Gruhalakshmi Scheme: ಗೃಹಲಕ್ಷ್ಮಿ ಯೋಜನೆ ಮನೆಯನ್ನು ನಡೆಸಿಕೊಂಡು ಹೋಗುತ್ತಿರುವ ಎಲ್ಲಾ ಗೃಹಿಣಿಯರಿಗಾಗಿ ಶುರು ಮಾಡಿರುವ ಯೋಜನೆ ಆಗಿದೆ. ಆಗಸ್ಟ್ 30ರಂದು ಈ ಯೋಜನೆಗೆ ಅದ್ಧೂರಿಯಾಗಿ ಚಾಲನೆ ಸಿಕ್ಕಿತು. ಸಿಎಂ ಸಿದ್ದರಾಮಯ್ಯ ಅವರು, ಡಿಸಿಎಂ ಡಿಕೆ ಶಿವಕುಮಾರ್, ರಾಹುಲ್ ಗಾಂಧಿ ಅವರು, ಲಕ್ಷ್ಮೀ ಹೆಬ್ಬಾಳ್ಕರ್ ಅವರು ಎಲ್ಲರು ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಹಾಗೆಯೇ ಮೈಸೂರು, ಚಾಮರಾಜನಗರ, ಕೊಡಗು ಈ ಜಿಲ್ಲೆಗಳಿಂದ ಜನರು ಕೂಡ ಬಂದಿದ್ದರು.
ಅಂದಿನಿಂದಲೇ ಎಲ್ಲಾ ಮಹಿಳೆಯರ ಅಕೌಂಟ್ ಗೆ ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ಹಣ ಬರುತ್ತದೆ ಎಂದು ಹೇಳಲಾಗುತಿತ್ತು. ಹಲವು ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ ಹಣ ಬಂದಿದ್ದರು ಕೂಡ, ಇನ್ನು ಸಾಕಷ್ಟು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಸಿಕ್ಕಿಲ್ಲ. ಇದರಿಂದ ಎಲ್ಲಾ ಮಹಿಳೆಯರಿಗೆ ಚಿಂತೆಯಾಗಿದೆ. ತಮಗೆ ಹಣ ಬರುತ್ತೋ ಇಲ್ಲವೋ ಎಂದು ಗೊಂದಲಕ್ಕೆ ಒಳಗಾಗಿದ್ದಾರೆ. ಅಂಥವರಿಗಾಗಿ ಇದೀಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸ್ಪಷ್ಟನೆ ನೀಡಿದ್ದಾರೆ.
“ಫಲ ಪಡೆಯುತ್ತಿರುವ ಎಲ್ಲರಿಗೂ ಕೂಡ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಖಂಡಿತವಾಗಿ ಪಡೆಯುತ್ತಾರೆ, ಇಷ್ಟನ್ನು ಗ್ಯಾರಂಟಿ ನೀಡುತ್ತೇನೆ. ಎಲ್ಲಾ ಗೃಹಲಕ್ಷ್ಮಿಯರ ಅಕೌಂಟ್ ಗೆ ಹಣ ಬರುತ್ತದೆ.. ಕೆಲವು ಮಹಿಳೆಯರ ಬ್ಯಾಂಕ್ ಅಕೌಂಟ್ ನಲ್ಲಿಯೇ ತೊಂದರೆ ಇರುವುದರಿಂದ ಅವರ ಅಕೌಂಟ್ ಗೆ ಹಣ ಬಂದಿಲ್ಲ ಎಂದು ಹೇಳಲಾಗುತ್ತಿದೆ. ಯಾರಿಗೆ ಇನ್ನು ಹಣ ಬಂದಿಲ್ಲ ಅಂಥವರನ್ನು ಗುರುತಿಸುವ ಕೆಲಸವನ್ನು ಮೊದಲು ಮಾಡುತ್ತೇವೆ.
ಇದಕ್ಕಾಗಿ ಅಂಗನವಾಡಿ ಕಾರ್ಯಕರ್ತೆಯರ ಸಹಾಯ ಅಗತ್ಯವಿದೆ. ಅವರ ಸಹಾಯ ಪಡೆದು, ಅರ್ಹತೆ ಇರುವವರಿಗೆ ಹಮ ಜಮೆ ಆಗುವ ಹಾಗೆ ಮಾಡುತ್ತೇವೆ..ಈ ತೊಂದರೆ ಇಂದ ಮುಕ್ತಿಹಾಗಿ ಹೆಲ್ಪ್ ಲೈನ್ ಶುರುಮಡುತ್ತೇವೆ..” ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಅವರು ಎಲ್ಲಾ ಹೆಣ್ಣುಮಕ್ಕಳಿಗೆ ಭರವಸೆ ನೀಡಿದ್ದಾರೆ.