ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿಯೂ ಸದಸ್ಯರು ಇರುತ್ತಾರೆ ಸದಸ್ಯರು ಕೆಲವು ಕರ್ತವ್ಯಗಳನ್ನು ಮಾಡಬೇಕಾಗಿರುತ್ತದೆ ಹಾಗೂ ನೈತಿಕ ಜವಾಬ್ದಾರಿಗಳನ್ನು ಮಾಡಬೇಕಾಗುತ್ತದೆ ಹಾಗಾದರೆ ಗ್ರಾಮ ಪಂಚಾಯತಿ ಸದಸ್ಯರ ಕರ್ತವ್ಯ ಹಾಗೂ ಜವಾಬ್ದಾರಿಗಳನ್ನು ಈ ಲೇಖನದಲ್ಲಿ ನೋಡೋಣ
ಗ್ರಾಮ ಪಂಚಾಯತಿ ಅಡಿಯಲ್ಲಿ ಬರುವ ಪ್ರತಿಯೊಂದು ಹಳ್ಳಿ ಅಭಿವೃದ್ಧಿ ಆಗಲು ಮತ್ತು ಸರ್ಕಾರದ ಯೋಜನೆಗಳು ಯಶಸ್ವಿಯಾಗಿ ಕಾರ್ಯರೂಪಕ್ಕೆ ಬರಲು ಮುಖ್ಯವಾಗಿ ಗ್ರಾಮದ ಅಭಿವೃದ್ಧಿ ಆಗಲು ಸದಸ್ಯರು ತಮ್ಮ ಕರ್ತವ್ಯ ಮಾಡುವುದು ಅವಶ್ಯಕವಾಗಿರುತ್ತದೆ. ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ ಮಂಡನೆ ಜಾರಿಗೆ ಬಂದಿದ್ದು ನಮ್ಮ ಕರ್ನಾಟಕ ರಾಜ್ಯದಲ್ಲಿ. ಗ್ರಾಮ ಪಂಚಾಯತಿಯ ಸದಸ್ಯರ ಒಂದೊಂದು ಕೆಲಸವನ್ನು ನೋಡುವುದಾದರೆ ಗ್ರಾಮ ಪಂಚಾಯತಿಯ ಸದಸ್ಯರು ತಾವು ನೇಮಕವಾಗಿರುವ ವಾರ್ಡ್ ಗಳ ಜನನ ಮತ್ತು ಮರಣದ ತ್ವರಿತ ನೋಂದಣಿ ಮತ್ತು ಅದಕ್ಕೆ ಸಂಬಂಧಪಟ್ಟವರಿಗೆ ವರದಿ ಮಾಡಬೇಕು. ತಮ್ಮ ತಮ್ಮ ವಾರ್ಡ್ ಗೆ ಸರಿಯಾಗಿ ಚರಂಡಿ ವ್ಯವಸ್ಥೆಯನ್ನು ಕಲ್ಪಿಸಬೇಕು ಒಂದು ವೇಳೆ ಈಗಾಗಲೆ ಚರಂಡಿ ವ್ಯವಸ್ಥೆ ಇದ್ದು ಹಾಳಾಗಿದ್ದರೆ ಅದನ್ನು ಸರಿ ಮಾಡಿಸುವ ಕೆಲಸವು ಸದಸ್ಯರದಾಗಿರುತ್ತದೆ.
ಗ್ರಾಮ ಪಂಚಾಯತಿ ಅಡಿಯಲ್ಲಿ ಬರುವ ಸಾರ್ವಜನಿಕ ರಸ್ತೆ, ಆಸ್ತಿಯನ್ನು ಯಾರಾದರೂ ಒತ್ತುವರಿ ಮಾಡಿಕೊಂಡರೆ ತೆಗೆದು ಹಾಕಬೇಕು. ಗ್ರಾಮ ಪಂಚಾಯತಿ ಸದಸ್ಯರ ವ್ಯಾಪ್ತಿಗೆ ಬರುವ ತಮ್ಮ ವಾರ್ಡ್ ಗೆ ವಿದ್ಯುತ್ ದ್ವೀಪ ಒದಗಿಸಬೇಕು. ಹಳ್ಳಿಗಳಲ್ಲಿ ರೋಗಗಳು ಹರಡುವುದನ್ನು ತಪ್ಪಿಸಲು ಗುಂಡಿಗಳನ್ನು ಮುಚ್ಚಿಸುವುದು ಹಾಗೂ ಅನಾರೋಗ್ಯಕರ ಪ್ರದೇಶಗಳನ್ನು ಆರೋಗ್ಯಕರವನ್ನಾಗಿಸುವುದು. ನಿರುಪಯುಕ್ತ ವಸ್ತುಗಳನ್ನು ರಾಶಿ ಹಾಕುವುದಕ್ಕೆ ತಿಪ್ಪೆಗಳನ್ನು ಜನರು ವಾಸವಿರುವ ಮನೆಗಳಿಂದ ದೂರದ ಜಾಗಗಳಲ್ಲಿ ಪ್ರತ್ಯೇಕವಾಗಿ ಗುರುತಿಸಿ ಅಲ್ಲಿಗೆ ಸಾಗಿಸುವುದು.
ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳ ಸಾರ್ವತ್ರಿಕ ದಾಖಲಾತಿಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ತಮ್ಮ ಹಳ್ಳಿಯ ಶಾಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವುದು ಸಹ ಸದಸ್ಯರ ಕೆಲಸವಾಗಿರುತ್ತದೆ. ಗ್ರಾಮ ಪಂಚಾಯತಿ ಅಡಿಯಲ್ಲಿ ಬರುವ ಹಳ್ಳಿಗಳ ಮಕ್ಕಳಿಗೆ ಸಾರ್ವತ್ರಿಕವಾಗಿ ರೋಗನಿರೋಧಕ ಚುಚ್ಚುಮದ್ದುಗಳನ್ನು ಕೊಡುವ ಕಾರ್ಯಕ್ರಮವನ್ನು ನಡೆಸಬೇಕು. ಗ್ರಾಮ ಪಂಚಾಯತಿಯ ಅಡಿಯಲ್ಲಿ ಬರುವ ಕೂಲಿ ಕಾರ್ಮಿಕರಿಗೆ ಉದ್ಯೋಗ ಖಾತರಿ ಜಾಬ್ ಕಾರ್ಡ್ ಸಿಗುವಂತೆ ಮಾಡುವುದು ಹಾಗೂ ನೂರು ದಿನದ ಉದ್ಯೋಗ ಖಾತರಿ ಸಿಗುವಂತೆ ಮಾಡಬೇಕು. ಕಾಲಕಾಲಕ್ಕೆ ಸರ್ಕಾರದಿಂದ ಬರುವ ಯೋಜನೆಗಳನ್ನು ತಮ್ಮ ಗ್ರಾಮಗಳಲ್ಲಿ ಕಾರ್ಯರೂಪಕ್ಕೆ ತರಬೇಕು.
ಮೇಲಾಧಿಕಾರಿಗಳ ಅನುಮತಿ ಪಡೆದು ತಮ್ಮ ವಾರ್ಡ್ ಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡುವುದು. ಗ್ರಾಮ ಪಂಚಾಯತಿಯ ಸದಸ್ಯರು ಸಮಾಜಕ್ಕೆ ಅನುಕೂಲವಾಗುವಂತಹ ನೈತಿಕ ಜವಾಬ್ದಾರಿಗಳನ್ನು ಮಾಡಬೇಕು ತಮ್ಮ ವಾರ್ಡ್ ನಲ್ಲಿ ಯಾರಾದರೂ ಮರಣ ಹೊಂದಿದರೆ ಅವರ ಅಂತ್ಯಕ್ರಿಯೆಗೆ ಸಹಕರಿಸಬೇಕು. ವಾರ್ಡ್ ನಲ್ಲಿ ಸಣ್ಣಪುಟ್ಟ ಕೆಲಸಗಳಾದ ನಳದ ಕನೆಕ್ಷನ್ ಹಾಗೂ ವಾರ್ಡ್ ನಲ್ಲಿ ವಾಸವಿರುವ ಅಂಗವಿಕಲರು ಹಾಗೂ ವಿಕಲಚೇತನರಿಗೆ ಸಹಾಯಧನ ಒದಗಿಸುವುದು.
ಗ್ರಾಮ ಪಂಚಾಯತಿಯ ಅಡಿಯಲ್ಲಿ ಬರುವ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಮನೆ ಒದಗಿಸುವುದು. ತಮ್ಮ ವಾರ್ಡ್ ನಲ್ಲಿ ವಿವಾದಗಳು ನಡೆದರೆ ಅದನ್ನು ರಾಜಿ ಪಂಚಾಯತಿ ಮಾಡುವುದು. ಗ್ರಾಮ ಪಂಚಾಯತಿಯ ಸದಸ್ಯರು ಸೇವೆಯ ಅಡಿಯಲ್ಲಿ ಬರುವುದರಿಂದ ಅವರಿಗೆ ವೇತನ ಇರುವುದಿಲ್ಲ ಸರ್ಕಾರ ಗೌರವ ರೂಪಕವಾಗಿ ಪ್ರತಿ ತಿಂಗಳು ಒಂದು ಸಾವಿರ ರೂಪಾಯಿ ಕೊಡುತ್ತದೆ. ಈ ಮಾಹಿತಿಯನ್ನು ನೀವೂ ಓದಿ ಇತರರಿಗೂ ತಿಳಿಸಿ.
ಶ್ರೀ ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಾಹು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ. ಈ ಕೂಡಲೇ ನಮ್ಮ ನಂಬರಿಗೆ ಕರೆಮಾಡಿ 9606655513