Gruhalakshmi list in kannada: ಗೃಹಲಕ್ಷ್ಮಿ ಯೋಜನೆಯ ಮೂಲಕ ರಾಜ್ಯದ ಮಹಿಳೆಯರಿಗೆ ಆರ್ಥಿಕವಾಗಿ ಸಹಾಯ ಮಾಡುವ ಯೋಚನೆಯಿಂದ ಸರ್ಕಾರವು ಆಗಸ್ಟ್ ತಿಂಗಳಿನಲ್ಲಿ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿತು. ಗೃಹಲಕ್ಷ್ಮಿ ಯೋಜನೆ ಲಾಂಚ್ ಆಗಿ 4 ಕಂತಿನ ಹಣ ಬಿಡುಗಡೆ ಆಗಿದ್ದರು ಸಹ ಎಲ್ಲಾ ಮಹಿಳೆಯರಿಗೆ ಇನ್ನು 4 ಕಂತುಗಳ ಹಣ ಸಿಕ್ಕಿಲ್ಲ. ಆ ಮಹಿಳೆಯರಿಗೆ ಆತಂಕ ಶುರುವಾಗಿದೆ.
ಇನ್ನು ಸರ್ಕಾರದಿಂದ ಸಿಕ್ಕಿರುವ ಮಾಹಿತಿಯ ಪ್ರಕಾರ, ಮಹಿಳೆಯರ ಸಮಸ್ಯೆಯನ್ನು ಪರಿಹರಿಸಲು ಗೃಹಲಕ್ಷ್ಮಿ ಅದಾಲತ್ ಶುರು ಮಾಡಲಾಗಿದೆ. ಗೃಹಲಕ್ಷ್ಮಿ ಯೋಜನೆಯ ಹಣವು ಇನ್ನು 20% ಮಹಿಳೆಯರಿಗೆ ಬಂದಿಲ್ಲ. ಅವರೆಲ್ಲರೂ ಗೃಹಲಕ್ಷ್ಮಿ ಅದಾಲತ್ ನ ಅಧಿಕಾರಿಗಳ ಬಳಿ ತಮ್ಮ ಸಮಸ್ಯೆಯನ್ನು ತಿಳಿಸಬಹುದು. ಅಧಿಕಾರಿಗಳು ನಿಮ್ಮ ಮನೆಗೆ ನಿಮ್ಮ ಸಮಸ್ಯೆಯನ್ನು ಕೇಳಿ ಪರಿಹರಿಸುತ್ತಾರೆ.
ಈ ತಿಂಗಳು ಮುಗಿದು ಹೊಸ ವರ್ಷ ಶುರುವಾಗುವ ವೇಳೆಗೆ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಸಮಸ್ಯೆಗಳು ಬಗೆಹರಿಯುತ್ತದೆ. ಹಾಗೆಯೇ ಅನ್ನಭಾಗ್ಯ ಯೋಜನೆಯಲ್ಲಿ ಸಹ ಸಾಕಷ್ಟು ಜನರಿಗೆ ಇನ್ನು ಹಣ ತಲುಪಿಲ್ಲ. ಈ ಎರಡು ಯೋಜನೆಗಳಿಗೆ ಅರ್ಹತೆ ಪಡೆಯದ ವ್ಯಕ್ತಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಹಾಗಾಗಿ ನೀವು ಈ ಯೋಜನೆಯ ಮತ್ತು ಗೃಹಲಕ್ಷ್ಮಿ ಯೋಜನೆಯ https://ahara.kar.nic.in/status1/status_of_dbt_new.aspx ನಿಮ್ಮ ಡಿಬಿಟಿ ಸ್ಟೇಟಸ್ ಚೆಕ್ ಮಾಡಬಹುದು.
ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಲಿಸ್ಟ್ ಚೆಕ್ ಮಾಡಬಹುದು. ರದ್ದಾಗಿರುವ ಹೆಸರಿನ ಜೊತೆಗೆ ಕಾರಣವನ್ನು ಕೂಡ ತಿಳಿಸಲಾಗಿರುತ್ತದೆ. ರೇಶನ್ ಕಾರ್ಡ್ ವಿಚಾರದಲ್ಲಿ ಕೂಡ ಅರ್ಹತೆ ಇಲ್ಲದವರ ಹೆಸರನ್ನು ರದ್ದು ಮಾಡಲಾಗಿದೆ. ಅರ್ಹತೆ ಇಲ್ಲದವರು ಇನ್ನುಮುಂದೆ ಈ ಯೋಜನೆಗಳ ಸೌಲಭ್ಯ ಪಡೆಯಲು ಸಾಧ್ಯವಿಲ್ಲ. ಹಾಗೆಯೇ ಮಹಿಳೆಯರಿಗೆ ಈ ತಿಂಗಳು ಗೃಹಲಕ್ಷ್ಮಿ ಯೋಜನೆಯ ಹಣ ಖಂಡಿತವಾಗಿ ಬರುತ್ತದೆ.