Govt Loan Scheme for Women’s: ಮಹಿಳೆಯರಿಗೆ ಸರ್ಕಾರ ಈಗ ಒಂದು ದೊಡ್ಡ ಸುದ್ದಿಯನ್ನೇ ನೀಡಿದೆ. ಅದೇನು ಎಂದರೆ ಎಲ್ಲಾ ಮಹಿಳೆಯರಿಗೆ ಈಗ 2ಲಕ್ಷದವರೆಗೂ ಬಡ್ಡಿರಹಿತ ಸಾಲ ನೀಡುವ ನಿರ್ಧಾರ ಮಾಡಿದೆ. ಇದಕ್ಕಾಗಿ 70,427 ಕೋಟಿ ರೂಪಾಯಿ ನೀಡಲು ಸಿದ್ಧವಾಗಿದೆ ಸರ್ಕಾರ. ಈ ಲೋನ್ ನಗ್ಗೆ ಪೂರ್ತಿ ಮಾಹಿತಿಯನ್ನು ತಿಳಿಸುತ್ತೇವೆ ನೋಡಿ. ಮಹಿಳೆಯರಿಗಾಗಿ ಸರ್ಕಾರವು ಈಗಾಗಲೇ ಸಾಕಷ್ಟು ಯೋಜನೆಗಳನ್ನ ಜಾರಿಗೆ ತಂದಿದೆ.
ಮಹಿಳಾ ಸಬಲೀಕರಣಕ್ಕೆ ಪ್ರೋತ್ಸಾಹ ಸಹ ನೀಡುತ್ತಿದೆ. ಮಹಿಳೆಯರು ಮತ್ತೊಬ್ಬರ ಸಹಾಯ ಇಲ್ಲದೆ, ಬದುಕಬೇಕು ಎಂದು ಅವರ ಕೌಶಲ್ಯಾಭಿವೃದ್ಧಿಗಾಗಿ ಕೂಡ ಸಹಾಯ ಮಾಡುತ್ತಿದೆ. ಹೀಗೆ ಮಹಿಳಾಭಿವೃದ್ಧಿಗೆ ಸರ್ಕಾರ ಹೆಚ್ಚು ಒತ್ತು ನೀಡುತ್ತಿದ್ದು, ಸ್ರೀಶಕ್ತಿ ಸಂಘಟನೆಗಳಿಗೆ 2 ಲಕ್ಷ ರೂಪಾಯಿಯವರೆಗು ಬಡ್ಡಿರಹಿತ ಸಾಲವನ್ನು ನೀಡುತ್ತಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.
Govt Loan Scheme for Women’s
ನವಶಕ್ತಿ ಸಂಭ್ರಮ ಮಹಿಳೆಯರ ಸ್ವಾವಲಂಬಿ ಬದುಕಿಗೆ ನಮ್ಮ ಸರ್ಕಾರವು ಬೆಂಬಲವಾಗಿ ನಿಂತಿದ್ದು, ಸ್ತ್ರೀಶಕ್ತಿ ಸಂಘಗಳ ಮೂಲಕ ನೆರವು ಪಡೆದ ಮಹಿಳೆಯರು ಗುಡಿ ಕೈಗಾರಿಕೆ, ಕಸೂತಿ, ಚಿಕ್ಕಪುಟ್ಟ ವ್ಯಾಪಾರ ವಹಿವಾಟು ಸೇರದಂತೆ ಆದಾಯ ಬರುವ ವೃತ್ತಿಯಲ್ಲಿ ತೊಡಗಿಸಿಕೊಂಡು ಕೌಟುಂಬಿಕ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಸ್ತ್ರೀ ಶಕ್ತಿ ಆರಾಧನೆಯ ಈ ನವರಾತ್ರಿಯ ಶುಭ ಸಂದರ್ಭದಲ್ಲಿ ನಮ್ಮ ಸರ್ಕಾರವು ಮಹಿಳಾ ಸಬಲೀಕರಣಕ್ಕೆ ಬದ್ಧವಾಗಿದ್ದು, ಮಹಿಳೆಯರ ಏಳಿಗೆಗಾಗಿ ಹಗಲಿರುಳು ಶ್ರಮಿಸುತ್ತಿದೆ..” ಎಂದು ಟ್ವೀಟ್ ಮಾಡಿದ್ದಾರೆ ಲಕ್ಷ್ಮೀ ಹೆಬ್ಬಾಳ್ಕರ್.
ನವರಾತ್ರಿ ಗಾಗಿ ಈ ವಿಶೇಷ ಸೌಲಭ್ಯವನ್ನು ಜಾರಿಗೆ ತಂದಿದ್ದು, ರಾಜ್ಯ ಸರ್ಕಾರ ಇದಕ್ಕಾಗಿ 70,427 ಸಾವಿರ ಕೋಟಿ ರೂಪಾಯಿಗಳನ್ನು ಬಜೆಟ್ ನಲ್ಲಿ ಮೀಸಲಾಗಿ ಇಡಲಾಗಿದೆ. ನಮ್ಮ ರಾಜ್ಯದಲ್ಲಿ ಒಟ್ಟು 1.65 ಲಕ್ಷ ಸ್ರೀಶಕ್ತಿ ಗುಂಪುಗಳಿಗೆ 25 ಸಾವಿರ ಆತರ್ವ ನಿಧಿ ಹಾಗೂ ಸ್ರೀಶಕ್ತಿ ಸಂಘಗಳಿಗೆ 2 ಲಕ್ಷ ರೂಪಾಯಿಗಳ ವರೆಗು ಬಡ್ಡಿ ಇಲ್ಲದೆ ಸಾಲ ಕೊಡಲಾಗುತ್ತದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಅವರು ಈ ಯೋಜನೆಯ ಬಗ್ಗೆ ತಿಳಿಸಿದ್ದಾರೆ.
ನಮ್ಮ ರಾಜ್ಯದಲ್ಲಿ 2000-01ರ ವರ್ಷದಲ್ಲಿ ಸ್ರೀಶಕ್ತಿ ಯೋಜನೆಗಳು ಶುರುವಾಯಿತು. ನಮ್ಮ ರಾಜ್ಯದ ಒಟ್ಟು 176 ತಾಲ್ಲೂಕುಗಳಲ್ಲಿ ಮತ್ತು ಸಿಟಿಗಳಲ್ಲಿ ಸ್ರೀಶಕ್ತಿ ಸಂಘಗಳನ್ನು ಸ್ಥಾಪಿಸಲಾಗಿದೆ. ಮಹಿಳೆಯರು ಸಬಲೀಕರಣ ಆಗಬೇಕು, ಮಹಿಳೆಯರು ತಮ್ಮ ಕುಟುಂಬವನ್ನು ನಡೆಸಲು ಸಹಾಯವಾಗಲಿ, ಅವರ ಕೌಶಲ್ಯತೆ ಅಭಿವೃದ್ಧಿಗಾಗಿ ಟ್ರೇನಿಂಗ್ ಸಹ ನೀಡಲಾಗುತ್ತದೆ. ಹಾಗಾಗಿ ಎಲ್ಲಾ ಮಹಿಳೆಯರು ಸಹ ಈ ಯೋಜನೆಯ ಸೌಲಭ್ಯ ಪಡೆದುಕೊಳ್ಳಬಹುದು.