Gruhalakshmi Scheme: ರಾಜ್ಯದ ಮಹಿಳೆಯರಿಗೆ ಸಹಾಯ ಆಗಲಿ ಎಂದು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆ ಜಾರಿಗೆ 4 ತಿಂಗಳು ಕಲೆಯುತ್ತಿದೆ. ಸುಮಾರು ಮಹಿಳೆಯರಿಗೆ 3 ಕಂತಿನ ಹಣ ಕೂಡ ಬಂದಿದೆ. ಆದರೆ ಇನ್ನೂ ಸಾಕಷ್ಟು ಮಹಿಳೆಯರಿಗೆ ಮೊದಲ 2 ಕಂತುಗಳ ಹಣ ಬಿಟ್ಟು ಇನ್ನೇನು ಬಂದಿಲ್ಲ ಎನ್ನುತ್ತಿದ್ದಾರೆ. ಇತ್ತ ಸರ್ಕಾರ ರೇಷನ್ ಕಾರ್ಡ್, ಬ್ಯಾಂಕ್ ಅಕೌಂಟ್ ಇವುಗಳ ಸಮಸ್ಯೆ ಇರೋದಕ್ಕೆ ಹಣ ಬಂದಿಲ್ಲ ಎಂದು ಹೇಳುತ್ತಿದೆ.
ವಿಚಾರಿಸಲು ಆಹಾರ ಇಲಾಖೆಗೆ ಹೋದರೆ ಅವರಲ್ಲಿ ಮಾಹಿರಿ ಇಲ್ಲ, ಬ್ಯಾಂಕ್ ನಲ್ಲಿ ವಿಚಾರಿಸಿ ಎನ್ನುತ್ತಾರೆ, ಬ್ಯಾಂಕ್ ಗ್3 ಹೋದರೆ ನಮಗೆ ಗೊತ್ತಿಲ್ಲ ಆಹಾರ ಇಲಾಖೆಗೆ ಹೋಗಿ ಅಂತ ಹೇಳುತ್ತಾರ್3 ಎಂದು ಮಹಿಳೆಯರು ತಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತಾ ಇಲ್ವಾ ಎಂದು ಆತಂಕಕ್ಕೆ ಒಳಗಾಗಿದ್ದಾರೆ. ಮಹಿಳೆಯರು ಹೇಳುವ ಪ್ರಕಾರ ಅವರ ಬ್ಯಾಂಕ್ ಅಕೌಂಟ್ ಸರಿಯಾಗಿಯೇ ಇದೆ, ಸರ್ಕಾರದ ಸಮಸ್ಯೆ ಇಂದಲೇ ಹಣ ಬಂದಿಲ್ಲ. ಹೀಗಾಗಿ ಇದು ಸರ್ಕಾರದ ತೊಂದರೆಯೇ ಎಂದು ಗೊತ್ತಾಗುತ್ತಿದೆ.
ಹಲವು ಮಹಿಳೆಯರಿಗೆ ಒಂದು ಕಂತಿನ ಹಣವು ಬಂದಿಲ್ಲದೇ ಇರುವುದು ಅವರ ಆತಂಕ ಹೆಚ್ಚಿಸಿದೆ. ಆದರೆ ಸರ್ಕಾರ ಇದಕ್ಕಾಗಿ ಕೆಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು, ಅದರ ಅನುಸಾರ ಗೃಹಲಕ್ಷ್ಮಿ ಅದಾಲತ್ ಶುರು ಮಾಡಿ, ಮಹಿಳೆಯರ ಕಷ್ಟಗಳನ್ನು ಸ್ವತಃ ಕೇಳಿ ಸರ್ಕಾರವೇ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲಿದೆ ಎಂದು ತಿಳಿದುಬಂದಿದೆ. ಇದರ ಜೊತೆಗೆ ಮತ್ತೊಂದು ಸಮಸ್ಯೆ ಬಗ್ಗೆ ಕೂಡ ಜನರಿಗೆ ಗೊತ್ತಾಗಿದೆ. ಈ ಮತ್ತೊಂದು ಸಮಸ್ಯೆ ಅನ್ನಭಾಗ್ಯ ಯೋಜನೆಯ ಬಗ್ಗೆ ಆಗಿದೆ.
ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದ ಸರ್ಕಾರ ಬಿಪಿಎಲ್, ಅಂತ್ಯೋದಯ ಕಾರ್ಡ್ ಇರುವವರಿಗೆ 5ಕೆಜಿ ಅಕ್ಕಿ ನೀಡಿ ಇನ್ನು 5 ಕೆಜಿ ಅಕ್ಕಿಯ ಬದಲಾಗಿ ಹಣ ಕೊಡುತ್ತಿದೆ. ಆದರೆ ಈ ಹಣವು ಕೂಡ ಜನರ ಬ್ಯಾಂಕ್ ಅಕೌಂಟ್ ತಲುಪಿಲ್ಲ ಎಂದು ಮಾಹಿತಿ ಸಿಕ್ಕಿದೆ. ಅನ್ನಭಾಗ್ಯ ಯೋಜನೆಯಿಂದಲು ಜನರಿಗೆ ಅಸಮಾಧಾನ ಉಂಟಾಗಿದ್ದು, ಸರ್ಕಾರ ತಮ್ಮ ಸಮಸ್ಯೆಗಳನ್ನು ಸರಿ ಮಾಡಿಕೊಂಡು ಜನರಿಗೆ ಯಾವ ಕೊಟ್ಟ ಭರವಸೆಗಳನ್ನು ಯಾವಾಗ ಉಳಿಸಿಕೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ..