Gruha Lakshmi Scheme: ಗ್ರಹಲಕ್ಷ್ಮಿ ಯೋಜನೆಯ ಬಗ್ಗೆ ಒಂದಷ್ಟು ಮಾಹಿತಿ ಹಾಗೂ ಕನ್ಫ್ಯೂಷನ್ ನ ಸರಿಪಡಿಸಿಕೊಳ್ಳುವ ಸಲುವಾಗಿ ಸಾಧಕ ಬಾದಕಗಳನ್ನು ಚರ್ಚೆ ಮಾಡುವುದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆದಿದೆ. ಈಗ ಸರ್ಕಾರ ಗೃಹಲಕ್ಷ್ಮಿ (Gruha Lakshmi) ಯೋಜನೆಯ ನೇತೃತ್ವದಲ್ಲಿ ಹೊಸದಾಗಿ ಮೂರು ಷರತ್ತುಗಳನ್ನು ನೀಡಿದ್ದಾರೆ. ಅದು ಯಾವುದು ಎಂದು ತಿಳಿದುಕೊಳ್ಳುವ ಆಸಕ್ತಿ ಇದ್ದರೆ ಲೇಖನವನ್ನು ಪೂರ್ತಿಯಾಗಿ ಓದಿ.
ಮೊದಲು ಗಂಡ ಹೆಂಡತಿ ಟ್ಯಾಕ್ಸ್ ಪೇಯರ್ ಆಗಿರೋದಿದ್ದರೆ ಅವರು ಗೃಹಲಕ್ಷ್ಮಿ (Gruha Lakshmi) ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿತ್ತು ಆದರೆ ಸರ್ಕಾರ ಮತ್ತೊಂದು ಶರತ್ತುಗಳನ್ನು ಹಾಕಿರುವುದರಿಂದ ಕೆಲವು ಮಹಿಳೆಯರಿಗೆ ಈ ಗ್ರಹಲಕ್ಷ್ಮಿ ಯೋಜನೆ, ದೊರಕುವುದಿಲ್ಲ ಆ ಶರತ್ತು ಏನೆಂದರೆ ಗಂಡ ಹೆಂಡತಿ ಅಲ್ಲದೆ ಮಕ್ಕಳು ಕೂಡ ಟ್ಯಾಕ್ಸ್ ಪೇಯರಾಗಿರಬಾರದು ಅಂದರೆ ಮಾತ್ರ ಗ್ರಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯ.
ಎರಡನೆಯದಾಗಿ ಗಂಡ ಹೆಂಡತಿ ಅಥವಾ ಮಕ್ಕಳು ಸರ್ಕಾರಿ ಹುದ್ದೆಯಲ್ಲಿ ಇದ್ದರೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಆಗುವುದಿಲ್ಲ. ಕೇವಲ ಬಿಪಿಎಲ್ ಕಾರ್ಡ್ ಅಥವಾ ಅಂತ್ಯೋದಯ ಇರುವ ಮಹಿಳೆಯರಿಗೆ ಮಾತ್ರ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಆಗುತ್ತದೆ.
ಮೂರನೆಯದು ಯಾರ ಬಳಿ ರೇಷನ್ ಕಾರ್ಡ್ ಇಲ್ಲವೋ ಅವರಿಗೆ ರೇಷನ್ ಕಾರ್ಡ್ ಮಾಡಿಸಲು ಸರ್ಕಾರ ಅಧಿಸೂಚನೆ ನೀಡಿದೆ ಆದರೆ ಹೊಸದಾಗಿ ರೇಷನ್ ಕಾರ್ಡ್ ಮಾಡಿಸಿದವರು ಕೂಡ ಗೃಹಲಕ್ಷ್ಮಿ ಭಾಗ್ಯ ದೊರೆಯುವುದಿಲ್ಲ ಎಂದು ಸರ್ಕಾರ ಹೇಳಿದೆ.
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ :- ಗ್ರಹಲಕ್ಷ್ಮಿ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಮೊದಲಿಗೆ ನೀವು ಸೇವಾ ಸಿಂಧು ವೆಬ್ಸೈಟ್ ಗೆ ಹೋಗಬೇಕು ಅಲ್ಲಿ ಹೊಸದಾಗಿ ಆಪ್ಷನ್ಸ್ ಅನ್ನು ಬಿಡುಗಡೆ ಮಾಡುತ್ತಾರೆ ಅಲ್ಲಿ ನೀವು ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಆಫ್ಲೈನ್ ಮೂಲಕ ಕೂಡ ಅರ್ಜಿಯನ್ನು ಸಲ್ಲಿಸಬಹುದು. ನಿಮಗೆ ಒಂದು ಫಾರ್ಮ್ ಸಿಗುತ್ತದೆ ಅದನ್ನು ಫಿಲ್ ಮಾಡಿ ಬೆಂಗಳೂರು ಒನ್ ಸೇವಾ ಕೇಂದ್ರ ಅಥವಾ ನಾಡಕಚೇರಿಯಲ್ಲಿ ಕೊಟ್ಟು ಗೃಹಲಕ್ಷ್ಮಿ ಯೋಜನೆ ಲಾಭವನ್ನು ಪಡೆಯಬಹುದು.