Gruhalakshmi 2nd installment date: ಕಾಂಗ್ರೆಸ್ ಸರ್ಕಾರ ಮನೆಯನ್ನು ನಿಭಾಯಿಸುವ ಮಹಿಳೆಯರಿಗಾಗಿ ಜಾರಿಗೆ ತಂದಿರುವ ಯೋಜನೆ ಗೃಹಲಕ್ಷ್ಮಿ (Gruhalakshmi) ಯೋಜನೆ ಆಗಿದೆ. ಈ ಯೋಜನೆಗೆ ಸುಮಾರು 1.30 ಕೋಟಿ ಮಹಿಳೆಯರು ಅಪ್ಲೈ ಮಾಡಿದ್ದಾರೆ. ಈಗಾಗಲೇ ಹಲವರಿಗೆ ಮೊದಲ ಕಂತಿನ ಹಣ ಕೂಡ ಡಿಬಿಟಿ ಮೂಲಕ ಬ್ಯಾಂಕ್ ಅಕೌಂಟ್ ಗೆ ವರ್ಗಾವಣೆ ಆಗಿದೆ. ಆದರೆ ಇನ್ನು ಹಲವು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ.
ಆ ಮಹಿಳೆಯರಿಗೆ ಈಗ ಇನ್ನು ಹಣ ಬಂದಿಲ್ಲ ಎಂದು ಚಿಂತೆ ಶುರುವಾಗಿದೆ. ಇನ್ನು ಗೃಹಲಕ್ಷ್ಮಿ ಯೋಜನೆಯ ಹಣ ಬರದೇ ಇರುವುದಕ್ಕೆ ಕಾರಣ ರೇಷನ್ ಕಾರ್ಡ್ ನಲ್ಲಿರುವ ಮಾಹಿತಿ ಸರಿ ಇರದೇ ಇರುವುದು ಎಂದು ಹೇಳಲಾಗುತ್ತಿದೆ. ರೇಷನ್ ಕಾರ್ಡ್ ನಲ್ಲಿ ಮನೆಯ ಮುಖ್ಯಸ್ಥೆಯ ಹೆಸರು ಮಹಿಳೆಯ ಹೆಸರೇ ಆಗಿರಬೇಕು. ಹಾಗೆಯೇ ಆಧಾರ್ ಕಾರ್ಡ್ ಸೀಡಿಂಗ್ ಆಗಿರಬೇಕು, ಬ್ಯಾಂಕ್ ಅಕೌಂಟ್ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ನಲ್ಲಿರುವ ಮಾಹಿತಿ ಸರಿ ಇರಬೇಕು.
ಇದರಲ್ಲಿ ಯಾವುದೇ ಒಂದು ಮಾಹಿತಿ ತಪ್ಪಾಗಿದ್ದರೆ ಮಹಿಳೆಯ ಬ್ಯಾಂಕ್ ಅಕೌಂಟ್ ಗೆ DBT ಮೂಲಕ ಗೃಹಲಕ್ಷ್ಮಿ ಯೋಜನೆಯ ಹಣ ಬರುವುದಿಲ್ಲ. ಒಂದು ವೇಳೆ ನಿಮಗೂ ಈ ರೀತಿ ಆಗಿದ್ದರೆ ರೇಷನ್ ಕಾರ್ಡ್ ಅಪ್ಡೇಟ್ ಮಾಡಲು ಮತ್ತು ಬೇರೆ ಮಾಹಿತಿಯನ್ನು ಸರಿಯಾಗಿ ನೀಡಲು ಸರ್ಕಾರ ಅವಕಾಶ ನೀಡಿದ್ದು, ಅದನ್ನು ಸರಿಪಡಿಸಿಕೊಂಡು ಅಪ್ಲಿಕೇಶನ್ ಅಪ್ಡೇಟ್ ಮಾಡಿದರೆ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಖಂಡಿತವಾಗಿ ಬರುತ್ತದೆ ಎಂದು ಮಾಹಿತಿ ಸಿಕ್ಕಿದೆ.
ಗೃಹಲಕ್ಷ್ಮಿ ಯೋಜನೆಗೆ ಸುಮಾರು 20 ರಿಂದ 30% ಮಹಿಳೆಯರ ಬ್ಯಾಂಕ್ ಖಾತೆಗೆ ಇನ್ನು ಹಣ ವರ್ಗಾವಣೆ ಆಗಿಲ್ಲ. ಆಗಸ್ಟ್ ತಿಂಗಳ ಕೊನೆಯಲ್ಲಿ ಗೃಹಲಕ್ಷ್ಮಿ ಯೋಜನೆ ಅಧಿಕೃತವಾಗಿ ಜಾರಿಯಾದ ನಂತರ ಸೆಪ್ಟೆಂಬರ್ ತಿಂಗಳಿನಲ್ಲಿ ಮೊದಲ ಕಂತಿನ ಹಣ 85 ಲಕ್ಷಕ್ಕಿಂತ ಹೆಚ್ಚು ಮಹಿಳೆಯರ ಬ್ಯಾಂಕ್ ಅಕೌಂಟ್ ಗೆ DBT ಮೂಲಕ ವರ್ಗಾವಣೆ ಆಗಿದೆ. ಇನ್ನು ಎರಡನೇ ಕಂತಿನ ಹಣ ಬರೋದು ಯಾವಾಗ ಎನ್ನುವ ಪ್ರಶ್ನೆ ಶುರುವಾಗಿದ್ದು, ಎರಡನೇ ಕಂತಿನ ಹಣ ಬರುವುದಕ್ಕೆ ಈಗ ದಿನಾಂಕ ನಿಗದಿ ಆಗಿದೆ.
ಸಧ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಆಕ್ಟೊಬರ್ ತಿಂಗಳ ಎರಡನೇ ವಾರದಲ್ಲಿ ಮಹಿಳೆಯರ ಖಾತೆಗೆ ಟ್ರಾನ್ಸ್ಫರ್ ಆಗಬಹುದು ಎಂದು ಮಾಹಿತಿ ಸಿಕ್ಕಿದೆ. ಮೊದಲ ಕಂತಿನ ಹಣ ಇನ್ನು ಯಾರ ಖಾತೆಗೆ ಬಂದಿಲ್ಲವೋ, ಅವರು ತಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಅಕೌಂಟ್ ಇದೆಲ್ಲವನ್ನು ಚೆಕ್ ಮಾಡಿಕೊಂಡು, ಅಪ್ಡೇಟ್ ಮಾಡಿಸಿದರೆ ಖಂಡಿತವಾಗಿ ಅವರಿಗೆ 2 ಕಂತಿನ ಹಣ ಒಂದೇ ಸಾರಿ ಸಿಗಬಹುದು ಎಂದು ಕೂಡ ಹೇಳಲಾಗುತ್ತಿದೆ. ಹಾಗಾಗಿ ಮಹಿಳೆಯರು ಈ ವಿಷಯದ ಬಗ್ಗೆ ಗೊಂದಲ ಮಾಡಿಕೊಳ್ಳುವ ಅಗತ್ಯವಿಲ್ಲ.
ಇದನ್ನೂ ಓದಿ Kodi Mutt Swamiji: ವಿಶ್ವದಲ್ಲಿ ಒಂದು ದೇಶವೇ ಕಣ್ಮರೆ ಆಗಿಹೋಗಲಿದೆ, ಕೋಡಿಶ್ರೀಗಳ ಭವಿಷ್ಯ ಮತ್ತೊಮ್ಮೆ ನಿಜವಾಯ್ತಾ?