ಗೃಹಲಕ್ಷ್ಮಿ ಯೋಜನೆಯ ಹಲವು ಕಂತುಗಳು ಬಾಕಿ ಇದ್ದು, ಗೃಹಲಕ್ಷ್ಮಿಯರು ಹಣ ಜಮೆಗಾಗಿ ಕಾಯುತ್ತಿದ್ದಾರೆ, ಆದ್ರೆ ಕೆಲವರಿಗೆ 2 ತಿಂಗಳ ಹಣವನ್ನು ಒಟ್ಟಿಗೆ 4000 ರೊ. ಜಮೆ ಮಾಡಲಾಗಿದೆ. ಇನ್ನೂ ಕೆಲವರಿಗೆ ಹಣ ಜಮಾ ಆಗಿಲ್ಲ, ಕೆಲವೇ ದಿನಗಳಲ್ಲಿ ಉಳಿದವರಿಗೂ ಜಮಾ ಆಗುತ್ತೆ ಅನ್ನೋದನ್ನ ಹೇಳೆಲಾಗುತ್ತಿದೆ. ಹಾಗಾದ್ರೆ ಬನ್ನಿ ನಿಮ್ಮ ಅಕೌಂಟ್ ಗೆ ಹಣ ಜಮೆ ಆಗಿದೆಯೋ ಇಲ್ಲವೋ ಅನ್ನೋದನ್ನ ಮೊಬೈಲ್ ನಲ್ಲೆ ನೋಡುವುದು ಹೇಗೆ ಅನ್ನೋದನ್ನ ತಿಳಿಸುತ್ತೇವೆ.
ಗೃಹಲಕ್ಷ್ಮಿ ಅಥವಾ ಅಕ್ಕಿ ಹಣವನ್ನು ಸರ್ಕಾರದ ಈ APP ಮೂಲಕ ನೋಡಬಹುದು ಅಥವಾ ಆನ್ಲೈನ್ ನಲ್ಲಿ ನೇರವಾಗಿ website ಲಿಂಕ್ ಬಳಸಿ ನೋಡಬಹುದು ಹೌದು DBT ಸ್ಟೇಟಸ್ ಚೆಕ್ ಮಾಡುವ ಮೂಲಕ ನಿಮ್ಮ ಅಕೌಂಟ್ ಗೆ ಹಣ ಜಮವಾಗಿದೆ ಅನ್ನೋದನ್ನ ತಿಳಿಯುವ ವಿಧಾನ ಇಲ್ಲಿದೆ
ಹಂತ 1: ಮೊದಲನೆಯದಾಗಿ ನೀವು ನಿಮ್ಮ ಮೊಬೈಲ್ ನಲ್ಲಿ ಪ್ಲೇ ಸ್ಟೋರ್ ಓಪನ್ ಮಾಡಿ ಡಿಬಿಟಿ ಕರ್ನಾಟಕ ಅಧಿಕೃತ ಆಪ್ ನ್ನು ಡೌನ್ಲೋಡ್ ಮಾಡಿಕೊಳ್ಳಿ.
ಹಂತ 2: ನಂತರ ಆಪ್ ಓಪನ್ ಮಾಡಿದ ಮೇಲೆ ಅಲ್ಲಿ ಎಂಟರ್ ಆಧಾರ್ ನಂಬರ್ ಎಂದು ಕಾಣಿಸುತ್ತದೆ ಫಲಾನುಭವಿಯ ಆಧಾರ್ ಸಂಖ್ಯೆಯನ್ನು ಹಾಕಿ. ನಂತರ ಗೆಟ್ ಓಟಿಪಿ ಎಂಬುದರ ಮೇಲೆ ಕ್ಲಿಕ್ ಮಾಡಿಕೊಳ್ಳಿ.
ಹಂತ 3: ನಂತರ ಫಲಾನುಭವಿಯ ಆಧಾರ್ ಕಾರ್ಡ್ ಗೆ ಲಿಂಕ್ ಇರುವ ಮೊಬೈಲ್ ನಂಬರ್ ಗೆ ಓಟಿಪಿಯನ್ನು ಬರುತ್ತದೆ,ಅಲ್ಲಿ ಎಂಟರ್ ಓಟಿಪಿ ಎಂದು ಕಾಣಿಸುತ್ತದೆ ಅಲ್ಲಿ ನೀವು ಓಟಿಪಿಯನ್ನು ಹಾಕಿ ನಂತರ ವೆರಿಫೈ ಓಟಿಪಿ ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ .
ಹಂತ 4: ನಂತರ ಅಲ್ಲಿ ನಿಮಗೆ ಫಲಾನುಭವಿಯ ವೈಯಕ್ತಿಕ ವಿವರ ನಿಮ್ಮ ಮುಂದೆ ಕಾಣಿಸುತ್ತದೆ,ಅಲ್ಲಿ ನಿಮಗೆ ಮೊಬೈಲ್ ನಂಬರ್ ಎಂಟರ್ ಮಾಡಲು ತಿಳಿಸಲಾಗುತ್ತದೆ, ಆಧಾರ್ ಕಾರ್ಡ್ ಗೆ ಲಿಂಕ್ ಇರುವ ಮೊಬೈಲ್ ನಂಬರ್ ಅನ್ನು ಹಾಕಿ ಓಕೆ ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ.
ಹಂತ 5: ನಂತರ ನಿಮಗೆ ಕ್ರಿಯೇಟ್ ಎಮ್ ಪಿನ್ ಎಂದು ಕಾಣಿಸುತ್ತದೆ,ನಿಮ್ಮ ನೆನಪಿನಲ್ಲಿ ಇಟ್ಟುಕೊಳ್ಳುವ ನಾಲ್ಕು ನಂಬರ್ ನ್ನು ಎಮ್ ಪಿನ್ ನನ್ನು ಎಂಟರ್ ಮಾಡಿ ಮುಂದೆ ನೀವು ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ .
ಹಂತ 6: ನಂತರ ಅಲ್ಲಿ ನಿಮಗೆ ಸೆಲೆಕ್ಟ್ ಬೆನಿಫಿಷಿಯರಿ ಎಂದು ಬರುತ್ತದೆ ನೀವು ಆಡ್ ಮಾಡಿರುವ ಫಲಾನುಭವಿಯ ಆಯ್ಕೆ ಮಾಡಿಕೊಳ್ಳಿ.
ಹಂತ 7: ನಂತರ ನೀವು ಫಲಾನುಭವಿಯನ್ನು ಆಯ್ಕೆ ಮಾಡಿದ ನಂತರ ನೀವು ಕ್ರಿಯೇಟ್ ಮಾಡಿದ ಎಮ್ ಪಿನ್ ಅನ್ನು ಎಂಟರ್ ಮಾಡಿ. ಮುಂದೆ ನೀವು ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ.
ಹಂತ 8: ನಂತರ ಅಲ್ಲಿ ನೀವು ಮೊದಲನೆಯ ಆಯ್ಕೆ ಆದ ಪೇಮೆಂಟ್ ಸ್ಟೇಟಸ್ ಎಂಬುದರ ಮೇಲೆ ಆಯ್ಕೆ ಮಾಡಿಕೊಳ್ಳಿ.
ಹಂತ 9: ಮುಂದೆ ಅಲ್ಲಿ ನಿಮಗೆ ಗೃಹಲಕ್ಷ್ಮಿ ಡಿಬಿಟಿ ಸ್ಟೇಟಸ್ ಚೆಕ್ ಮಾಡುವ ಆಯ್ಕೆಯನ್ನು ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿಕೊಳ್ಳಿ.
ಹಂತ 10: ಅಲ್ಲಿ ನಿಮಗೆ ನಿಮ್ಮ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಯೋಜನೆಯ 4000 ಮಾಹಿತಿ ಇರುತ್ತೆ. ಮತ್ತು ಯಾವ ದಿನಾಂಕದಂದು ಹಣ ಬಂದು ಇದೆ ಎಲ್ಲಾ ಮಾಹಿತಿಯನ್ನು ನಿಮಗೆ ಕಾಣಿಸುತ್ತದೆ.