Gruha Lakshmi Money SMS: ಕಾಂಗ್ರೆಸ್ನ ಐದು ಗ್ಯಾರಂಟಿಯಲ್ಲಿ ನಾಲ್ಕನೇ ಗ್ಯಾರೆಂಟಿಯಾದ ಗೃಹಲಕ್ಷ್ಮಿ ಯೋಜನೆ ಜಾರಿಗೆ ಬಂದಿದ್ದು ಈಗ ಮಹಿಳೆಯರಿಗೆ ಪ್ರತಿ ತಿಂಗಳು 2000 ರೂ ನೀಡುವ ಗೃಹಲಕ್ಷ್ಮಿ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ಕೆಲವು ಮಹಿಳೆಯರ ಖಾತೆಗೆ ಈಗಾಗಲೇ 2000ರೂ ತಲುಪಿದೆ. ಹಣ ಬಂದಿಲ್ಲದೆ ಇದ್ದವರು ಏನು ಮಾಡಬೇಕು ಎಂದು ನಾವು ಇಲ್ಲಿ ತಿಳಿಸಿ ಕೊಡುತ್ತಿದ್ದೇವೆ.
ಮೈಸೂರು ಮಹಾರಾಜ ಗ್ರೌಂಡಿನಲ್ಲಿ ರಾಹುಲ್ ಗಾಂಧಿಯವರು ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿದರು. ಈ ಕಾರ್ಯಕ್ರಮಕ್ಕೆ ಹಾಜರಾಗಲು ಜನರಿಗೆ 2000 ಬಸ್ಸು ನಿಯೋಜನೆ ಮಾಡಲಾಗಿತ್ತು ಮತ್ತು ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಹಾಗೂ ಸ್ವಲ್ಪ ರಾಜಕೀಯದ ಬಗ್ಗೆ ಮಾತನಾಡಿದ್ದಾರೆ. ಸಿದ್ದರಾಮಯ್ಯನವರು ಹೇಳಿದ ಪ್ರಕಾರ ವೈಯಕ್ತಿಕ ಆಸೆ ಆಕಾಂಕ್ಷೆ ಅವಶ್ಯಕತೆಗಳನ್ನ ತ್ಯಾಗ ಮಾಡಿ ಕುಟುಂಬಕ್ಕಾಗಿ ತಮ್ಮ ಬದುಕನ್ನೇ ಸಮರ್ಪಿಸಿ ಕೊಂಡಿರುವ ನಾಡಿನ ಕೋಟ್ಯಾಂತರ ತಾಯಂದಿರು ಗೃಹಲಕ್ಷ್ಮಿ ಯೋಜನೆಯಿಂದ ಸ್ವತಂತ್ರ ಸ್ವಾವಲಂಬಿ ಬದುಕಿಗೆ ಪಾದಾರ್ಪಣೆ ಮಾಡಲಿದ್ದಾರೆ. ಮಹಿಳೆಯರ ಸಬಲೀಕರಣದಿಂದ ಬಲಿಷ್ಠ ಸಮಾಜ ನಿರ್ಮಾಣವಾಗಲಿದೆ ಎಂದು ಸಿದ್ದರಾಮಯ್ಯನವರು ಹೇಳಿದ್ದಾರೆ.
ನಿಮ್ಮ ಲಿಂಕ್ ಇರುವ ನಂಬರ್ಗೆ ಹಣ ಬಂದಾಗ sms ಬರುತ್ತದೆ. ಚಾಲನೆ ನೀಡಿದಾಗ ಕೆಲವು ಮಹಿಳೆಯರಿಗೆ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಬ್ಯಾಂಕ್ ಖಾತೆಯ ಮೂಲಕ ಹಣ ವರ್ಗಾವಣೆ ಆಗುತ್ತದೆ ಎನ್ನುವ ಮಾಹಿತಿ sms ಮೂಲಕ ದೊರಕಿದೆ. ಇನ್ನು ಸಾಕಷ್ಟು ಮಹಿಳೆಯರಿಗೆ ಈ sms ಬಂದಿರುವುದಿಲ್ಲ ಇವರಿಗೆಲ್ಲ ಸೆಪ್ಟೆಂಬರ್ ರೊಳಗೆ ಈ sms ಬರುತ್ತದೆ. ಮೆಸೇಜ್ ಬಂದಿರುತ್ತದೆ ಆದರೆ ಹಣ ಬಂದಿಲ್ಲ ಎಂದು ಸ್ವಲ್ಪ ಜನ ಗೊಂದಲಗಳಿದ್ದಾರೆ ಅಂತವರಿಗೆ ಸಪ್ಟೆಂಬರ್ ಒಳಗೆ ಅಗಸ್ಟ್ ತಿಂಗಳ ಹಣ ನಿಮ್ಮ ಖಾತೆಗೆ ದೊರಕಲಿದೆ.
ಅರ್ಜಿ ಹಾಕಿದ ಬಹುತೇಕ ಜನರಿಗೆ ಹಣ ವರ್ಗಾವಣೆ ಆಗುತ್ತದೆ ಸೆಪ್ಟೆಂಬರ್ 5ರ ಒಳಗಡೆ ನಿಮ್ಮ ಖಾತೆಗೆ ಹಣ ಜಮಾ ಆಗಲಿದೆ. ಮೆಸೇಜ್ ಬರೆದಿದ್ದರೆ ಚಿಂತೆ ಮಾಡಬೇಡಿ ಒಂದು ಕೋಟಿ ಹನ್ನೆರಡು ಲಕ್ಷ ಮಹಿಳೆಯರಿಗೆ sms ಹೋಗುವ ಕಾರಣ sever ತೊಂದರೆ ಕಾಣಿಸಬಹುದು. ಎಪಿಎಲ್, ಬಿಪಿಎಲ್ ಎಂದು ಭಿನ್ನತೆ ಮಾಡದೆ ಎಲ್ಲಾ ಮಹಿಳೆಯರಿಗೂ ಅರ್ಜಿ ಹಾಕಲು ಅವಕಾಶ ನೀಡಿದ್ದಾರೆ ಈ ಯೋಜನೆಯನ್ನು ಪ್ರತಿ ಮನೆಯವರು ಉಪಯೋಗಿಸಿಕೊಳ್ಳಿ ಎನ್ನುವುದು ನಮ್ಮ ವಿನಂತಿ.