Gruhalakshmi Scheme: ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಸಿಕ್ಕು ಮೂರು ತಿಂಗಳುಗಳ ಸಮಯ ಕಳೆದುಹೋಗಿದೆ. ಈಗಾಗಲೇ 1.20 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಇನ್ನೂ ಲಕ್ಷಾಂತರ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ಹಣ ಸಿಕ್ಕಿಲ್ಲ. ಅದಕ್ಕೆ ಕಾರಣ ಎಂದು ಸರ್ಕಾರಕ್ಕೆ ಕೇಳಿದರೆ, ಆಧಾರ್ ಕಾರ್ಡ್ ಸೀಡಿಂಗ್ ಆಗಿಲ್ಲ, ekyc ಆಗಿಲ್ಲ ಎಂದು ಕಾರಣ ನೀಡುತ್ತಾರೆ.
ಆದರೆ ಇನ್ನುಮುಂದೆ ನೀವು ಗೃಹಲಕ್ಷ್ಮಿ ಯೋಜನೆಯ ಹಣ ಇನ್ನು ಬಂದಿಲ್ಲ ಎಂದು ಆತಂಕ ಪಡುವ ಅಗತ್ಯವೇ ಇಲ್ಲ. ಏಕೆಂದರೆ ನಿನ್ನೆಯಷ್ಟೇ 12 ಜಿಲ್ಲೆಯ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿದ್ದು, 3 ತಿಂಗಳ ಹಣ ಒಟ್ಟಿಗೆ ಆ ಜಿಲ್ಲೆಯ ಮಹಿಳೆಯರ ಬ್ಯಾಂಕ್ ಅಕೌಂಟ್ ಗೆ ಬಂದಿದೆ. ಹಾಗಾಗಿ ಮಹಿಳೆಯರು ಆತಂಕ ಪಡುವ ಅಗತ್ಯವಿಲ್ಲ. ರಾಜ್ಯದ ಬೇರೆ ಜಿಲ್ಲೆಯ ಮಹಿಳೆಯರಿಗೆ ಕೂಡ ಆದಷ್ಟು ಬೇಗ 3 ತಿಂಗಳ ಹಣ ಕೂಡ ಸಿಗಲಿದೆ.
ಬಾಗಲಕೋಟೆ , ವಿಜಯಪುರ, ಕೊಪ್ಪಳ, ಬಳ್ಳಾರಿ, ಗದಗ, ಉತ್ತರ ಕನ್ನಡ, ಚಿತ್ರದುರ್ಗ, ದಾವಣಗೆರೆ, ಕಲ್ಬುರ್ಗಿ, ಶಿವಮೊಗ್ಗ, ಯಾದಗಿರಿ ಮತ್ತು ಉಡುಪಿ ಜಿಲ್ಲೆಯ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಖಾತೆಗೆ ಬಂದಿದೆ. ಗೃಹಲಕ್ಷ್ಮಿ ಯೋಜನೆಯ ಹಣ ಇನ್ನು ಸಿಕ್ಕಿಲ್ಲ ಎಂದರೆ ಮೊದಲಿಗೆ ನಿಮ್ಮ ರೇಷನ್ ಕಾರ್ಡ್ ಸರಿ ಇದೆಯಾ ಎನ್ನುವುದನ್ನು ಚೆಕ್ ಮಾಡಿಸಿಕೊಳ್ಳಿ. ರೇಷನ್ ಕಾರ್ಡ್ ನಲ್ಲಿರುವ ಮಾಹಿತಿ ಸರಿಯಿಲ್ಲ ಎಂದರೆ, ಗೃಹಲಕ್ಷ್ಮಿ ಯೋಜನೆಯ ಹಣ ನಿಮಗೆ ಸಿಗುವುದಿಲ್ಲ..
ಹಾಗಾಗಿ ಮೊದಲಿಗೆ ನೀವು ರೇಷನ್ ನಲ್ಲಿ ಕೊಟ್ಟಿರುವ ಎಲ್ಲಾ ಮಾಹಿತಿ ಸರಿ ಇದೆಯಾ ಎಂದು ಚೆಕ್ ಮಾಡಿಕೊಳ್ಳುವುದು ಒಳ್ಳೆಯದು. ಮನೆಯ ಯಜಮಾನಿಯ ಹೆಸರು ರೇಶನ್ ಕಾರ್ಡ್ ನಲ್ಲಿ ಇರಬೇಕು. ಒಂದು ವೇಳೆ ನೀವು ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿದ್ದರೆ, ಸರ್ಕಾರದ ಡೇಟಾ ಬೇಸ್ ನಲ್ಲಿ ಅಪ್ಲೋಡ್ ಆಗಿದ್ಯಾ ಎನ್ನುವುದನ್ನು ಪರೀಕ್ಷಿಸಿ. ರೇಷನ್ ಕಾರ್ಡ್ ನಲ್ಲಿ ಮುಖ್ಯಸ್ಥರ ಸ್ಥಾನದಲ್ಲಿ ಪುರುಷರ ಹೆಸರು ಕಂಡುಬಂದರೆ ಅವರ ಬ್ಯಾಂಕ್ ಖಾತೆಗೆ ಹಣ ಬರುವುದಿಲ್ಲ.
ಇದಷ್ಟೇ ಅಲ್ಲದೆ, ಆಗಾಗ ನೀವು ರೇಷನ್ ಕಾರ್ಡ್ ಪರಿಶೀಲನೆ ಮಾಡುವುದು ಒಳ್ಳೆಯದು, ಏಕೆಂದರೆ ಸರಿಯಾಗಿ ಚೆಕ್ ಮಾಡಿರದ ರೇಷನ್ ಕಾರ್ಡ್ ಅನ್ನು ಆಹಾರ ಇಲಾಖೆ ರದ್ದು ಮಾಡುತ್ತದೆ. ಒಂದು ವೇಳೆ ನಿಮ್ಮ ಆಧಾರ್ ಕಾರ್ಡ್ ರದ್ದಾದರೆ ನಿಮಗೆ ಯಾವುದೇ ಯೋಜನೆಯ ಸೌಲಭ್ಯ ಸಿಗುವುದಿಲ್ಲ. ಹಾಗಾಗಿ ಇದನ್ನು ಚೆಕ್ ಮಾಡಿಕೊಳ್ಳಿ. ಇದೆಲ್ಲವೂ ಸರಿ ಇದ್ದರೆ, ಖಂಡಿತವಾಗಿ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಸಿಗುತ್ತದೆ.