕ್ ಕೇಂದ್ರ ಸರ್ಕಾರದ ಲಿಂಕ್ ಆಗಿದ್ದು ಯಾವುದೆ ತೊಂದರೆ ಇಲ್ಲ ಈ ಲಿಂಕ್ ಅನ್ನು ಮೊಬೈಲ್ ನಲ್ಲಿ ಓಪನ್ ಮಾಡಿದಾಗ ಒಂದು ಪೇಜ್ ಓಪನ್ ಆಗುತ್ತದೆ ಅಲ್ಲಿ ಆಧಾರ್ ನಂಬರ್ ಅನ್ನು ಹಾಕಬೇಕು
Gruhalakshmi Scheme Money about New Information
ನಂತರ ಕ್ಯಾಪ್ಚರ್ ಕೋಡ್ ಹಾಕಿ ಕೆಳಗೆ ಸೆಂಡ್ ಓಟಿಪಿ ಎಂಬ ಆಪ್ಷನ್ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿದಾಗ ಆಧಾರ್ ಕಾರ್ಡ್ ಗೆ ರಿಜಿಸ್ಟರ್ ಆಗಿರುವ ಮೊಬೈಲ್ ನಂಬರ್ ಗೆ ಒಂದು ಓಟಿಪಿ ಬರುತ್ತದೆ ಬಂದಿರುವ ಓಟಿಪಿಯನ್ನು ಎಂಟ್ರಿ ಮಾಡಿದಾಗ ಸಬ್ ಮಿಟ್ ಆಪ್ಷನ್ ಮೇಲೆ ಕ್ಲಿಕ್ ಮಾಡಿದಾಗ ಕಂಗ್ರಾಜುಲೇಷನ್ ಯುವರ್ ಆಧಾರ್ ಮ್ಯಾಪಿಂಗ್ ಹ್ಯಾಸ್ ಬೀನ್ ಡನ್ ಎಂದು ಬರುತ್ತದೆ ಹಾಗೆ ಒಂದು ಪೇಜ್ ನಲ್ಲಿ ಬ್ಯಾಂಕ್ ಅಕೌಂಟ್ ಡೀಟೇಲ್ ಇರುತ್ತದೆ ಹೀಗೆ ಬಂದರೆ ಬ್ಯಾಂಕ್ ಅಕೌಂಟ್ ಗೂ ಆಧಾರ್ ಕಾರ್ಡ್ ಗೂ ಲಿಂಕ್ ಆಗಿದೆ ಎಂದು ಅರ್ಥ.
ಒಂದು ವೇಳೆ ಬ್ಯಾಂಕ್ ಅಕೌಂಟ್ ಗೆ ಆಧಾರ್ ಕಾರ್ಡ್ ಲಿಂಕ್ ಆಗದೆ ಇದ್ದಲ್ಲಿ ಓಟಿಪಿ ಹಾಕಿದ ನಂತರ ಬರುವ ಸ್ಕ್ರೀನ್ ನಲ್ಲಿ ಯುವರ್ ಆಧಾರ್ ಇಸ್ ನಾಟ್ ಲಿಂಕ್ ಡ್ ಟು ಅ ಬ್ಯಾಂಕ್ ಎಂದು ಬರುತ್ತದೆ ಅಂದರೆ ಆಧಾರ್ ಕಾರ್ಡ್ ನಂಬರ್ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಆಗಿರುವುದಿಲ್ಲ ಎಂದು, ಬ್ಯಾಂಕ್ ಅಕೌಂಟ್ ಗೆ ಆಧಾರ್ ಕಾರ್ಡ್ ಲಿಂಕ್ ಆಗದೆ ಇದ್ದಲ್ಲಿ ಅಕೌಂಟ್ ಇರುವ ಬ್ಯಾಂಕಿಗೆ ಭೇಟಿ ನೀಡಿದರೆ ಒಂದು ಫಾರ್ಮ್ ಕೊಡುತ್ತಾರೆ ಈ ಫಾರ್ಮ್ ಅನ್ನು ತುಂಬಬೇಕು ಫಾರ್ಮ್ ನಲ್ಲಿ ಅಕೌಂಟ್ ನಂಬರ್, ಆಧಾರ್ ನಂಬರ್, ಮೊಬೈಲ್ ನಂಬರ್ ಇತ್ಯಾದಿ ಮಾಹಿತಿಗಳನ್ನು ಸರಿಯಾಗಿ ಕೊಡಬೇಕಾಗುತ್ತದೆ. ಕೆಲವು ಬ್ಯಾಂಕ್ ಗಳಲ್ಲಿ ಕೇವಲ ಅರ್ಜಿದಾರರ ಥಂಬ್ ಇಂಪ್ರೆಶನನ್ನು ಹಾಗೂ ಆಧಾರ್ ಕಾರ್ಡ್ ತೆಗೆದುಕೊಂಡು ಹೋದರೆ ಲಿಂಕ್ ಮಾಡಿಕೊಡುತ್ತಾರೆ.
ಇದನ್ನು ಹೊರತುಪಡಿಸಿ ಬೇರೆ ಯಾವುದೇ ಪ್ರೊಸಿಜರ್ ಮಾಡುವ ಅವಶ್ಯಕತೆ ಇಲ್ಲ ಒಂದು ವಾರದಲ್ಲಿ ಮಹಿಳೆಯರ ಅಕೌಂಟ್ ಗೆ ಹಣ ಬರಬಹುದು. ಶಿವಮೊಗ್ಗ ಜಿಲ್ಲೆಯಲ್ಲಿ ಮೂರು ಲಕ್ಷದ ಅರವತ್ತೈದು ಸಾವಿರ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರು ಈಗಾಗಲೆ ಎರಡು ಲಕ್ಷದ ಎಂಭತ್ತು ಸಾವಿರ ಮಹಿಳೆಯರ ಅಕೌಂಟ್ ಗೆ ಎರಡು ಸಾವಿರ ರೂಪಾಯಿ ಹಣವನ್ನು ಹಾಕಲಾಗಿದೆ ಕೆಲವು ಮಹಿಳೆಯರ ಅಕೌಂಟ್ ಗೆ ಹಾಕಿದ ಹಣ ಸರ್ಕಾರಕ್ಕೆ ವಾಪಸ್ ಬಂದಿದೆ ವಾಪಸ್ ಬಂದ ಅಕೌಂಟ್ ಗಳನ್ನ ಸರಿಪಡಿಸಿ ಈ ವಾರದಲ್ಲಿ ಹಣವನ್ನು ಅಕೌಂಟ್ ಗೆ ತಲುಪಿಸುತ್ತಾರೆ ಎಂದು ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದ ನಿರ್ದೇಶಕರು ತಿಳಿಸಿದ್ದಾರೆ.
ಒಂದು ವಾರದಲ್ಲಿ ಅರ್ಜಿ ಸಲ್ಲಿಸಿದ ಎಲ್ಲ ಮಹಿಳೆಯರ ಅಕೌಂಟ್ ಗೆ ಹಣ ತಲುಪಿಸಲಾಗುತ್ತದೆ ಮೊಬೈಲ್ ನಂಬರ್ ಗೆ ಮೆಸೇಜ್ ಬರದೆ ಇದ್ದರೂ ಅಕೌಂಟ್ ಗೆ ಹಣ ಹೋಗುತ್ತದೆ. ಕಾತುರದಿಂದ ಕಾಯುತ್ತಿರುವ ಮಹಿಳೆಯರು ರೇಷನ್ ಕಾರ್ಡ್ ನಂಬರ್ ಅನ್ನು ಮೆಸೇಜ್ ಮಾಡಿದಾಗ ಗೃಹಲಕ್ಷ್ಮೀ ಯೋಜನೆಗೆ ಸಲ್ಲಿಸಿದ ಅರ್ಜಿ ಯಶಸ್ವಿಯಾಗಿದೆ ಮೆಸೇಜ್ ಬಂದಿದ್ದರೆ ಬ್ಯಾಂಕ್ ಅಕೌಂಟ್ ಆಧಾರ್ ಕಾರ್ಡ್ ಲಿಂಕ್ ಆಗಿದ್ದರೆ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಒಂದು ವಾರದ 15 ದಿನಗಳಲ್ಲಿ ನಿಮ್ಮ ಅಕೌಂಟ್ ಗೆ ಹಣ ಬರುತ್ತದೆ ಸ್ವಲ್ಪ ಕಾಯಬೇಕು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.