ರಾಜ್ಯದ ಮಹಿಳೆಯರಿಗೆ ಸಹಾಯ ಆಗಲಿ ಎಂದು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆ ಜಾರಿಗೆ 6 ತಿಂಗಳು ಕಳೆಯುತ್ತಿದೆ. ಸುಮಾರು ಮಹಿಳೆಯರಿಗೆ 5 ಕಂತಿನ ಹಣ ಕೂಡ ಬಂದಿದೆ. ಆದರೆ ಇನ್ನೂ ಸಾಕಷ್ಟು ಮಹಿಳೆಯರಿಗೆ ಮೊದಲ 2 ಕಂತುಗಳ ಹಣ ಬಿಟ್ಟು ಇನ್ನೇನು ಬಂದಿಲ್ಲ ಎನ್ನುತ್ತಿದ್ದಾರೆ. ಇತ್ತ ಸರ್ಕಾರ ರೇಷನ್ ಕಾರ್ಡ್, ಬ್ಯಾಂಕ್ ಅಕೌಂಟ್ ಇವುಗಳ ಸಮಸ್ಯೆ ಇರೋದಕ್ಕೆ ಹಣ ಬಂದಿಲ್ಲ ಎಂದು ಹೇಳುತ್ತಿದೆ.
ವಿಚಾರಿಸಲು ಆಹಾರ ಇಲಾಖೆಗೆ ಹೋದರೆ ಅವರಲ್ಲಿ ಮಾಹಿತಿ ಇಲ್ಲ, ಬ್ಯಾಂಕ್ ನಲ್ಲಿ ವಿಚಾರಿಸಿ ಎನ್ನುತ್ತಾರೆ, ಬ್ಯಾಂಕ್ ಗೆ ಹೋದರೆ ನಮಗೆ ಗೊತ್ತಿಲ್ಲ ಆಹಾರ ಇಲಾಖೆಗೆ ಹೋಗಿ ಅಂತ ಹೇಳುತ್ತಾರೆ ಎಂದು ಮಹಿಳೆಯರು ತಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತಾ ಇಲ್ವಾ ಎಂದು ಆತಂಕಕ್ಕೆ ಒಳಗಾಗಿದ್ದಾರೆ. ಆದರೆ ಇನ್ನೂ ಕೆಲವು ಮಹಿಳೆಯರಿಗೆ ಒಂದೇ ಒಂದು ಕಂತಿನ ಹಣ ಕೂಡ ಬಂದಿಲ್ಲ. ಈ ಮಹಿಳೆಯರು ತಮಗೆ ಹಣ ಬರುತ್ತಾ ಎಂದು ತಲೆಕೆಡಿಸಿಕೊಂಡಿದ್ದಾರೆ.
ಮಹಿಳೆಯರಿಗೆ ಇನ್ನು ಕೂಡ ಒಂದೂ ಕಂತಿನ ಹಣ ಬರದೆ ಇರುವುದಕ್ಕೆ ಪ್ರಮುಖ ಕಾರಣ ಒಂದು ಇದೆ. ಗೃಹಲಕ್ಷ್ಮಿ ಯೋಜನೆಯನ್ನು ಶುರು ಮಾಡುವಾಗಲೇ ಸರ್ಕಾರವು ಸರ್ಕಾರಿ ಕೆಲಸ ಇರುವ ಮಹಿಳೆಯರು ಮತ್ತು ತೆರಿಗೆ ಪಾವತಿ ಮಾಡುವ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ಸಿಗುವುದಿಲ್ಲ ಎಂದು ತಿಳಿಸಿತ್ತು. ಹಾಗಾಗಿ ಈ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ವರ್ಗಾವಣೆ ಆಗುವುದಿಲ್ಲ.
ಇದನ್ನು ಹೊರತುಪಡಿಸಿ ತೆರಿಗೆ ಪಾವತಿ ಮಾಡದೆ ಇರುವ ಕೆಲವು ಮಹಿಳೆಯರಿಗೆ ಕೂಡ ಹಣ ವರ್ಗಾವಣೆ ಆಗಿಲ್ಲ. ಅಂಥವರು GST ಕಚೇರಿಗೆ ಭೇಟಿ ನೀಡಿ, ತಾವು ತೆರಿಗೆ ಪಾವತಿ ಮಾಡುತ್ತಿಲ್ಲ ಎಂದು ಅಧಿಕಾರಿಗಳಿಂದ ಪ್ರಮಾಣಪತ್ರ ಪಡೆದು, ಅದನ್ನು ಜಿಲ್ಲಾ ನಿರ್ದೇಶನಾಲಯ ಕಚೇರಿಗೆ ತೆಗೆದುಕೊಂಡು ಹೋಗಿ ಕೊಡಬೇಕು. ಈ ಒಂದು ಕೆಲಸ ಮಾಡಿದರೆ ಫೆಬ್ರವರಿ ಇಂದ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಬ್ಯಾಂಕ್ ಅಕೌಂಟ್ ಗೆ ಬರುತ್ತದೆ.