Govt Scheme: ಕೇಂದ್ರ ಸರ್ಕಾರವು ಇದೆ ಮೊದಲ ಬಾರಿಗೆ ಮತ್ತೊಂದು ಹೊಸ ಯೋಜನೆಗೆ ಚಾಲನೆ ನೀಡಿದೆ. ಮಹಿಳೆಯರು ಈವಾಗ ಯೋಜನೆ ಅಡಿಯಲ್ಲಿ ಹಣ ಪಡೆಯಬಹುದಾಗಿದೆ. ಕೇಂದ್ರ ಸರ್ಕಾರವು (Govt Scheme) ಜಾರಿಗೊಳಿಸಿರುವ ಮಹಿಳಾ ಸಮ್ಮಾನ್ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಹೇಗೆ ಹಣ ದೊರೆಯುತ್ತದೆ ಹೇಗೆ ಅರ್ಜಿ ಸಲ್ಲಿಸಬೇಕು ಎಂದು ಈ ಕೆಳಗಿಂನಂತೆ ತಿಳಿದುಕೊಳ್ಳಣ.
ಉಳಿತಾಯವೆಂದರೆ ಅದು ಆದಾಯವಿದ್ದಂತೆ ಹಾಗಾಗಿ
ಕೇಂದ್ರ ಹಣಕಾಸು ಸಚಿವಾಲಯವು ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ 2023 ರ ಯೋಜನೆಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ಯೋಜನೆಗೆ ಬಾಗಲಕೋಟೆಯಲ್ಲಿ ವ್ಯಾಪಾಕ ಸ್ಪಂದನೆ ನೀಡುತ್ತಿದೆ. ಈ ಯೋಜನೆಯ ಲಾಭ ಪಡೆದುಕೊಳ್ಳಲು ಅಂಚೆ ಇಲಾಖೆಗೆ ಮಹಿಳೆಯರು ಭೇಟಿ ನೀಡಿ ಈ ಯೋಜನೆಯ ಲಾಭ ಪಡೆದುಕೊಳ್ಳಲು ಮುಂದಾಗಿದ್ದಾರೆ. ಈ ಯೋಜನೆಯು ಹುಡುಗಿಯರು ಮತ್ತು ಮಹಿಳೆಯರಿಗೆ ಒಂದು ಬಾರಿಯ ಸಣ್ಣ ಉಳಿತಾಯ ಯೋಜನೆಯಾಗಿದೆ.
ಈ ಯೋಜನೆಗೆ ಕಳೆದ ಮೇ ತಿಂಗಳಿನಿಂದ ಅತೀ ಹೆಚ್ಚು ಸ್ಪಂದನೆ ದೊರೆತಿದೆ, ಪ್ರತಿ ತಾಲ್ಲೂಕಿನಲ್ಲಿ ಒಂದು ಹಳ್ಳಿಯನ್ನ ಈ ಯೋಜನೆಗಾಗಿ ಆಯ್ಕೆ ಮಾಡಿಕೊಂಡು ಆ ಹಳ್ಳಿಯಲ್ಲಿ ಕನಿಷ್ಠ 100 ಖಾತೆಯನ್ನು ತೆರೆಯಲು ಒಂದು ಮೇಳ ನೆಡೆಸಲು ಅಂಚೆ ಇಲಾಖೆ ತಯಾರಿ ನೆಡೆಸಿದೆ.ಈ ಯೋಜನೆಯಡಿಯಲ್ಲಿ 2 ವರ್ಷದ ಅವಧಿಯ ಠೇವಣಿ ಇಡುವುದಕ್ಕೆ ಮಹಿಳೆಯರಿಗೆ ಅವಕಾಶವಿದ್ದು ಕನಿಷ್ಠ 1000 ರೂಪಾಯಿಗಳಿಂದ 2 ಲಕ್ಷ ರೂಪಾಯಿಗಳ ವರೆಗೆ ಠೇವಣಿ ಇಟ್ಟರೆ ಶೇಕಡಾ 7.5 ರ ಬಡ್ಡಿ ದರವನ್ನು ನೀಡುತ್ತದೆ.
ನಿಮ್ಮ ಹಣವನ್ನು ಎರಡು (2) ವರ್ಷಗಳವರೆಗೆ ಈ ಖಾತೆಯಲ್ಲಿ ಠೇವಣಿ ಮಾಡಲಾಗುತ್ತದೆ ಮತ್ತು 2 ವರ್ಷಗಳ ನಂತರ ನಿಮ್ಮ ಸಂಪೂರ್ಣ ಠೇವಣಿ ಮತ್ತು ಬಡ್ಡಿಯನ್ನು ಸೇರಿಸುವ ಮೂಲಕ ನೀವು ಪೂರ್ಣ ಹಣವನ್ನು ಹಿಂತಿರುಗಿ ಪಡೆಯುತ್ತಿರ. ಈ ಯೋಜನೆಯನ್ನು ಮಾರ್ಚ್ 31,2025 ರ ವರೆಗೆ ಮಾತ್ರ ತೆರೆಯಬಹುದಾಗಿದೆ.
ದೇಶದಲ್ಲಿನ ಎಲ್ಲ ಮಹಿಳೆಯರು ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಈ ಯೋಜನೆಗೆ ಅರ್ಜಿ ಸಲ್ಲಿಸಲು 10 ವರ್ಷ ವಯಸ್ಸಿನ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಹೆಣ್ಣು ಖಾತೆಯನ್ನು ತೆರೆಯಬಹುದು. ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು, ಅರ್ಜಿದಾರರ ಆಧಾರ್ ಕಾರ್ಡ್ (Adhar card). ಗುರುತಿನ ಚೀಟಿ (voter Id), ಪಾಸ್ಪೋರ್ಟ್ ಸೈಜ್ ಫೋಟೋ, ಇಮೇಲ್ ಐಡಿ (e-mail ID ), ಮೊಬೈಲ್ ನಂಬರ್. 2023 ರ ಏಪ್ರಿಲ್ 1 ರಿಂದ ಮಹಿಳೆಯರು ಈ ಮಹಿಳಾ ಸಮ್ಮಾನ್ ಉಳಿತಾಯದಲ್ಲಿ ಹೂಡಿಕೆ ಮಾಡಬಹುದು. ಇದನ್ನೂ ಓದಿ Free Bus Scheme: ಉಚಿತ ಪ್ರಯಾಣ ಸೌಲಭ್ಯ ಪಡೆಯಲು ಸ್ಮಾರ್ಟ್ ಕಾರ್ಡ್ ಪಡೆಯುವ ಸುಲಭ ವಿಧಾನ