Govt Subsidy Schemes information: ರಾಜ್ಯ ಹಾಗೂ ಕೇಂದ್ರ ಸರ್ಕಾರ ಜನ ಸಾಮಾನ್ಯರ ಅನುಕೂಲಕ್ಕೆ ಹಾಗೂ ರೈತರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಹಲವು ಪ್ರಯೋಜನವಾಗುವಂತ ಯೋಜನೆಗಳನ್ನು ಜಾರಿಗೆ ತಂದಿದೆ, ಈ ಯೋಜನೆಯ ಲಾಭವನ್ನು ಕೆಲವರು ಮಾತ್ರ ಪಡೆದುಕೊಳ್ಳುತ್ತಾರೆ ಇನ್ನು ಬಹುತೇಕ ಮಂದಿಗೆ ಈ ಯೋಜನೆಯ ಸಂಪೂರ್ಣ ಮಾಹಿತಿ ಇರೋದಿಲ್ಲ ಹಾಗಾಗಿ ಈ ಯೋಜನೆಯನ್ನು ನೀವು ತಿಳಿದು ನಿಮ್ಮ ಆತ್ಮೀಯರಿಗೆ ಹಂಚಿಕೊಳ್ಳಿ.
ಸರ್ಕಾರವು ಗ್ರಾಮಪಂಚಾಯ್ತಿ ಕೃಷಿ ಹಾಗು ತೋಟಗಾರಿಕೆ ಇಲಾಖೆಗಳಲ್ಲಿ ಕುರಿ ಶೆಡ್, ಮೇಕೆ ಶೆಡ್, ದನದ ಕೊಟ್ಟಿಗೆ, ಕೃಷಿ ಹೊಂಡ, ಬದು ನಿರ್ಮಾಣ, ಬಚ್ಚಲು ಗುಂಡಿ ಮತ್ತು ವಿವಿಧ ಕಾಮಗಾರಿಗಳನ್ನು ಮಾಡಿಸಲು ಸಹಯಧನವನ್ನು ನೀಡುತ್ತದೆ. ಈ ಸೌಲಭ್ಯವನ್ನು ನರೇಗಾ ಯೋಜನೆಯಡಿ ಪಡೆಯಬಹುದು. ರಾಜ್ಯದ ವಿವಿಧ ತಾಲ್ಲೂಕುಗಳಲ್ಲಿ 2024-25ನೇ ಸಾಲಿನ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ವಾರ್ಷಿಕ ಕ್ರಿಯಾ ಯೋಜನೆ ತಯಾರಿಸುತ್ತಿದ್ದು, ಈ ಯೋಜನೆಯ ಸೌಲಭ್ಯವನ್ನು ನೀವು ಪಡೆಯ ಬಯಸಿದರೆ, ನಿಮ್ಮ ಹತ್ತಿರದ ಗ್ರಾಮ ಪಂಚಾಯ್ತಿ ಹಾಗೂ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆಯಲ್ಲಿ ಒಮ್ಮೆ ಭೇಟಿ ಕೊಡಿ ಇನ್ನೂ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು.
ಯಾವೆಲ್ಲ ಕಾಮಗಾರಿ ಸೌಲಭ್ಯವನ್ನು ಪಡೆಯಬಹುದು?
ಬಚ್ಚಲು ಗುಂಡಿ ₹11,000 ರೂ.ಗಳು
ಪೌಷ್ಠಿಕ ತೋಟ ₹4,915 ರೂ.ಗಳು
ದನದ ದೊಡ್ಡಿ ₹57,000 ರೂ.ಗಳು
ಕುರಿ ದೊಡ್ಡಿ ₹70,000 ರೂ.ಗಳು
ಮೇಕೆ ಶೆಡ್ ₹70,000 ರೂ.ಗಳು
ಹಂದಿ ಶೆಡ್ ₹87,000 ರೂ.ಗಳು
ಕೋಳಿ ಶೆಡ್ ₹60,000
ಇರುಳ್ಳಿ ಉಗ್ರಾಣ ಮನರೇಗಾ ₹37,138
ತೋಟಗಾರಿಕೆ ಇಲಾಖೆ ₹35,000
ಫಲಾನುಭವಿ ₹25,862
ಒಟ್ಟು ₹98,000
ಎರೆ ಹುಳು ಗೊಬ್ಬರ ತೊಟ್ಟಿ ₹20,೦೦೦
ಕೃಷಿ ಹೊಂಡ :
15X15X3 ಮೀಟರ್ ₹1,49,000
12X12X3 ಮೀಟರ್ ₹92,000
10XX10X3 ಮೀಟರ್ ₹63,000
9X9X3 ಮೀಟರ್ ₹52,000
ತೆರೆದ ಬಾವಿ ₹1,50,000
ಕೊಳವೆ ಬಾವಿ ಮರುಪೂರಣ ₹27,000
ಜಮೀನು ಸಮತಟ್ಟು ₹10,000
ಕಂದಕ ಬದು ನಿರ್ಮಾಣ ₹35,000 ದಿಂದ ₹84,000
ಈ ಸೌಲಭ್ಯವನ್ನು ನೀವು ಪಡೆಯಲು ಬಯಸಿದರೆ ನರೇಗಾ ಯೋಜನೆಯಡಿ ಪಡೆಯಬಹುದು, ಇನ್ನೂ ನಿಮ್ಮ ಬಳಿ ನರೇಗಾ ಯೋಜನೆಯ ಜಾಬ್ ಕಾರ್ಡ್ ಕೂಡ ಮುಖ್ಯವಾಗಿ ಬೇಕಾಗುತ್ತದೆ.