Gruhalakshmi scheme 2nd installment date: ಕಾಂಗ್ರೆಸ್ ಸರ್ಕಾರ ರಾಜ್ಯದ ಮಹಿಳೆಯರಿಗಾಗಿ ಜಾರಿಗೆ ತಂದಿರುವ ಯೋಜನೆ ಗೃಹಲಕ್ಷ್ಮಿ ಯೋಜನೆ ಆಗಿದೆ. ಇದು ಮದುವೆಯಾಗಿ ಮನೆಯನ್ನು ನಡೆಸುತ್ತಿರುವ ಎಲ್ಲಾ ಮಹಿಳೆಯರಿಗಾಗಿ ಜಾರಿಗೆ ತಂದಿರುವ ವಿಶೇಷವಾದ ಯೋಜನೆ ಆಗಿದ್ದು, ಈ ಯೋಜನೆಯ ಇನ್ನು ಎಲ್ಲಾ ಮಹಿಳೆಯರನ್ನು ತಲುಪಿಲ್ಲ. ಮೊದಲ ಕಂತು ಹಾಗೂ ಎರಡನೇ ಕಂತಿನ ಹಣ ಮಹಿಳೆಯರ ಬ್ಯಾಂಕ್ ಅಕೌಂಟ್ ಗೆ ಬರೋದು ಯಾವಾಗ ಎನ್ನುವ ಪ್ರಶ್ನೆ ಶುರುವಾಗಿದ್ದು, ಆ ಪ್ರಶ್ನೆಗೆ ಇಂದು ಉತ್ತರ ತಿಳಿಸುತ್ತೇವೆ ನೋಡಿ..
ಗೃಹಲಕ್ಷ್ಮಿಯ ಯೋಜನೆಯ ಹಣ ಒಂದಷ್ಟು ಮಹಿಳೆಯರನ್ನು ತಲುಪಿದ್ದರೆ, ಇನ್ನಷ್ಟು ಮಹಿಳೆಯರನ್ನು ತಲುಪಿಲ್ಲ. ಇದಕ್ಕಾಗಿ ಮಹಿಳೆಯರು ಆತಂಕಕ್ಕೆ ಒಳಗಾಗಿದ್ದು, ಗೃಹಲಕ್ಷ್ಮಿ ಯೋಜನೆಯ ಹಣ ಇನ್ನು ಬಂದಿಲ್ಲ ಎಂದು ಹೇಳುತ್ತಿದ್ದಾರೆ. ಈ ವಿಚಾರವಾಗಿ ಇಲಾಖೆಯಲ್ಲಿ ವಿಚಾರಿಸಿದರೆ, 1 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ತಲುಪಿದೆ, 15 ಲಕ್ಷ ಮಹಿಳೆಯರನ್ನು ತಲುಪಿಲ್ಲ ಎಂದು ಹೇಳಿದ್ದಾರೆ..
ಆದರೆ ಈ ಅಂಕಿ ಅಂಶ ಪೂರ್ತಿ ಸರಿಯಾಗಿದೆ ಎಂದು ಹೇಳಲಾಗುವುದಿಲ್ಲ. ಇನ್ನು ಹೆಚ್ಚಿನ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಗಣ ಸಿಕ್ಕಿಲ್ಲ. ಈ ವಿಚಾರದ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಂತ್ರಿಗಳು ಮಾತನಾಡಿದ್ದು, ಇನ್ನು ಯಾರಿಗೆಲ್ಲಾ ಹಣ ಸಿಕ್ಕಿಲ್ಲ ಅವರ ಡೇಟಾ ಕಲೆಕ್ಟ್ ಮಾಡಿ ಈ ಸಮಸ್ಯೆಯನ್ನು ಶೀಘ್ರದಲ್ಲೇ ಸರಿ ಮಾಡಿ ಎಲ್ಲಾ ಮಹಿಳೆಯರಿಗೆ ಹಣ ತಲುಪುವ ಹಾಗೆ ಮಾಡುವುದಾಗಿ ಹೇಳಿದ್ದಾರೆ. ಮೊದಲ ಕಂತಿನ ಹಣ ಇನ್ನು ಬಂದಿಲ್ಲ ಎಂದು ನೀವು ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ.
Gruhalakshmi Scheme 2nd installment date
ಯಾವುದನ್ನು ಸರಿ ಮಾಡಲು ಹೋಗುವುದು ಕೂಡ ಬೇಡ, ನೀವು ವಿಚಾರಿಸಲು ಹೋದರೆ ಲಿಂಕ್ ಆಗಿರುವುದು ಸರಿಯಿಲ್ಲ ಎಂದು ಹಲವು ಕಾರಣ ಕೊಡುತ್ತಾರೆ. ಆದರೆ ಅದೆಲ್ಲವೂ ನಿಜವಲ್ಲ. ಅನ್ನಭಾಗ್ಯ ಯೋಜನೆಯ ಹಣ ಬಂದಿದ್ದು, ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ ಎಂದರೆ ಅದು ಜನರ ತಪ್ಪಲ್ಲ. ಸರ್ಕಾರವೇ ಈ ಸಮಸ್ಯೆಯನ್ನು ಸರಿ ಮಾಡಬೇಕಾಗಿದೆ. ನಿಮ್ಮ ಅಪ್ಲಿಕೇಶನ್ ನಲ್ಲಿ ತೊಂದರೆ ಇದೆ ಎಂದು ನೀವು ಸರಿ ಮಾಡುವ ಅಗತ್ಯವಿಲ್ಲ. ಹಣ ಬರುವವರೆಗೂ ಕಾಯಬೇಕಿದೆ..
ಇನ್ನು ಎರಡನೇ ಕಂತಿನ ಹಣ ಬರೋದು ಯಾವಾಗ ಎನ್ನುವ ಪ್ರಶ್ನೆಗೂ ಉತ್ತರ ಸಿಕ್ಕಿದ್ದು, ಆಕ್ಟೊಬರ್ 15 ರಿಂದ 20ನೇ ತಾರೀಕಿನ ಒಳಗೆ ಗೃಹಲಕ್ಷ್ಮಿ ಯೋಜನೆಯ ಹಣ ಮಹಿಳೆಯರ ಬ್ಯಾಂಕ್ ಖಾತೆಗೆ ಕ್ರೆಡಿಟ್ ಆಗುತ್ತದೆ ಎಂದು ತಿಳಿಸಿದ್ದಾರೆ. ಇನ್ನು ಮೊದಲ ಕಂತಿನ ಹಣ ಇನ್ನು ಸಿಕ್ಕಿಲ್ಲ ಎಂದರೆ, ಅದನ್ನು ಶೀಘ್ರದಲ್ಲೇ ತಲುಪಿಸುವ ಕಾರ್ಯ ಮಾಡುತ್ತದೆ ಎಂದು ಹೇಳಲಾಗುತ್ತಿದೆ..