Govt Of Karnataka ಪ್ರತಿ ರೈತನ ಜಮೀನಿಗೆ ಹೋಗಲು ಒಂದು ದಾರಿ ಬೇಕೇ ಬೇಕು. ಆದರೆ ಆ ದಾರಿ ಪಡೆಯುವುದು ಯಾವಾಗಲೂ ಸುಲಭ ಆಗಿರುವುದಿಲ್ಲ. ರೈತರು ದಾರಿ ಮಾಡಿಕೊಳ್ಳುವುದಕ್ಕೆ ಸರ್ಕಾರದ ಸಹಾಯವನ್ನು ಪಡೆಯಬಹುದು. ಹಾಗಿದ್ದರೆ ಸರ್ಕಾರದ ಯಾವ ಇಲಾಖೆಯಿಂದ ಈ ಸಹಾಯ ಪಡೆಯಬಹುದು? ಯಾವ ಅಧಿಕಾರಿಗಳು ಈ ಕೆಲಸಕ್ಕೆ ಸಹಾಯ ಮಾಡುತ್ತಾರೆ? ಎಲ್ಲವನ್ನು ಇಂದು ತಿಳಿಸಿಕೊಡುತ್ತೇವೆ..
ನಮ್ಮ ರಾಜ್ಯದಲ್ಲಿ ಭೂ ಕಂದಾಯದ ವಿಚಾರದಲ್ಲಿ ಸ್ಟ್ರಿಕ್ಟ್ ಆಗಿ ಇಡುವುದಕ್ಕೆ, ಎಲ್ಲವೂ ಚೆನ್ನಾಗಿ ನಡೆಯಬೇಕು ಎಂದು ಕರ್ನಾಟಕ ಸರ್ಕಾರವು ಭೂ ಕಂದಾಯ ವಿಚಾರಕ್ಕೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಸರ್ಕಾರ ಹೊಸದಾಗಿ ತಂದಿರುವ ನಿಯಮಗಳನ್ನು ಕಡ್ಡಾಯವಾಗಿ ಜಾರಿಗೆ ತಂದರೆ, ರೈತರಿಗೆ ಅನುಕೂಲವಾಗುತ್ತದೆ. 1964ರ ಕರ್ನಾಟಕ ಲ್ಯಾನ್ಡ್ ರೆವೆನ್ಯೂ ಆಕ್ಟ್ ನಲ್ಲಿ ಪ್ರತಿ ಜಮೀನಿಗೆ ಹೋಗಿಬರುವ ದಾರಿಯ ಹಕ್ಕುಗಳ ಬಗ್ಗೆ ತಿಳಿಸಲಾಗಿದೆ.
ಇದಕ್ಕೆ ಕೆಲವು ಇತಿ ಮಿತಿ ಕೂಡ ಇದ್ದು, ಮೊದಲಿದ್ದ ಬ್ರಿಟಿಷ್ ಸರ್ಕಾರವು ಜಮೀನಿನ ಮೂಲ ಸರ್ವೇ ಮಾಡಿಸಿದಾಗ, ಬಂಡಿ ದಾರಿ ಮತ್ತು ಕಾಲು ದಾರಿಗಳನ್ನು ಪ್ರತ್ಯೇಕವಾಗಿ ಗುರುತು ಮಾಡಿ, ಅದರ ವಿಸ್ತೀರ್ಣ ಲೆಕ್ಕ ಹಾಕಿ, ಬೇರೆ ರೈತರು ಸುಲಭವಾಗಿ ಓಡಾಡುವ ಹಾಗೆ ಮಾಡಿಕೊಟ್ಟಿದೆ. ಆದರೆ ಈಗ ಮೊದಲಿನ ಹಾಗಿಲ್ಲ, ಜಮೀನುಗಳಲ್ಲಿ ಸಣ್ಣ ಪ್ಲಾಟ್ ಗಳು ಇದೆಲ್ಲವೂ ಜಾಸ್ತಿ ಆಗಿದ್ದು, ಅದರಿಂದ ಹಿಸ್ಸಾ ಸಂಖ್ಯೆ ಕೂಡ ಜಾಸ್ತಿಯಾಗಿದೆ. ಹೀಗಾದಾಗ ದಾರಿ ಬಗ್ಗೆ ಕೂಡ ಸಮಸ್ಯೆ ಉಂಟಾಗುತ್ತದೆ.
ಹಳ್ಳಿಗಳಲ್ಲಿ ಸಾಮಾನ್ಯವಾಗಿ ಅಗೋದೇನು ಅಂದ್ರೆ ನಕ್ಷೆಯ ಪ್ರಕಾರ ಓಡಾಡುವುದಕ್ಕೆ ಮಾರ್ಗ ಇದ್ದರು ಕೂಡ, ಭೂಮಿಯ ಮಾಲೀಕರು ರೈತರು ಆ ಜಾಗದಲ್ಲಿ ಓಡಾಡೋದನ್ನ ಅಡ್ಡಪಡಿಸಿ, ಅವರಿಗೆ ತೊಂದರೆ ನೀಡುತ್ತಿರುತ್ತಾರೆ ಅಥವಾ ಆ ದಾರಿ ಮುಚ್ಚಿಹೋಗಿರಬಹುದು. ಅಥವಾ ಬಹಳ ವರ್ಷಗಳಿಂದ ದಾರಿ ಇಲ್ಲದೆ ರೈತರು ಬೇರೆ ರೂಢಿ ದಾರಿಗಳನ್ನು ಬಳಸುತ್ತಿರಬಹುದು. ಈ ರೀತಿ ಸಮಸ್ಯೆ ಅನುಭವಿಸುತ್ತಿರುವ ರೈತರಿಗೆ ಸರ್ಕಾರದಿಂದ ಒಂದು ಗುಡ್ ನ್ಯೂಸ್ ಸಿಕ್ಕಿದೆ.
ಹೊಸ ಮಾರ್ಗಸೂಚಿಯಲ್ಲಿ ಏನಿದೆ ಎಂದು ಹೇಳುವುದಾದರೆ..
1982ರ The Indian Easement Act ನ ಅನುಸಾರ ಪ್ರತಿ ಜಮೀನಿಗೂ ಹೋಗಿಬರಲು ದಾರಿ ಇರುತ್ತದೆ. ಹೊಲದ ದಾರಿಯ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು, ರೈತರು ತಹಸೀಲ್ದಾರ್ ಅವರ ಬಳಿ ದೂರು ಕೊಡಬೇಕಾಗುತ್ತದೆ. ಮೊದಲಿಗೆ ಜಿಲ್ಲಾ ಕಚೇರಿಗೆ ಹೋಗಿ ದೂರು ಕೊಡಬೇಕಿತ್ತು, ಆದರೆ ಈಗ ಅದರ ಅವಶ್ಯಕತೆ ಇಲ್ಲ. ತಾಲ್ಲೂಕಿನ ತಹಸೀಲ್ದಾರ್ ಕಛೇರಿಯಲ್ಲೇ ದೂರು ಕೊಡಬಹುದು..
ಒಂದು ವೇಳೆ ದಾರಿ ಮುಚ್ಚಿ ಹೋಗಿದ್ದು ಅಥವಾ ಗೊತ್ತಿಲ್ಲದೆ ರೂಢಿ ದಾರಿ ಬಳಸುತ್ತಿದ್ದರೆ ಅವರು ಕೂಡ ತಹಸೀಲ್ದಾರ್ ಅವರ ಬಳಿ ಹೋಗಿ ಹೊಲಕ್ಕೆ ದಾರಿ ಕಲ್ಪಿಸಿಕೊಡಿ ಎಂದು ಮನವಿ ಮಾಡಿಕೊಳ್ಳಬಹುದು. ಒಂದು ವೇಳೆ ದಾರಿಗೆ ಸಂಬಂಧಿಸಿದ ಹಾಗೆ ರೈತರಿಗೆ ಜಗಳಗಳಿಂದ ತೊಂದರೆ ಆಗುತ್ತಿದ್ದರೆ, ಆಗಲು ಕೂಡ ತಹಶೀಲ್ದಾರ್ ಅವರ ಬಳಿ ದೂರು ನೀಡಿ ಸಮಸ್ಯೆಯನ್ನು ಸರಿಪಡಿಸಿಕೊಳ್ಳಬಹುದು