ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿರುವ ಕಾಂಗ್ರೆಸ್ ಸರ್ಕಾರ ಕರ್ನಾಟಕ ರಾಜ್ಯದ ಆಡಳಿತ ಪಕ್ಷವಾಗಿದೆ. ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆ ಎನ್ನುವಂತೆ ಕಳೆದ ರಾಜ್ಯ ಸರ್ಕಾರದ ಚುನಾವಣೆಯಲ್ಲಿ ಹೇಳಿದಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ ಪ್ರತಿ ತಿಂಗಳು ಬಹಳಷ್ಟು ಸಂಖ್ಯೆಯ ಮಹಿಳೆಯರ ಖಾತೆಗೆ 2,000 ರೂಪಾಯಿ ಹಣ ಜಮಾ ಆಗಿದೆ ಆದರೆ ಇದ್ದಕ್ಕಿದ್ದಂತೆ ಎರಡು ತಿಂಗಳು ಖಾತೆಗೆ ಹಣ ಬಂದಿಲ್ಲ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ
ಗ್ರಹಲಕ್ಷ್ಮೀ ಯೋಜನೆಯ 11 ಹಾಗೂ 12 ನೆ ಕಂತಿನ ಹಣ ಇದುವರೆಗೂ ಖಾತೆಗೆ ಬರದೆ ಇರುವುದರಿಂದ ಹಣ ಬರುತ್ತದೆಯೊ ಇಲ್ಲವೊ ಗ್ರಹಲಕ್ಷ್ಮಿ ಯೋಜನೆ ಇಲ್ಲಿಗೆ ನಿಂತು ಹೋಯಿತೆ ಏಕೆಂದರೆ ಚುನಾವಣೆಯ ನಂತರ ಈ ಯೋಜನೆಯನ್ನು ನಿಲ್ಲಿಸಲಾಗುತ್ತದೆ ಎಂಬ ಮಾತುಗಳು ಕೇಳಿ ಬಂದಿದ್ದವು ಇಂತಹ ಹಲವು ಪ್ರಶ್ನೆಗಳು ಜನಸಾಮಾನ್ಯರಲ್ಲಿ ಬಂದಿದೆ. ಕೇವಲ ಗ್ರಹಲಕ್ಷ್ಮಿ ಯೋಜನೆ ಮಾತ್ರವಲ್ಲದೆ ಅನ್ನಭಾಗ್ಯ ಯೋಜನೆಯ ಹಣವು ಸಹ ಒಂದು ನಿರ್ದಿಷ್ಟ ಸಮಯ ದಿನಾಂಕದಲ್ಲಿ ಖಾತೆಗೆ ಹಣ ತಲುಪುತ್ತಿಲ್ಲ ಒಂದು ತಿಂಗಳು ಖಾತೆಗೆ ಹಣ ತಲುಪಿದರೆ ಇನ್ನೊಂದು ತಿಂಗಳು ಹಣ ತಲುಪುತ್ತಿಲ್ಲ ಕೆಲವರ ಪ್ರಕಾರ ಫಂಡ್ ಇಲ್ಲದೆ ಇರಬಹುದು ಎನ್ನುವ ಅನುಮಾನವಿದೆ.
ಒಂದು ಯೋಜನೆಯ ಅನುದಾನವನ್ನು ಇನ್ನೊಂದು ಯೋಜನೆಗೆ ಹಾಕುತ್ತಿರಬಹುದು ಒಂದು ಯೋಜನೆಯ ಹಣ ಕೊಡುವುದನ್ನು 2 -3 ತಿಂಗಳು ನಿಲ್ಲಿಸಿ ಅದರ ಅನುದಾನವನ್ನು ಇನ್ನೊಂದು ಯೋಜನೆಗೆ ಹಾಕುತ್ತಿರಬಹುದು ಎನ್ನುವುದು ಅಭಿಪ್ರಾಯವಾಗಿದೆ. ಡಿಪಾರ್ಟ್ಮೆಂಟ್ ಮಾಹಿತಿ ಪ್ರಕಾರ ಗೃಹಲಕ್ಷ್ಮಿ ಯೋಜನೆಯ 11 ಹಾಗೂ 12ನೆ ಕಂತಿನ ಹಣವು ಜುಲೈ ತಿಂಗಳಿನಲ್ಲಿ ಖಾತೆಗೆ ಬರುತ್ತದೆ.
ಚುನಾವಣೆ ಫಲಿತಾಂಶ ಬಂದ ಸಮಯದಲ್ಲಿ ಕರ್ನಾಟಕ ರಾಜ್ಯದ ಆಡಳಿತ ಪಕ್ಷದ ಶಾಸಕರು ಅಸಮಾಧಾನವನ್ನು ವ್ಯಕ್ತಪಡಿಸಿ ಅನುದಾನ ಬರುವುದಿಲ್ಲ ಹೀಗಾಗಿ ನಮ್ಮ ಕ್ಷೇತ್ರವನ್ನು ಅಭಿವೃದ್ಧಿ ಮಾಡಲು ಆಗುತ್ತಿಲ್ಲ ಕಾಮಗಾರಿಗಳನ್ನು ಯೋಜನೆಗಳನ್ನು ಕೈಗೊಳ್ಳಲು ಆಗುತ್ತಿಲ್ಲ ಇದರ ಬಗ್ಗೆ ಒಂದು ಸಮಿತಿಯನ್ನು ರಚನೆ ಮಾಡುತ್ತೇವೆ ಎಂದು ಹೇಳಿದ್ದರು ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಯಾವುದೆ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದರು ನಮ್ಮ ಸರ್ಕಾರದ ಹೆಮ್ಮೆಯ ಕಾರ್ಯಕ್ರಮಗಳಾಗಿವೆ ಇದನ್ನು ನಿಲ್ಲಿಸುವುದಿಲ್ಲ ಎಂದು ಅವರು ಹೇಳಿದ್ದರು.
ಉದಾಹರಣೆಗೆ ರೈತರಿಗೆ ಇರುವ ಹನಿ ನೀರಾವರಿ ಯೋಜನೆಯಲ್ಲಿ 75 ಪರ್ಸೆಂಟ್ ಅನುದಾನವನ್ನು ನೀಡುವ ಬದಲು ಅದನ್ನು ಕಡಿಮೆ ಮಾಡಿ ಆ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ ಹೀಗಾಗಿ ಈ ಯೋಜನೆಗಳು ಯಾವುದು ನಿಲ್ಲುವುದಿಲ್ಲ ಚಿಂತೆ ಬೇಡ ಆದರೆ ಜನರಿಗೆ ಒಂದು ಕಿವಿಮಾತು ಹೇಳುವುದಾದರೆ ಗ್ಯಾರಂಟಿ ಯೋಜನೆಗಳ ಹಣವನ್ನು ನಂಬಿಕೊಂಡು ಸಾಲ ಮಾಡುವುದು ಬೇಡ ನಿಮ್ಮ ಪಾಡಿಗೆ ನೀವು ಕೆಲಸ ಮಾಡಿಕೊಂಡು ಬಂದ ಹಣವನ್ನು ಉಳಿತಾಯ ಮಾಡುವುದರಿಂದ ಲಾಭವಾಗುತ್ತದೆ ಗೃಹಲಕ್ಷ್ಮಿ ಹಣವನನ್ನೆ ನಂಬಿಕೊಂಡು ಜೀವನ ಮಾಡುವುದಕ್ಕಿಂತ ನಮ್ಮ ದುಡಿಮೆ ನಾವು ಮಾಡುವುದು ಒಳ್ಳೆಯದು. ಗೃಹಲಕ್ಷ್ಮಿ ಯೋಜನೆಯ ಹಣದಿಂದ ಹಲವು ಜನರಿಗೆ ಉಪಯೋಗವಾಗಿದೆ ಮಹಿಳೆಯರ ಸಬಲೀಕರಣಕ್ಕಾಗಿ ಪ್ರಾರಂಭಿಸಿದ ಈ ಯೋಜನೆ ಗುರಿ ತಲುಪಿರಬಹುದಾ ತಿಳಿಸಿ.