Grama One Office: ಗ್ರಾಮ ಒನ್ ಕೇಂದ್ರಗಳು ನಮ್ಮ ರಾಜ್ಯದ ಗ್ರಾಮೀಣ ಭಾಗದ ಜನರಿಗೆ ಬಹಳಷ್ಟು ಅನುಕೂಲವಾಗಿದೆ. ಅದರಲ್ಲೂ ವಿಧಾನಸಭೆ ಚುನಾವಣೆ ನಡೆದು ಗ್ಯಾರೆಂಟಿ ಯೋಜನೆಗಳು ಜಾರಿಗೆ ಬಂದ ಬಳಿಕ ಗ್ರಾಮ ಒನ್ ಕೇಂದ್ರಗಳಿಗೆ ಜನರು ಬಂದು ಹೋಗಿ ಮಾಡುವುದು ಜಾಸ್ತಿಯಾಗಿದೆ. ರಾಜ್ಯದ ಸೇವಾಸಿಂಧು ಪೋರ್ಟಲ್ ನಲ್ಲಿ (Sevasindu Portal) ಸುಮಾರು 80 ಇಲಾಖೆಗಳಿಂದ 798 ಯೋಜನೆಗಳು ಜಾರಿಯಲ್ಲಿವೆ. ಆದರೆ ಗ್ರಾಮೀಣ ಭಾಗದ ಜನರಿಗೆ ಈ ಯೋಜನೆಗಳ ಅರಿವಿಲ್ಲ.
ಎಲ್ಲಾ ಯೋಜನೆಗಳ ಬಗ್ಗೆ ಹಳ್ಳಿ ಜನರಲ್ಲಿ ಅರಿವು ಮೂಡಿಸಿ, ಅವರಿಗೆ ಯೋಜನೆಗಳ ಸೌಕರ್ಯ ಸಿಗಬೇಕು ಎಂದು ಈ ಗ್ರಾಮ ಒನ್ ಕೇಂದ್ರಗಳನ್ನು ಜಾರಿಗೆ ತರಲಾಗಿದೆ. ರಾಜ್ಯದ ಕೆಲವು ಕಡೆಗಳಲ್ಲಿ ಈಗ ಗ್ರಾಮ ಒನ್ ಕೇಂದ್ರದ ಅವಶ್ಯಕತೆ ಇದ್ದು, ಸರ್ಕಾರವು ಇದಕ್ಕಾಗಿ ಒಂದು ಅವಕಾಶ ನೀಡಿದೆ. ಗ್ರಾಮ ಒನ್ ಕೇಂದ್ರ ತೆರೆಯುವ ಮೂಲಕ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕೊಡಬೇಕು ಎನ್ನುವಂಥ ಉದ್ದೇಶ ಸಹ ಇದೆ. ಹಾಗಾಗಿ ಆಸಕ್ತಿ ಇರುವವರು ಗ್ರಾಮ್ ಒನ್ ಕೇಂದ್ರ ತೆರೆಯುವುದಕ್ಕೆ ಅರ್ಜಿ ಸಲ್ಲಿಸಬಹುದು.
ಪ್ರಸ್ತುತ ಮೈಸೂರು, ಕಲಬುರ್ಗಿ ಸೇರಿದಂತೆ 15 ಜಿಲ್ಲೆಗಳಲ್ಲಿ ಗ್ರಾಮ ಒನ್ ಕಚೇರಿ ತೆರೆಯುವುದಕ್ಕೆ ಸರ್ಕಾರ ಅವಕಾಶ ನೀಡಿದೆ. ಈ ಉದ್ಯೋಗದಲ್ಲಿ ಆಸಕ್ತಿ ಇರುವವರು ಅರ್ಜಿ ಸಲ್ಲಿಸಿ, ಗ್ರಾಮ ಒನ್ ಕಚೇರಿ ಶುರು ಮಾಡಿ, ಉತ್ತಮವಾಗಿ ಹಣ ಗಳಿಸಬಹುದು..
ಅರ್ಜಿ ಸಲ್ಲಿಕೆಗೆ ಬೇಕಾಗುವ ಅರ್ಹತೆಗಳು ಹೀಗಿವೆ..
ನಮ್ಮ ರಾಜ್ಯದ ನಿವಾಸಿಯೇ ಆಗಿರಬೇಕು.
18 ವರ್ಷ ತುಂಬಿದ ಯಾರಾದರೂ ಅರ್ಜಿ ಸಲ್ಲಿಸಬಹುದು
ಅರ್ಜಿದಾರರು 10ನೇ ತರಗತಿ ಮುಗಿಸಿರಬೇಕು, ಜಾಸ್ತಿ ಓದಿದ್ದರೆ ಆದ್ಯತೆ.
ಕಂಪ್ಯೂಟರ್ ಜ್ಞಾನ ಇರಬೇಕು
ಇಂಗ್ಲಿಷ್ ಕನ್ನಡ ಎರಡು ಭಾಷೆಯನ್ನು ಓದಲು ಬರೆಯಲು ಬರಬೇಕು
ಅರ್ಜಿದಾರರ ಮೇಲೆ ಕ್ರಿಮಿನಲ್ ಕೇಸ್ ಇಲ್ಲ ಎಂದು ಪೊಲೀಸ್ ದೃಢೀಕರಣ ಪತ್ರ ಕೊಡಬೇಕು
ವಿದ್ಯುತ್, ರಸ್ತೆಗಳ ಸಂಪರ್ಕ ಇರುವ ಜಾಗ ಇರಬೇಕು
ಗ್ರಾಮ ಒನ್ ಕಚೇರಿ ಶುರು ಮಾಡಲು ಬೇಕಾಗುವ ವಸ್ತುಗಳು
ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್
ಫಿಂಗರ್ ಪ್ರಿಂಟ್ ಸ್ಕ್ಯಾನರ್ ಮಷಿನ್
ಪ್ರಿಂಟರ್
ವೆಬ್ ಕ್ಯಾಮೆರಾ
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಹೀಗಿವೆ.. ಅರ್ಜಿದಾರರ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಅಡ್ರೆಸ್ ಪ್ರೂಫ್, ಸ್ವಯಂ ಘೋಷಣೆ ಪತ್ರ, ಬ್ಯಾಂಕ್ ಪಾಸ್ ಬುಕ್, ಶಿಕ್ಷಣದ ದಾಖಲೆಗಳು
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಬಗ್ಗೆ ಹೇಳುವುದಾದರೆ, http://kal-mys.gramaone.karnataka.gov.in/ ಈ ಲಿಂಕ್ ಗೆ ಭೇಟಿ ನೀಡುವ ಮೂಲಕ ಅರ್ಜಿ ಫಿಲ್ ಮಾಡಿ, ಅಗತ್ಯವಿರುವ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅರ್ಜಿ ಸಲ್ಲಿಸಬಹುದು. 100 ರೂಪಾಯಿ ಅರ್ಜಿ ಶುಲ್ಕ ಇರುತ್ತದೆ. 9148712473ಈ ನಂಬರ್ ಗೆ ಕರೆಮಾಡಿ ಪೂರ್ತಿ ಮಾಹಿತಿ ಪಡೆಯಬಹುದು. ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಕೊಡಗು, ಮಂಡ್ಯ, ಉಡುಪಿ, ಮೈಸೂರು ಈ ಊರುಗಳಲ್ಲಿ ಗ್ರಾಮ ಒನ್ ಕಚೇರಿ ತೆರೆಯುವ ಅವಶ್ಯಕತೆ ಇದೆ.