ರಾಜ್ಯ ಸರ್ಕಾರವು ಅರ್ಹ ಫಲಾನುಭವಿಗಳ ಖಾತೆಗೆ ನೇರವಾಗಿ 10 ಕಂತುಗಳನ್ನು ಜಮಾ ಮಾಡುವಲ್ಲಿ ಯಶಸ್ವಿಯಾಗಿದ್ದರೂ, ಅಪೂರ್ಣ KYC ಮತ್ತು ಅಸಮರ್ಪಕ ದಾಖಲೆಗಳಂತಹ ಸಮಸ್ಯೆಗಳಿಂದ ಕೆಲವು ಮಹಿಳೆಯರು ಯೋಜನೆಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ಇನ್ನೂ ಕೆಲವು ಫಲಾನುಭವಿಗಳು ಗೃಹಲಕ್ಷ್ಮಿಯ ಆರಂಭಿಕ ಕಂತುಗಳಿಗಾಗಿ ಕಾಯುತ್ತಿದ್ದಾರೆ.
ವರದಿಗಳ ಪ್ರಕಾರ, ಗೃಹಲಕ್ಷ್ಮಿಯ 11 ನೇ ಕಂತು ತಮ್ಮ ಖಾತೆಗೆ ಜಮಾ ಆಗಿದೆ ಎಂಬ ಶುಭ ಸುದ್ದಿಯನ್ನು ಮಹಿಳೆಯರು ಸ್ವೀಕರಿಸಿದ್ದಾರೆ. ಈಗಾಗಲೇ 10 ಕಂತುಗಳ ಹಣ ಜಮಾ ಆಗಿದ್ದು, 11ನೇ ಕಂತಿನ ಹಣ ಇನ್ನು 2 ರಿಂದ 3ದಿನಗಳಲ್ಲಿ ಗೃಹಲಕ್ಷ್ಮಿಯರ ಖಾತೆಗೆ ಜಮಾ ಆಗುವ ನಿರೀಕ್ಷೆಯಿದೆ.
ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಈ ಜಿಲ್ಲೆಗಳಿಗೆ ಬಿಡುಗಡೆಯಾಗಲಿದೆ. ಉಡುಪಿ, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಸೆಂಟ್ರಲ್, ಬೆಂಗಳೂರು ದಕ್ಷಿಣ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯ 11ನೆ ಕಂತಿನ ಹಣ ಮೊದಲು ಬಿಡುಗಡೆಯಾಗಲಿದೆ. ಇನ್ನೂ ಇದುವರೆಗೂ ಗೃಹಲಕ್ಷ್ಮಿಯ ಹಣ ಪಡೆಯದವರು ನಿಮ್ಮ ಅಕೌಂಟ್ ಆಧಾರ್ ಲಿಂಕ್ ಮಾಡಿಸಿ ಹಾಗು KYC ಮಾಡಿಸಿ ಖಂಡಿತ ನಿಮ್ಮ ಅಕೌಂಟ್ಗೆ ಗೃಹಲಕ್ಷ್ಮಿಯ ಹಣ ಜಮಾ ಆಗಲಿದೆ.