ಹಿಂದೆ ಎಲ್ಲಾ ಪಂಚಾಯಿತಿ ಕುರಿತು ಯಾವುದೇ ವಿಚಾರ ತಿಳಿಯ ಬೇಕಿದ್ದರೂ ಕಚೇರಿಗೆ ಭೇಟಿ ನೀಡುವುದು ಕಡ್ಡಾಯವಾಗಿತ್ತು ಆದರೆ, ಇಂದು ತಂತ್ರಜ್ಞಾನ ತುಂಬ ಮುಂದುವರೆದಿದೆ ಆದ್ದರಿಂದ, ಎಲ್ಲವನ್ನು ಕುಳಿತಲ್ಲಿಯೇ ತಿಳಿಯಬಹುದು. ಪಂಚಾಯಿತಿ ಬಗ್ಗೆ ತಿಳಿಯಲು ಕಚೇರಿಗೆ ಭೇಟಿ ನೀಡಲು ಸಮಯ ಇಲ್ಲದೆ ಹೋದರೆ ಚಿಂತೆ ಮಾಡುವ ಅಗತ್ಯವಿಲ್ಲ. ಮೊಬೈಲ್ನಲ್ಲಿ ಪಂಚಾಯಿತಿಯ ಕುರಿತು ಎಲ್ಲಾ ಮಾಹಿತಿಯನ್ನು ಪಡೆಯಬಹುದು. ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಒಂದು ವೆಬ್ಸೈಟ್ ಅನ್ನು ತೆರೆದಿದೆ.
ಈ ವೆಬ್’ಸೈಟ್ ಕುರಿತು ಮಾಹಿತಿ ಕೆಲವರಿಗೆ ತಿಳಿದಿರಬಹುದು ಇನ್ನೂ, ಕೆಲವರಿಗೆ ತಿಳಿಯದೆ ಇರಬಹುದು. ಗ್ರಾಮ ಪಂಚಾಯಿತಿಯಲ್ಲಿ ಏನೆಲ್ಲ ನಡೆಯುತ್ತದೆ ಎಂದು ಮೊಬೈಲ್ ಫೋನ್ ಮೂಲಕವೇ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಬಹುದು. ಆ ವೆಬ್ಸೈಟ್ ವಿವರ ಮತ್ತು ಅದರಲ್ಲಿ ಏನೆಲ್ಲ ಮಾಹಿತಿ ಸಿಗುತ್ತದೆ ಎಂದು ಒಂದೊಂದಾಗಿ ತಿಳಿಯೋಣ ಬನ್ನಿ;
ವೆಬ್ಸೈಟ್ ಹೆಸರು ಪಂಚತಂತ್ರ ಎಂದು ಗೂಗಲ್’ನಲ್ಲಿ ಸರ್ಚ್ ಮಾಡಬೇಕು. ನಂತರ ಪಂಚಾಯತ್ ಪೋರ್ಟಲ್ ಮೇನ್ ಪೇಜ್ ದೊರೆಯುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು. ಕರ್ನಾಟಕ ಸರ್ಕಾರ ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ. ನಂತರ ಆ ಪೇಜ್’ನಲ್ಲಿ ಕಾಣುವ ಕರ್ನಾಟಕ ಮ್ಯಾಪ್ ಮೇಲೆ ವಾಸ ಮಾಡುವ ಜಿಲ್ಲೆಯ ಮೇಲೆ ಕ್ಲಿಕ್ ಮಾಡಿ. ನಂತರ ತಾಲ್ಲೂಕಿನ ಮೇಲೆ ಕ್ಲಿಕ್ ಮಾಡಿದರೆ. ಅದಾದ ಮೇಲೆ ಗ್ರಾಮ ಸೆಲೆಕ್ಟ್ ಮಾಡಬೇಕು. ಅದರಲ್ಲಿ, ಅವರ ಗ್ರಾಮ ಪಂಚಾಯಿತಿಯ ಮಾಹಿತಿ ಸಿಗುತ್ತದೆ. ಗ್ರಾಮ ಪಂಚಾಯಿತಿಯ ಸದಸ್ಯರ ಹೆಸರು ಯಾರು ಅಧ್ಯಕ್ಷರು ಯಾರು ಉಪಾಧ್ಯಕ್ಷರು ಎಲ್ಲರ ಕುರಿತು ಈ ವೆಬ್ಸೈಟ್ನಲ್ಲಿ ಮಾಹಿತಿ ಪಡೆಯಬಹುದು.ಇನ್ನು ಬೇರೆ ರೀತಿಯ ಮಾಹಿತಿ ಕೂಡ ಸಿಗುತ್ತದೆ. ಶಿಕ್ಷಣ, ವ್ಯವಸಾಯ ಮತ್ತು ಸಹಕಾರ ಈ ರೀತಿ ಮಾಹಿತಿ ಕೂಡ ಸಿಗುತ್ತದೆ.
ಗ್ರಾಮದಲ್ಲಿ ಇರುವ ಒಟ್ಟು ಪುರುಷರು, ಒಟ್ಟು ಮಹಿಳೆಯರು, ಒಟ್ಟು ಅಂಗವಿಕಲರು, ಒಟ್ಟು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಜನರು ಎಲ್ಲಾ ಮಾಹಿತಿ ಸಿಗುತ್ತದೆ. ಯಾವ ಯಾವ ಶಾಲೆಗಳು ಇದೆ. ಅದರ ಬಗ್ಗೆ ಕೂಡ ಮಾಹಿತಿ ದೊರಕುತ್ತದೆ.ಸೇವೆಗಳು ಯಾವವು ಇದೆ ಪಂಚಾಯಿತಿಯಲ್ಲಿ, ಪ್ರಸ್ತುತ ಲಭ್ಯ ಇರುವ ಯೋಜನಗಳು ಯಾವುವು, ಅಧಿಕಾರಿಗಳ ದೂರವಾಣಿ ಸಂಖ್ಯೆ ಕೂಡ ಸಿಗುತ್ತದೆ. ವಿಳಾಸದ ಜೊತೆಗೆ ಅಲ್ಲಿ ಕೆಲಸ ಮಾಡುವ ಸ್ಟಾಫ್’ಗಳ ದೂರವಾಣಿ ಸಹ ಸಿಗುತ್ತದೆ.
ಪ್ರಗತಿಯ ಹಂತದಲ್ಲಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ಕೂಡ ದೊರಕುತ್ತದೆ. ಆಸ್ತಿ ತೆರಿಗೆಗಳು ಮತ್ತು ಫಲಾನುಭವಿಗಳು ಎಲ್ಲರ ಬಗ್ಗೆ ಸಂಪೂರ್ಣಮಾಹಿತಿ ಲಭಿಸುತ್ತದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಜನರು ಬೇಕಾಗಿರುವ ಮಾಹಿತಿಯನ್ನು ಪಡೆಯಲು ಮೇಲೆ ತಿಳಿಸಿರುವ ವಿಧಾನವನ್ನು ಅನುಕರಣೆ ಮಾಡಬೇಕು. ನಂತರ ಪಂಚಮಿತ್ರ ವೆಬ್’ಸೈಟ್’ಗೆ ಹೋಗಿ ಅವರಿಗೆ ಅಗತ್ಯವಿರುವ ಮಾಹಿತಿಯನ್ನು ಪಡೆಯಬಹುದು.